ಕೆ.ಆರ್.ನಗರ: ಶಾಸಕ ಡಿ.ರವಿಶಂಕರ್ ರವರ ಯೋಗ್ಯತೆ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ನಿಮ್ಮ ಯೋಗ್ಯತೆ ಏನೆಂದು ಮೊದಲು ತಿಳಿದುಕೊಂಡು ನಂತರ ಬೇರೆ ಅವರ ಬಗ್ಗೆ ಮಾತನಾಡುವುದನ್ನು ಕಲಿಯಿರಿ ಎಂದು ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಉದಯ್ ಶಂಕರ್ ಜೆಡಿಎಸ್ ಮುಖಂಡರಿಗೆ ಹೇಳಿದರು.
ಸಾಲಿಗ್ರಾಮ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕುರಿತು ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು ಈಗಾಗಲೇ ಪಂಚ ಯೋಜನೆಗಳು ಜನರ ಸಮಸ್ಯೆಗೆ ದಾರಿ ದೀಪಗಳಾಗಿವೆ ಅಂತಹ ಒಂದು ಯೋಜನೆಯನ್ನು ನಿಮ್ಮ ಸರ್ಕಾರ ಕೊಡಲಿಲ್ಲ ಆದರೆ ಇಲ್ಲಿಯ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುತ್ತೀರಿ. ಸಾಲಿಗ್ರಾಮ ತಾಲೂಕು ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಯೋಜನೆಗಳು ಹೆಚ್ಚು ಒಂದೊಮ್ಮೆ ಪರಿಶೀಲಿಸಿಕೊಳ್ಳಿ. ಜೊತೆಗೆ ಸಾಲಿಗ್ರಾಮ ಅಭಿವೃದ್ಧಿಗೆ ಯಾವ ಸರ್ಕಾರವಾದರೇನು ಅಭಿವೃದ್ಧಿ ಆಗಬೇಕು ಅದನ್ನು ಬಯಸುವುದು ಮುಖಂಡರ ಕರ್ತವ್ಯ ಕಾಂಗ್ರೆಸ್ ಪಕ್ಷದಿಂದ ಆಗುತ್ತಿರುವ ಅಭಿವೃದ್ಧಿಯನ್ನು ಸಹಿಸದೆ ಜೆಡಿಎಸ್ ಕಾರ್ಯಕರ್ತರು ಆಗಬೇಕಿರುವ ಕೆಲಸಕ್ಕೆ ಅಡ್ಡಿಪಡಿಸುವ ಹೇಳಿಕೆಗಳನ್ನು ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಈಗಾಗಲೇ ನಮ್ಮ ಶಾಸಕರು ಪ್ರತಿ ಮಂಗಳವಾರ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲ ಗ್ರಾಮಗಳಲ್ಲಿ ಮನೆ ಬಾಗಿಲಿಗೆ ಬಂತು ಸರ್ಕಾರ ಎಂಬ ಕಾರ್ಯಕ್ರಮದಲ್ಲಿ ಸರ್ಕಾರದ ಸೇವೆಯನ್ನು ಜನರಿಗೆ ನೀಡುವಂತಹ ಕೆಲಸ ಮಾಡುತ್ತಿದ್ದಾರೆ ಇದನ್ನು ಸಹಿತದೇ ಮತ್ತೆ ಟೀಕೆಗಳನ್ನು ಶುರು ಮಾಡಿದ್ದೀರಿ ಹೀಗೆ ಮಾಡುತ್ತಿದ್ದರೆ ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಜನರು ಮತ್ತೊಮ್ಮೆ ನಿಮಗೆ ತಕ್ಕಉತ್ತರ ನೀಡುತ್ತಾರೆ ಎಂದು ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದರು.
ನಂತರ ಕಾಂಗ್ರೆಸ್ ಅಧ್ಯಕ್ಷ ಪ್ರಭಾಕರ್ ಮಾತನಾಡಿ ಅಗ್ನಿಶಾಮಕದಳ ಠಾಣೆಗೆ ಜೆಡಿಎಸ್ ಪಕ್ಷದಿಂದ ಹಣ ಮಂಜೂರಾಗಿದ್ದು ಆದರೆ ನೀವು ಗುದ್ದಲಿ ಪೂಜೆ ಮಾಡಿದ್ದೀರಿ ಎಂದು ಪತ್ರಿಕೆ ಹೇಳಿಕೆಯಲ್ಲಿ ಬಾಯಿ ಚಪ್ಪಲಕ್ಕೆ ಮಾತನಾಡಿದ್ದೀರಲ್ಲ
ಸ್ವಾಮಿ. ಮೊದಲು ದಾಖಲೆ ಇಟ್ಟುಕೊಂಡು ಮಾತನಾಡಿ ನಮ್ಮ ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನ ತಂದು. ನಮ್ಮ ಶಾಸಕರು ಗುದ್ದಲಿ ಪೂಜೆ ಮಾಡಿದ್ದಾರೆ. ನಿಮ್ಮ ರೀತಿ ಸುಳ್ಳು ಹೇಳಿಕೊಂಡು ತಿರುಗುವ ಸಣ್ಣತನದ ಬುದ್ದಿ ನಮಗೆ ಬಂದಿಲ್ಲ.
ಕಳೆದ ಬಾರಿ ನಿಮ್ಮ ಶಾಸಕರು ಮಾಡಿರುವ ಸಾ ರಾ ಸಾಧನೆ ಎಂಬ ಪುಸ್ತಕವನ್ನು ಮೊದಲು ತೆಗೆದು ನೋಡಿ, ಎಷ್ಟು ಸುಳ್ಳುಗಳನ್ನು ಹೇಳಿದ್ದೀರಿ ಎಂದು, ಕಾಮಗಾರಿಯೇ ಆಗದೆ ಪುಸ್ತಕದಲ್ಲಿ ಆಗಿದೆ ಎಂದು ನಮೂದಿಸಿ ಸುಳ್ಳು ಹೇಳಿದ್ದೀರಿ. ಗುದ್ದಲಿ ಪೂಜೆ ಮಾಡಿದ್ದೀರಿ.
ಜನ ಮೆಚ್ಚಿಸಲು ಎಲ್ಲಾ ಕಡೆ ಗುದ್ದಲಿ ಪೂಜೆ ಮಾಡಿದ್ದೀರಲ್ಲ. ಅನುದಾನವೇ ಬರದೇ ಗುದ್ದಲಿ ಪೂಜೆ ಹೇಗೆ ಮಾಡಿದ್ದೀರಿ. ಅದು ಜನಕ್ಕೆ ಎಲ್ಲಿ ಗೊತ್ತಾಗಿ ಬಿಡುತ್ತೋ ಎಂದು ಈಗ ಕಾಂಗ್ರೆಸ್ನವರು ನಮ್ಮ ಅನುದಾನವನ್ನು ವಾಪಸ್ ಪಡೆದುಕೊಂಡಿದ್ದಾರೆ ಎಂದು ಆರೋಪ ಮಾಡುತ್ತಿದ್ದೀರಿ.
ಬಂದಿರುವ ನಮ್ಮ ಅನುದಾನವನ್ನು ಸರ್ಕಾರ ತಾಲೂಕಿನಿಂದ ಯಾವುದನ್ನು ವಾಪಸ್ ಪಡೆದುಕೊಂಡಿಲ್ಲ. ಆದರೆ ನಾವು ನಿಮ್ಮತರ ಕೀಳು ಮಟ್ಟದ ವೈಯಕ್ತಿಕ ಹೇಳಿಕೆಗಳನ್ನು ಕೊಡುವುದಿಲ್ಲ. ಯಾರು ಯೋಗ್ಯತೆ ಬಗ್ಗೆಯೂ ಮಾತನಾಡಲ್ಲ ಅಂತ ಸಂಸ್ಕೃತಿ ನಮ್ಮ ಕಾಂಗ್ರೆಸ್ ಕಾರ್ಯಕರ್ತರದ್ದು ಅಲ್ಲ ಎಂದು ತಿರುಗೇಟು ನೀಡಿದರು.
ಸಭೆಯಲ್ಲಿ ಡಿಸಿಸಿ ಸದಸ್ಯ ಅಶ್ವಥ್ ನಾರಾಯಣ, ಪ್ರಥಮ ದರ್ಜೆ ಕಾಲೇಜು ಸಿಡಿಸಿ ಸದಸ್ಯ ಪರೀಕ್ಷಿತ್. ಎಸ್ ಕೆ ಪ್ರಭಾಕರ್, ಮಾಜಿ ಗ್ರಾಪಂ ಉಪಾಧ್ಯಕ್ಷ ಡಿ.ಮನುಗನಹಳ್ಳಿ ದೇವರಾಜ್, ನವೀನ, ತಂದ್ರೆಅಂಕನಹಳ್ಳಿ ಬಸವರಾಜು ಸೇರಿದಂತೆ ಇತರರು ಹಾಜರಿದ್ದರು.