ಇಂಡಿ: ಸುಕ್ಷೇತ್ರ ಉಜ್ಜೇನ್ನಿ ಶ್ರೀ ಮರುಳಸಿದ್ದೇಶ್ವರ ದೇವರ ದರ್ಶನ ಪಡೆಯಲು ಭಕ್ತರ ಬೇಡಿಕೆಯಂತೆ ಹಾಗೂ ಇಂಡಿ ಮತಕ್ಷೇತ್ರದ ಶಾಸಕರಾದ ಶ್ರೀ ಯಶವಂತರಾಯಗೌಡ ಪಾಟೀಲ ಅವರ ಆದೇಶದಂತೆ ಇದೆ ದಿನಾಂಕ 29-12-2024 ರಂದು ಇಂಡಿ ಉಜ್ಜೇನ್ನಿ ಬಸ್ಸು ಮತ್ತೆ ಪುನರಾರಂಭ ಮಾಡಲಾಗಿದೆ ಎಂದು ಕಲ್ಯಾಣ ಕರ್ನಾಟಕ ಸಾರಿಗೆ ರಸ್ತೆ ಇಲಾಖೆ ಇಂಡಿ ಘಟಕ ವ್ಯವಸ್ಥಾಪಕರು ತಿಳಿಸಿದ್ದಾರೆ.ಈ ಮೊದಲು ಇಂಡಿ ಉಜ್ಜೇನ್ನಿ ಬಸ್ಸು ಸಂಚಾರ ಮಾಡುತ್ತಿತ್ತು ಆದರೆ ಕಾರಣಾಂತರದಿಂದ ಬಂದ ಮಾಡಲಾಯಿತು.ಇದೆ ದಿನಾಂಕ 25-12-2024 ಇಂಡಿ ತಾಲ್ಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಜೋಡಗುಡಿಯ ಕಾರ್ತಿಕ ಮಾಸದ ಶ್ರೀ ಮರುಳಸಿದ್ದೇಶ್ವರ ಜಾತ್ರೆ ನಿಮಿತ್ತವಾಗಿ ಸರ್ವಧರ್ಮ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯವನ್ನು ವಹಿಸಿದ ಶ್ರೀ ಉಜ್ಜೇನ್ನಿ ಜಗದ್ಗುರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರ ಗಮನಕ್ಕೆ ತಂದ್ದಿದರು, ಇದಕ್ಕೆ ಸ್ಪಂದಿಸಿದ ಶಾಸಕರು ಮತ್ತೆ ಇಂಡಿ ಉಜ್ಜೇನ್ನಿ ಬಸ್ಸು ಪ್ರಾರಂಭಿಸಲು ಆದೇಶಿಸಿದ್ದರು.ಅದರಂತೆ ಇಂದು ಬಸ್ಸು ಪ್ರಾರಂಭಿಸಲಾಗಿದೆ.ಅದರಂತೆ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮಕ್ಕೆ ಇಂಡಿ ಉಜ್ಜೇನ್ನಿ ಬಸ್ಸು ಜೋಡಗುಡಿ ಬರುತ್ತಿದ್ದಂತೆ ನೂರಾರು ಜನ ಸೇರಿ ಶ್ರೀ ಮರುಳಸಿದ್ದೇಶ್ವರ ದೇವಾಸ್ಥಾನದ ಹತ್ತಿರ ಬಸ್ಸು ತಡೆದು ಬಸ್ಸಿಗೆ ವೀಶಷ ಪೂಜೆ ಸಲ್ಲಿಸಿ, ಜೋಡಗುಡಿ ಸಾರಿಗೆ ನಿಯಂತ್ರಣ ಅಧಿಕಾರಿ ಸುರೇಶ ಚನಗೊಂಡ,ಬಸ್ಸು ಚಾಲಕ ಮಲ್ಲಿಕಾರ್ಜುನ ಲೋಣಿ ಹಾಗೂ ನಿರ್ವಾಹಕ ಪಂಡಿತ ರಾಠೋಡ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಬಸ್ಸು ಪ್ರತಿ ನಿತ್ಯ ಇಂಡಿ ಯಿಂದ ಬೆಳಿಗ್ಗೆ 07-30 ಹೋರಟು ತಡವಲಗಾ ವಿಜಯಪೂರ ಆಲಮಟ್ಟಿ ಇಲಕಲ್ ಕುಷ್ಟಗಿ ಹೊಸಪೇಟೆ ಮಾರ್ಗವಾಗಿ ಉಜ್ಜೇನ್ನಿ ತಲುಪುವುದು, ಮಾರನೇದಿನ ಬೆಳಿಗ್ಗೆ 07-30 ಗಂಟೆಗೆ ಉಜ್ಜೇನ್ನಿ ಯಿಂದ ಹೊರಟು ಸಂಜೆ ನಾಲ್ಕು ಗಂಟೆಗೆ ಇಂಡಿ ತಲುಪುವುದು.ಈ ಸಂದರ್ಭದಲ್ಲಿ ಬಾಬುಸಾಹುಕಾರ ಮೇತ್ರಿ, ತಮ್ಮಣ್ಣ ಪೂಜಾರಿ, ಅಶೋಕ ಮಿರ್ಜಿ,ಸಾಹೇಬಗೌಡ ಇಂಡಿ, ಲಕ್ಷ್ಮಣ್ ಖಸ್ಕಿ, ರಾಜು ಮಿರ್ಜಿ, ಚನ್ನಪ್ಪ ಮಿರಗಿ ಶೇಂಕ್ರಪ್ಪ ರೂಗಿ,ಸುರೇಶ ಗೊಳ್ಳಗಿ, ಬಸವರಾಜ ಚವಡಿಹಾಳ, ಪ್ರಕಾಶ್ ಮಿರಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
POST
ಧನುಷೋಟಿ ಜಲಪಾತೋತ್ಸವ ಕಾರ್ಯಕ್ರಮ
ಮೈಸೂರು ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಧನುಷೋಟಿ ಜಲಪಾತೋತ್ಸವ ಕಾರ್ಯಕ್ರಮವನ್ನು ನವೆಂಬರ್ 30 ಹಾಗೂ ಡಿಸೆಂಬರ್ 1 ರಂದು ಎರಡು ದಿನಗಳ ಕಾಲ ಸಾಲಿಗ್ರಾಮ ತಾಲ್ಲೂಕಿನ ಶ್ರೀರಾಮ ದೇವಸ್ಥಾನದ ಆವರಣದ ಚುಂಚನಕಟ್ಟೆಯ ಅವರಣದಲ್ಲಿ ಸಂಜೆ 6.30 ಕ್ಕೆ ಧನುಷೋಟಿ ಜಲಪಾತೋತ್ಸವ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಸಮಾಜ ಕಲ್ಯಾಣ ಇಲಾಖಾ ಸಚಿವರಾದ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ ರವರು ನೆರವೇರಿಸಲಿದ್ದಾರೆ ಜೊತೆಯಾಗಿ ಘನ ಸರ್ಕಾರದ ಹಲವಾರು ಸಚಿವರು ಹಾಗೂ ಶಾಸಕರು ಉಪಸ್ಥಿತರಿರುತ್ತಾರೆ. ದಿನಾಂಕ :30-11-2024 4.30 00 5.00 ಗಂಟೆಯವರೆಗೆ ಬಸವಯ್ಯ(ಲಕ್ಷಿತಾಮ್) ಸಾಲಿಗ್ರಾಮ ಇವರ ತಂಡದಿಂದ ಜನಪದ ಝೇಂಕಾರ ಸಂಜೆ 5.00 ರಿಂದ 6.30 ರವರೆಗೆ ಡಾ.ಕಾ.ರಾಮೇಶ್ವರಪ್ಪ ಮತ್ತು ತಂಡದ ಇನಿದನಿ ಮಣ್ಣಮಕ್ಕಳ ಹೊನ್ನಪದಗಳ ಬಳಗ ಮೈಸೂರು ಇವರ ತಂಡದಿಂದ ಕನ್ನಡ ಸಂಗೀತ ವೈಭವ ಕಾರ್ಯಕ್ರಮ ರಾತ್ರಿ 7.30 ರಿಂದ 9.30 ರವರೆಗೆ ಖ್ಯಾತ ಸಂಗೀತ ನಿರ್ದೇಶಕರು ಮತ್ತು ಗಾಯಕರುಗಳಾದ ರಘು ದೀಕ್ಷಿತ್ ಮತ್ತು ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ದಿನಾಂಕ : 01-12-2024 4.30 80 5.00 ಗಂಟೆಯವರೆಗೆ ರಶ್ಮಿ ಮತ್ತು ತಂಡ ಮೈಸೂರು ರವರಿಂದ ಜನಪದ ಸಂಗೀತ ಕಾರ್ಯಕ್ರಮ ಸಂಜೆ 5 ರಿಂದ 6.30 ರವರೆಗೆ ಯು.ರಾಜೇಶ್ ಪಡಿಯಾರ್ ಹಾಗೂ ರಶ್ಮಿ ಚಿಕ್ಕಮಗಳೂರು ಮತ್ತು ತಂಡ ಮೈಸೂರು ರವರಿಂದ ಸಿ.ಅಶ್ವಥ್ ಗೀತೆಗಳ ಗಾಯನ (ಕನ್ನಡವೇ ಸತ್ಯ-ಕನ್ನಡವೇ ನಿತ್ಯ) ಸಂಜೆ 6.30 ರಿಂದ 7.30 ರವರೆಗೆ ಖ್ಯಾತ ನಟಿ ಪುಷ್ಪಾವತಿ ಖ್ಯಾತಿಯ ನಿಮಿಕಾ ರತ್ನಾಕರ್, ಖ್ಯಾತ ಕಿರುತೆರೆ ನಟಿ ಅಗ್ನಿಸಾಕ್ಷಿ ಖ್ಯಾತಿಯ ಪ್ರಿಯಾಂಕ ಡ್ರಮ್ಸ್ ಇವೆಂಟ್ಸ್ ಅಂಡ್ ಫ್ಯಾಷನ್ಸ್ ಬೆಂಗಳೂರು ರವರಿಂದ ಸ್ಯಾಂಡಲ್ವುಡ್ ನೈಟ್ಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಾತ್ರಿ 7.30 ರಿಂದ 9.30 ರವರೆಗೆ ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕರುಗಳಾದ ಮಣಿಕಾಂತ್ ಕದ್ರಿ ಮತ್ತು ಹಂಸಿಕಾ ಅಯ್ಯರ್ ತಂಡದಿಂದ ಆಯೋಜಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜಲಪಾತೋತ್ಸವ ನಡೆಯಲಿರುವ ಹಿನ್ನೆಲೆ ಚುಂಚನಕಟ್ಟೆ ಮುಖ್ಯ ವೃತ್ತ ದೇವಾಲಯದ ರಸ್ತೆ ಮತ್ತು ದೇವಾಲಯದ ಸುತ್ತಮುತ್ತ ವಿದ್ಯುತ್ ದೀಪಾಲಂಕಾರ ಮಾಡುತ್ತಿದ್ದು, ಇದರ ಜೊತೆಗೆ ವೇದಿಕೆ ನಿರ್ಮಾಣ ಕಾರ್ಯವನ್ನು ಮಾಡುವುದರ ಜೊತೆಗೆ ಅರ್ಥಪೂರ್ಣವಾಗಿ ನವಂಬರ್ 30 ಡಿಸೆಂಬರ್ 01 ಚುಂಚನಕಟ್ಟೆ ಜಲಪಾತೋತ್ಸವ ಹಮ್ಮಿಕೊಳ್ಳಲಾಗುತ್ತಿದೆ ಕಾರ್ಯಕ್ರಮದ ಆವರಣದಲ್ಲಿ ವಸ್ತು ಪ್ರದರ್ಶನ ಹಾಗೂ ವಿವಿಧ ಮಳಿಗೆಗಳನ್ನು ತೆರೆಯಲಾಗುವುದು ಜಲಪಾತೋತ್ಸವ ಸಂಬಂಧ ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಜಲಪಾತೋತ್ಸವಕ್ಕೆ ಆಗಮಿಸುವ ಪ್ರವಾಸಿಗರಿಗೆ ಹೆಲ್ತ್ ಕ್ಯಾಂಪ್ ಮಾಡುವ ಮೂಲಕ ಉಚಿತ ಆರೋಗ್ಯ ತಪಾಸಣೆ ಮಾಡುವಂತೆ ಕ್ರಮಕೈಗೊಳ್ಳಲಾಗಿದೆಈಗಾಗಲೇ ಆವರಣದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಹಾಗೂ ಬರುವ ಭಕ್ತಾದಿಗಳಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. ನವೆಂಬರ್ 30 ಮತ್ತು ಡಿಸೆಂಬರ್ 1 ರಂದು ನಡೆಯುವ ಎರಡು ದಿನಗಳ ಧನುಷೋಟಿ ಜಲಪಾತೋತ್ಸವಕ್ಕೆ ಕ್ಷೇತ್ರದ ಶಾಸಕನಾಗಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕಿನ ಜನತೆಯನ್ನು ಈ ಮೂಲಕ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಸ್ವಾಗತಿಸುತ್ತೇನೆ. ತಾಲ್ಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಈ ಮೂಲಕ ಕೋರಿದೆ
ಕರ್ನಾಟಕ ಭೀಮಸೇನೆ ವಿಜಯಪುರ ಜಿಲ್ಲಾ ಸಮಿತಿ ವತಿಯಿಂದ ಸರಕಾರಿ ಪ್ರೌಢಶಾಲಾ ಮಕ್ಕಳಿಗೆ ಅಂಬೇಡ್ಕರ್ ಅವರ ಜೀವನ ಚರಿತ್ರೆ ಪುಸ್ತಕ ವಿತರಣೆ ಮಾಡಲಾಯಿತು
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬಳಬಟ್ಟಿ ಗ್ರಾಮದಲ್ಲಿ 75 ನೇ ಅಮೃತ ಮಹೋತ್ಸವ ಸಂವಿಧಾನ ದಿನಾಚರಣೆ . ಈ ವೇಳೆ ಮಾತನಾಡಿದ ಶಾಲಾ ವಿದ್ಯಾರ್ಥಿ ಸಂಗೀತ.ಪಾಟೀಲ್ ಸಂವಿಧಾನ ಸಮರ್ಪಣಾ ದಿನಾಚರಣೆವಿಶ್ವದಲ್ಲೇ ಅತ್ಯಂತ ಶ್ರೇಷ್ಠವಾದ ಭಾರತದ ಸಂವಿಧಾನವು ಸರ್ವರಿಗೂ ಸಮಬಾಳು-ಸಮಪಾಲು ನೀಡಿದೆ ಬಳಬಟ್ಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಸಂಗೀತಾ ಪಾಟೀಲ್
ಹೇಳಿದರು. ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲೂ ಸಹೋದರತೆ ಮೂಡಿಸುವುದಕ್ಕೆ ರಾಷ್ಟ್ರಕ್ಕೆ ಸಂವಿಧಾನ ಅರ್ಪಣೆಗೊಂಡಿರುತ್ತದೆ. ಇದರಿಂದ ದೇಶದ ಎಲ್ಲ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು ಸ್ಥಾನ-ಮಾನ ಮತ್ತು ಅವಕಾಶಗಳ ಸಮಾನತೆಯ ಅವಕಾಶ ಲಭಿಸಿದೆ ಎಂದರು. ಭಾರತೀಯರಾದ ಎಲ್ಲರೂ ವಿಶೇಷವಾಗಿ ವಿದ್ಯಾರ್ಥಿ, ಯುವ ಸಮುದಾಯ ಭಾರತದ ಮೂಲ ಪೀಠಿಕೆಯನ್ನು ಓದಿ ಅರ್ಥಮಾಡಿಕೊಂಡು ದೇಶದಲ್ಲಿ ಎಲ್ಲರೂ ಗೌರವ, ಘನತೆ, ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕೆಂದು ತಿಳಿಸಿದರು. ಗಿರಿಯಪ್ಪ ತಳವಾರ, ಯಲ್ಲಪ್ಪ ಚಲವಾದಿ ಪರಶುರಾಮ ಚಲವಾದಿ, ಯಲ್ಲಪ್ಪ ದೊಡಮನಿ, ರಸೂಲ ಮುಲ್ಲಾ, ಪರಶುರಾಮ ಚಿಮ್ಮಲಗಿ, ಸಲೀಮ ವಾಲಿಕಾರ ಸೋಮನಾಥ ಗಾಯಕವಾಡ, ಸಚಿನ ಚೋರಿ, ಗೋಪಾಲ ಕಟ್ಟಿಮನಿ,ಸುರೇಶ ಚಲವಾದಿ, ಮಂಜಪ್ಪ ಚಲವಾದಿ, ರಾಮನಗೌಡ ಪಾಟೀಲ, ವೈ ಎ ಬೋಳಿ, ಸವಿತಾ ಒಡೆಯರ, ಮಲ್ಲು ಕೊಪ್ಪ, ಕರ್ನಾಟಕ ಭೀಮ ಸೇನೆಯ ವಿಜಯಪುರ ಜಿಲ್ಲಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಮತ್ತು ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು ಮತ್ತು ಮುದ್ದು ಮಕ್ಕಳು ಮತ್ತು ಬಳಬಟ್ಟಿ ಗ್ರಾಮದ ಎಲ್ಲ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
ಅಂಬೇಡ್ಕರ ಆಶಯದ ಸಂವಿಧಾನ ಅಗತ್ಯ ಎಂ ಜಿ ಭಟ್
ಅಂಬೇಡ್ಕರ ಆಶಯದ ಸಂವಿಧಾನ ಅಗತ್ಯ ಎಂ ಜಿ ಭಟ್
ಕುಮಟಾ :- ಗುರುಪ್ರಸಾದ ಪ್ರೌಢಶಾಲೆ ಮಲ್ಲಾಪುರದಲ್ಲಿ ಸಂವಿಧಾನ ದಿನದ ಅಂಗವಾಗಿ ನಡೆದ ಕಾರ್ಯಕ್ರಮ ಒಂದರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉಪನ್ಯಾಸಕ ಎಂಜಿ ಭಟ್ ಅವರು ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಂಜಿ ಭಟ್ ಅವರು ಭಾರತದ ಸಂವಿಧಾನವು ಅತ್ಯಂತ ಶ್ರೇಷ್ಠ ಸಂವಿಧಾನ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದಾದ ಸಂವಿಧಾನವು ಹೌದು ಹಾಗೂ ಅತ್ಯಂತ ದೊಡ್ಡ ಸಂವಿಧಾನವು ಹೌದು. ಶ್ರೇಷ್ಠ ಜ್ಞಾನಿ ದೇಶಭಕ್ತ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದ ಸಮಿತಿ ದೇಶಕ್ಕೆ ದೊಡ್ಡ ಕೊಡುಗೆಯನ್ನು ನೀಡಿದೆ. ಅಂಬೇಡ್ಕರ್ ರವರು ಸಂವಿಧಾನದಲ್ಲಿ ಸಮಾನತೆ ಸಾಮರಸ್ಯ ಹಾಗೂ ಅಭಿ ವ್ಯಕ್ತಿ ಸ್ವಾತಂತ್ರ್ಯದಂತಹ ಅದ್ಭುತವಾದ ಕಲ್ಪನೆಯನ್ನು ಇಟ್ಟುಕೊಂಡು ಸಂವಿಧಾನವನ್ನು ರಚಿಸಿದ್ದು ಭವ್ಯ ಭಾರತದ ಕನಸನ್ನ ಅಂಬೇಡ್ಕರ್ ರವರು ಕಂಡಿದ್ದರು. ಭಾವಿ ಪ್ರಜೆಗಳಾದ ತಾವು ದೇಶದ ಭದ್ರತೆ ಅಖಂಡತೆ ಹಾಗೂ ದೇಶದ ಏಳಿಗೆ ಹಾಗೂ ಸದೃಢ ಹಾಗೂ ಸಮೃದ್ಧ ಭಾರತವನ್ನು ಕಟ್ಟುವಲ್ಲಿ ತಾವುಗಳು ಸೈನಿಕರಂತೆ ಕೆಲಸ ಮಾಡುವ ಅವಶ್ಯಕತೆ ಇದೆ. ನನ್ನ ದೇಶ ನನ್ನ ಹೆಮ್ಮೆ ಎಂಬ ಅಭಿಮಾನದಿಂದ ಕೆಲಸ
ಮಾಡಬೇಕಾಗಿದೆ. ಎಂದು ದೇಶ ಭಕ್ತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಅತ್ಯಂತ ಮನ ಮುಟ್ಟುವ ರೀತಿಯ ಮಾತುಗಳನ್ನು ಆಡಿದರು.
ಸಮಾಜ ಸೇವಕ ಹಾಗೂ ವಕೀಲರಾದ ಶ್ರೀ ಹೇಮಂತ್ ಕುಮಾರ್ ಅವರು ಮಾತನಾಡಿ ಮುಂದಿನ ದಿನಗಳಲ್ಲಿ ದೇಶ ಕಟ್ಟುವ ಕೆಲಸ ನಿಮ್ಮಿಂದ ಆಗಬೇಕಾಗಿದೆ ದೊಡ್ಡ ಮನಸ್ಸಿನಿಂದ ಹೊಸ ಸಮಾಜದ ನಿರ್ಮಾಣವನ್ನು ಮಾಡಬೇಕಾಗಿದೆ ಎಂದು ಹಿತನುಡಿದರು.
ಗುರುಪ್ರಸಾದ ಪ್ರೌಢಶಾಲೆ ಮಲ್ಲಾಪುರದ ಮುಖ್ಯಾದ್ಯಾಪಕಿ ಶ್ರೀ ವಿಜಯಲಕ್ಷ್ಮಿ ಭಟ್ ವಹಿಸಿದ್ದರು.. ಶಾಲೆಯ ಎಲ್ಲ ಶಿಕ್ಷಕರು ಸಹಕರಿಸಿದರು ಹಾಗೂ ಶಾಲೆಯ ಶಿಕ್ಷಕ ಶ್ರೀರಾಮಚಂದ್ರ ಮಡಿವಾಳ್ ಸ್ವಾಗತಿಸಿ ವಂದಿಸಿದರು.
ಉತ್ತಮ ಜಾನುವಾರುಗಳಿಗೆ ಪ್ರಶಸ್ತಿ ವಿತರಣೆ ಮಾಡಿದ ಡಾ ರಾಜಕುಮಾರ್ ಅಡಕಿ
ಇಂಡಿ: ತಾಲ್ಲೂಕಿನ ಸುಕ್ಷೇತ್ರ ತಡವಲಗಾ ಗ್ರಾಮದ ಜೋಡಗುಡಿಯ ಕಾರ್ತಿಕ ಮಾಸದ ಪ್ರಯುಕ್ತ ಶ್ರೀ ಮರುಳಸಿದ್ದೇಶ್ವರ ಜಾತ್ರೆ ನಡೆಯುತ್ತದೆ.ಜಾತ್ರೆ ನಿಮಿತ್ತವಾಗಿ ಶ್ರೀ ಮರುಳಸಿದ್ದೇಶ್ವರ ಜಾತ್ರೆ ಕಮೀಟಿ ಹಾಗೂ ಪಶು ಸಂಗೋಪನಾ ಇಲಾಖೆಯ ಸಹಯೋಗದಲ್ಲಿ ಬೃಹತ್ ಜಾನುವಾರುಗಳ ಜಾತ್ರೆ ಹಮ್ಮಿಕೊಳ್ಳಲಾಗಿತ್ತು.ಪ್ರಥಮ ಜಾನುವಾರುಗಳ ಜಾತ್ರೆ ಆಗಿದ್ದರು ಕೂಡಾ ಜಿಲ್ಲೆಯ ವಿವಿಧ ಭಾಗಗಳಿಂದ ಸಾಕಷ್ಟು ಜಾನುವಾರುಗಳು ನೆರೆದಿದ್ದವು.ಜಾತ್ರೆ ಮುಗಿದ ಬಳಿಕ ಉತ್ತಮ ಜಾನುವಾರುಗಳಿಗೆ ಪಾಸ್ ವಿತರಣೆ ಮಾಡುವುದು ವಾಡಿಕೆ.ಅದರಂತೆ ಪಶು ಸಂಗೋಪನಾ ಇಲಾಖೆಯ ಹಾಗೂ ಶ್ರೀ ಮರುಳಸಿದ್ದೇಶ್ವರ ಜಾತ್ರೆ ಕಮೀಟಿ ಸಹಯೋಗದಲ್ಲಿ ಉತ್ತಮ ಜಾನುವಾರುಗಳಿಗೆ ಪಾಸ್ ವಿತರಣೆ ಕಾರ್ಯಕ್ರಮ ನಡೆಯಿತು.ಮೊದಲು ಉತ್ತಮ ಜಾನುವಾರುಗಳ ಆಯ್ಕೆ ಸಮಿತಿ ರಚನೆ ಮಾಡಲಾಯಿತು ಆಯ್ಕೆ ಸಮಿತಿ ಇಂಡಿ ಪಶು ಸಂಗೋಪನಾ ಇಲಾಖೆ ತಾಲೂಕು ವೈದ್ಯಾಧಿಕಾರಿ ರಾಜಕುಮಾರ ಅಡಕಿ, ಝಳಕಿ ಪಶು ವೈದ್ಯಾಧಿಕಾರಿ ಪ್ರಕಾಶ ಮಿರ್ಜಿ,ತಾಂಬಾ ಪಶು ವೈದ್ಯಾಧಿಕಾರಿ ರವಿಶಂಕರ ಬಿರಾದಾರ,ಬಸನಾಳ ಪಶು ವೈದ್ಯಾಧಿಕಾರಿ ಸಂಜೀವ ಕುಮಾರ ಲಾಳಸಂಗಿ,ನಿಂಬಾಳ ಪಶು ವೈದ್ಯಾಧಿಕಾರಿ ರಾಜಶೇಖರ ಕಾರಜೊಳ,ಹೋರ್ತಿ ಪಶು ವೈದ್ಯಾಧಿಕಾರಿ ಪ್ರಶಾಂತ್ ಬೆಳುಡಂಗಿ ಹಾಗೂ ತಡವಲಗಾ ಪಶು ವೈದ್ಯಕೀಯ ಪರೀಕ್ಷರು ಅಶೋಕ ಕಾಗರೆ ನೇತೃತ್ವದಲ್ಲಿ ಒಂದು ತಂಡ ರಚನೆ ಮಾಡಲಾಯಿತು.ನಂತರ ಉತ್ತಮ ತಳಿಯ ಜಾನುವಾರುಗಳನ್ನು ಪರಿಸಿಲಿಸಿದ ಉತ್ತಮ ಜಾನುವಾರುಗಳನ್ನು ವಿವಿಧ ವಿಭಾಗಗಳನ್ನಾಗಿ ವಿಂಗಡಣೆ ಮಾಡಿ ಆಯ್ಕೆ ಮಾಡಿದರು, ಪ್ರಥಮ, ದ್ವಿತೀಯ ತೃತೀಯ ಸ್ಥಾನ ಪಡೆದವರ ಹೋರಿಗಳ ಮಾಲಿಕರ ಹೆಸರು ಪ್ರಕಟಿಸಿದರು 1) ಹಾಲಲ್ಲಿನ ಹೋರಿ(ಹಾಲು ಕುಡಿವುವ)ವಿಭಾಗದಲ್ಲಿ ಹಣಮಂತ ಕಲ್ಲಪ್ಪ ಗಣವಲಗಾ ಪ್ರಥಮ ಚಂದ್ರಾಮ ದುಂಡಪ್ಪ ಕೋಷ್ಠಿ, ದ್ವಿತೀಯ ಅಣ್ಣಾರಾಯ ಮಾದೇವ ಬೇವನೂರ ತೃತೀಯ ಮತ್ತು ಹಾಲಲ್ಲಿನ ಹೋರಿ (ಕೂಡಿಯದ) ವಿಭಾಗದಲ್ಲಿ ಚಂದ್ರಾಮ ದುಂಡಪ್ಪ ಕೋಷ್ಠಿ ಪ್ರಥಮ ಹಾಗೂ ಎರಡು ಹಲ್ಲಿನ ವಿಭಾಗದಲ್ಲಿ ಆದಿಲಶಾ ಹುಸೇನಿ ಬಾಗವಾನ ಪ್ರಥಮ ಹಾಗೂ ನಾಲ್ಕು ಹಲ್ಲಿನ ವಿಭಾಗದಲ್ಲಿ ಮಾದೇವ ಮಳಸಿದ್ದ ಕುದರಿ ಪ್ರಥಮ ಗುರುಲಿಂಗ ಶಿವಲಿಂಗ ಬಿರಾದಾರ (ಅಥರ್ಗಾ) ದ್ವಿತೀಯ ಪ್ರಭು ವಿಠೋಬಾ ಪಟೇದ(ಹಿರೇರೂಗಿ) ತೃತೀಯ ಆರು ಹಲ್ಲಿನ ವಿಭಾಗದಲ್ಲಿ ಚಂದ್ರಾಮ ದುಂಡಪ್ಪ ಕೋಷ್ಠಿ ಪ್ರಥಮ ಹಾಗೂ ಬಾಯಿ ಗೂಡಿದ ಹಾಲಿನ ಹೋರಿ ವಿಭಾಗದಲ್ಲಿ ಧನಸಿಂಗ್ ದಾಮು ನಾಯಕ ಪ್ರಥಮ ಮತ್ತು ಜೋಡ ಎತ್ತು ವಿಭಾಗದಲ್ಲಿ ಶಂಕರ ದ್ಯಾಮಗೊಂಡ ಹಿಪ್ಪರಗಿ (ಉತ್ನಾಳ) ಆಕಳು ಮಣಕ ವಿಭಾಗದಲ್ಲಿ ಚಂದ್ರಕಾಂತ ಮಾದೇವ ಬೇವನೂರ ಪ್ರಥಮ ಸಿದ್ದಪ್ಪ ಬೆನೂರ ದ್ವಿತೀಯ ಬಸವರಾಜ ದುಂಡಪ್ಪ ತಾರಾಪೂರ ತೃತೀಯ ಹಾಗೂ ಆಕಳು ವಿಭಾಗದಲ್ಲಿ ರಾಜಶೇಖರ ಅಥರ್ಗಾ ಪ್ರಥಮ ಚಂದ್ರಾಮ ದುಂಡಪ್ಪ ಕೋಷ್ಠಿ ದ್ವಿತೀಯ ಎಂದು ಆಯ್ಕೆ ಸಮಿತಿ ಅಧ್ಯಕ್ಷರು ಹಾಗೂ ಇಂಡಿ ಪಶು ಸಂಗೋಪನಾ ಇಲಾಖೆ ತಾಲೂಕು ವೈದ್ಯಾಧಿಕಾರಿ ರಾಜಕುಮಾರ ಅಡಕಿ ತಿಳಿಸಿದ್ದಾರೆ ಈ ಸಂದರ್ಭದಲ್ಲಿ ಶ್ರೀ ಮರುಳಸಿದ್ದೇಶ್ವರ ಜಾತ್ರೆ ಕಮೀಟಿ ವತಿಯಿಂದ ಬಸವರಾಜ ಇಂಡಿ, ಕೃಷ್ಣಪ್ಪ ಮಿರ್ಜಿ, ಶರಣು ಕನ್ನೂರ, ಯಶವಂತ ಖಸ್ಕಿ, ಕಲ್ಯಾಣಿ ಗಣವಲಗಾ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವನ್ಯ ಸಂಪತ್ತು ಬೆಳೆಸಿ : ಸಂಗಮೇಶ ಎನ್ ಜವಾದಿ
ಚಿಟಗುಪ್ಪ: ವನ್ಯ ಸಂಪತ್ತು ಬೆಳೆಸಿ, ಸಂಪತ್ ಭರಿತ ದೇಶವನ್ನಾಗಿ ನಿರ್ಮಾಣ ಮಾಡುವ ಕಾರ್ಯದಲ್ಲಿ ಸರ್ವರ ಸಹಕಾರ ಅಗತ್ಯ ಇದೆ ಎಂದು ಸಾಹಿತಿ, ಪರಿಸರ ಸಂರಕ್ಷಕ ಸಂಗಮೇಶ ಎನ್ ಜವಾದಿ ನುಡಿದರು.ತಾಲೂಕಿನ ಇಟಗಾ ಗ್ರಾಮದ ಶ್ರೀ ಚೆನ್ನಮಲ್ಲೇಶ್ವರ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅರಣ್ಯ ಸಂಪತ್ತು ಇಂದು ನಶಿಸಿ ಹೋಗುತ್ತಿದೆ. ಈ ಸಂಪತ್ತು ಸಂರಕ್ಷಣೆ ಮಾಡುವುದು ಇಂದಿನ ನಾಗರಿಕರ ಆದ್ಯ ಕರ್ತವ್ಯವಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪರಿಸರ ಸಂರಕ್ಷಣೆಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವನ್ಯ ಸಂಪತ್ತು ಸಂರಕ್ಷಣೆ ಮಾಡುವಲ್ಲಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
ವಿಶೇಷವಾಗಿ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮವನ್ನು ಹಾಕಿಕೊಂಡು ಪ್ರತಿಯೊಬ್ಬರಿಗೂ ಸಸಿಗಳು ವಿತರಿಸಿ, ಅವುಗಳ ಪಾಲನೆ ಮಾಡುವ ಮುಖಾಂತರ ಪರಿಸರ ಸಂರಕ್ಷಣೆಯಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆ ಹಾಗೂ ನಾಡಿಗೆ ಮಾದರಿಯಾಗಿದೆ ಎಂದರು. ಜನಜಾಗೃತಿ ಜಿಲ್ಲಾ ಸದಸ್ಯ ಅಸ್ಲಾಂಮೀಯಾ ಮಾತನಾಡಿ ಸಸಿಗಳು ನೆಟ್ಟು ದೇಶ ಉಳಿಸಿ, ದೇಶ ಉಳಿದರೆ ನಾವೆಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯ.
ಸರ್ವರೂ ತಪ್ಪದೇ ಸಸಿಗಳು ನೆಟ್ಟು, ಅವುಗಳ ಪಾಲನೆ ಕಡ್ಡಾಯವಾಗಿ ಮಾಡಬೇಕು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಹಿರಿಯರಾದ ಧೂಳಯ್ಯ ಸ್ವಾಮಿಗಳು ಮಾತನಾಡಿ ಪರಿಸರ ಸ್ನೇಹಿ ಜೀವನವನ್ನು ಸರ್ವರೂ ನಡೆಸಬೇಕು. ಇದರಿಂದ ಅನೇಕ ರೋಗಿಗಳಿಂದ ಮುಕ್ತರಾಗುತ್ತೇವೆ. ಮನೆಯಲ್ಲಿ ಅನೇಕ ರೀತಿಯ ಆಯುರ್ವೇದಿಕ್ ಸಸಿಗಳನ್ನು ಬೆಳೆಸಿ, ಮಾನವರ ಪ್ರಾಣಕ್ಕೆ ಸಂಜೀವಿನಿಯಾಗುವಂತಹ ಕೆಲಸ ಆಗಬೇಕು. ಪ್ಲಾಸ್ಟಿಕ್ ನಿಷೇಧ ಮಾಡಬೇಕು ಎಂದರು. ತಾಲೂಕಿನ ಯೋಜನಾಧಿಕಾರಿಗಳಾದ ಬಸವರಾಜ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಹತ್ತು ಹಲವು ಕಾರ್ಯಕ್ರಮಗಳನ್ನು ಈ ತಾಲೂಕಿನಲ್ಲಿ ಹಾಕಿಕೊಂಡು ತಾಲೂಕಿನ ಅಭಿವೃದ್ಧಿಗಾಗಿ ಈ ಸಂಸ್ಥೆ ಹಗಲಿರಲು ದುಡಿಯುತ್ತಿದೆ. ಪರಿಸರ ಸಂರಕ್ಷಣೆ ಸೇರಿದಂತೆ ಬಡವರ ಪರ, ರೈತಪರ, ಮಹಿಳೆಯರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಜಾರಿಗೆ ತಂದಿದ್ದೇವೆ ಎಂದರು.ಕೃಷಿ ಮೇಲ್ವಿಚಾರಕ ಸಿದ್ದು ಪೂಜಾರಿ ನಿರೂಪಿಸಿ, ವಂದಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ನರಸಪ್ಪ ಪತ್ಮಾಪೂರ, ಮುಖಂಡರಾದ ಶ್ರೀನಿವಾಸ್ ರೆಡ್ಡಿ, ವಲಯ ಮೇಲ್ವಿಚಾರಕ ರಾಜಶೇಖರ,ಹೈನುಗಾರಿಕೆ ಸಹಾಯಕ ಪ್ರಬಂಧಕ, ಗ್ರಾಮದ ಮಹಿಳಾ ಸೇವಾ ಪ್ರತಿನಿಧಿಗಳು ಸೇರಿದಂತೆ ಸ್ವಸಹಾಯ ಸಂಘಗಳ ಮಾತೆಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಿದ್ದಲಿಂಗ ಪೂಜಾರಿ ಹಾಲಗಡ್ಲಾ ಅವರಿಗೆ ಡಾ ವಿಷ್ಣು ಸೇನಾ ಸಮಿತಿ ಯಡ್ರಾಮಿ ವತಿಯಿಂದ ಸಮಾಜ ಸೇವಾ ರತ್ನ ಪ್ರಶಸ್ತಿ . ನಿಂಗಣ್ಣ ರದ್ದೇವಾಡಗಿ ಹರ್ಷ
ಯಡ್ರಾಮಿ ತಾಲುಕಿನ ಡಾ ವಿಷ್ಣು ಸೇನಾ ಸಮಿತಿ ತಾಲೂಕ ಅಧ್ಯಕ್ಷರಾದ ರಾಹುಲ್ ಬಿ ಮದರಿ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಹಾಗೂ ಡಾಕ್ಟರ್ ವಿಷ್ಣು ಸೇನಾ ಸಮಿತಿಯ ದಶಮಾನೊತ್ಸವ ಕಾರ್ಯಕ್ರಮವು ಇಜೆರಿ ಗ್ರಾಮದಲ್ಲಿ ನಡೆಯಿತು 28 ವರ್ಷದ ಚಿಗುರು ಮೀಸೆಯ ಯುವಕ ರಾಹುಲ್ ಬಿ ಮದರಿಯ ನಾಯಕತ್ವ ಹಾಗೂ ತಾಲೂಕಿನಲ್ಲಿ ನಡೆಯಬೇಕಾದ ಸಮಾವೇಶ ಇಜೇರಿ ಗ್ರಾಮದಲ್ಲಿ ಕನ್ನಡಾಂಬೆಯ ಬಾವುಟ ಹಿಡಿದು ಕನ್ನಡ ದೇಶಭಕ್ತಿಯ ಭಕ್ತಿ ಗೀತೆಯ ಮೆರವಣಿಗೆಯ ಮಹೋತ್ಸವವು ತಾಲೂಕ ಅಧ್ಯಕ್ಷರಾದ ರಾಹುಲ್ ಬಿ ಮಧರಿ ಅವರ ಕಾರ್ಯಕ್ರಮವನ್ನು ಹಲಾವಾರು ಜನರು ಬೆರಗು ಕಣ್ಣಿನಿಂದ ನೋಡುವಂತೆ ಮಾಡಿದ್ದು ಸುಳ್ಳಲ್ಲ ಅದೇ ರೀತಿಯಾಗಿ ಒಂದೇ ವೇದಿಕೆಯಲ್ಲಿ ನೂರಾರು ಸಂಘಟನೆಯ ಹೋರಾಟಗಾರರಿಗೆ ಹಾಗೂ ಸಮಾಜ ಸೇವಕರಿಗೆ ಹಾಗೂ ಮಠಾಧೀಶರಿಗೆ ವೇದಿಕೆ ಕಲ್ಪಿಸಿ ಗೌರಪೂರ್ವಕ ಸನ್ಮಾನ ಮಾಡಿ ನೆನಪಿನ ಕಾಣಿಕೆ ನೀಡಲಾಯಿತು ಅದೇ ರೀತಿಯಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಯಿತು ಅದೇ ರೀತಿಯಾಗಿ ಜೇವರ್ಗಿ ತಾಲೂಕಿನ ಖ್ಯಾತ ಹೋರಾಟಗಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯ ತಾಲೂಕ ಅಧ್ಯಕ್ಷರಾದ ಸಿದ್ದಲಿಂಗ ಎಚ್ ಪೂಜಾರಿ ಹಾಲಗಡ್ಲಾ ಅವರಿಗೆ ಸಮಾಜಸೆವಾರತ್ನ ಪ್ರಶಸ್ತಿ ಸಿಕ್ಕಿರುವುದು ತುಂಬಾ ಹರ್ಷವಾಗಿದೆ ಎಂದು ಜೆವರ್ಗಿ ತಾಲೂಕಿನ ಭಾರತೀಯ ಜನತಾ ಪಕ್ಷದ ಯುವ ಮುಖಂಡರಾದ ನಿಂಗಣ್ಣ ರದ್ದೇವಾಡಗಿ ಅವರು ಹರ್ಷವ್ಯಕ್ತ ಪಡಿಸಿ ಸಿದ್ದಲಿಂಗ ಪೂಜಾರಿ ಅವರಿಗೆ ಶುಭ ಕೋರಿದ್ದಾ
ಅಜ್ಜಿಕಟ್ಟಾ-ಹುಲಿದೇವರವಾಡ ಬಳಿ ಸಾರ್ವಜನಿಕರಿಂದ ಅಂಡರ್ ಪಾಸ್ ಗೆ ಬೇಡಿಕೆಯಿಟ್ಟು ಪ್ರತಿಭಟನೆ.. ಏಳು ವರ್ಷದಿಂದ ಮುಂದಿಟ್ಟ ಅಂಡರ್ ಪಾಸ್ ಬೇಡಿಕೆ ಈಡೇರುವುದು ಎಂದು..?
ಅಂಕೋಲಾ : ಅಜ್ಜಿಕಟ್ಟಾ-ಹುಲಿದೇವರವಾಡ ಮಧ್ಯೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ಬಳಿ ಇರುವ ಅಪಾಯಕಾರಿ ರಸ್ತೆಯನ್ನು ಅನ್ನು ಖಂಡಿಸಿ ಸಾರ್ವಜನಿಕರು ಅಂಡರ್ ಪಾಸ್ ಗಾಗಿ ಏಳು ವರ್ಷಗಳಿಂದ ಬೇಡಿಕೆ ಇಡುತ್ತ ಬಂದರೂ ಸಹ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ದಿಂದ ಯಾವುದೇ ಫಲ ಸಿಕ್ಕಿಲ್ಲ. ಪ್ರತಿಭಾರಿ ಸಾರ್ವಜನಿಕರು ಪ್ರತಿಭಟನೆ ನಡೆಸಿದಾಗಲೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅಂಡರ್ ಪಾಸ್ ನ ಆಶ್ವಾಸನೆ ಸಿಕ್ಕಿದೆ ಬಿಟ್ಟರೆ, ಕಾರ್ಯರೂಪಕ್ಕೆ ಬಂದಿಲ್ಲ. ಆದರಿಂದ ಹುಲಿದೇವರವಾಡ ಮತ್ತು ಅಜ್ಜಿಕಟ್ಟಾ ಸಾರ್ವಜನಿಕರು ಇಂದು ಅಜ್ಜಿಕಟ್ಟಾ – ಹುಲಿದೆವರವಾಡದ ಬಳಿ ಪ್ರತಿಭಟನೆ ನಡೆಸಿದರು.
ಅಂಡರ್ ಪಾಸ್ ನ ಅವಶ್ಯಕತೆ…
ಅಜ್ಜಿಕಟ್ಟಾ-ಹುಲಿದೇವರವಾಡ ಮಧ್ಯೆ ರಾಷ್ಟ್ರೀಯ ಹೆದ್ದಾರಿ 66 ಹಾದು ಹೋಗಿದೆ, ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಎರಡು ಕಡೆಗಳಲ್ಲಿ ಇರುವ ಸಾರ್ವಜನಿಕರಿಗೆ ದಿನಂಪ್ರತಿ ಹೆದ್ದಾರಿ ಕ್ರಾಸ್ ಮಾಡುವುದೇ ಒಂದು ಸಾಹಸದ ಕೆಲಸ ಹಾಗೂ ತಲೆಬಿಸಿಯಾಗಿ ಪರಿಣಮಿಸಿದೆ. ಚಿಕ್ಕ ಮಕ್ಕಳು ಶಾಲೆಗೆ ಹೋಗುವಾಗ ರಾಷ್ಟ್ರೀಯ ಹೆದ್ದಾರಿ ದಾಟಿ ಹೋಗುವುದು ಅಪಾಯಕಾರಿಯೂ ಆಗಿದೆ. ಅವೈಜ್ಞಾನಿಕವಾಗಿರುವ, ಇಳಿಜಾರಿನಿಂದ ಕೂಡಿರುವ ರಾಷ್ಟ್ರೀಯ ಹೆದ್ದಾರಿಯಿಂದ ಸಾಗುವ ಬೃಹತ್ ವಾಹನಗಳ ವೇಗವು ಹೇಳತೀರದು, ಹೀಗಿರುವಾಗ ಹಿರಿಯ ನಾಗರಿಕರಿಗೆ, ಚಿಕ್ಕ ಮಕ್ಕಳಿಗೆ, ಅಷ್ಟೇ ಅಲ್ಲದೆ ವಯಸ್ಕರಿಗೂ ಹೆದ್ದಾರಿ ಕ್ರಾಸ್ ಮಾಡುವುದು ಅತ್ಯಂತ ಅಪಾಯಕಾರಿಯಾಗಿದೆ. ಹೆದ್ದಾರಿ ಕ್ರಾಸ್ ಮಾಡುವಾಗ ಸ್ವಲ್ಪ ಎಡವಿದರೂ ಅಪಘಾತ ಕಟ್ಟಿಟ್ಟ ಬುತ್ತಿ..!
ಆದರಿಂದ ಸಾರ್ವಜನಿಕರು ಇಂದು ಅಜ್ಜಿಕಟ್ಟಾ- ಹುಲಿದೇವರವಾಡ ಬಳಿ ಅಂಡರ್ ಪಾಸ್ ಗೆ ಬೇಡಿಕೆಯಿಟ್ಟು ಪ್ರತಿಭಟನೆ ಮಾಡಿದರು. ಇನ್ನೂ ಮುಂದಾದರು ಜಿಲ್ಲಾಡಳಿತ ಈ ಅಪಾಯಕಾರಿ ರಸ್ತೆಯನ್ನು ಗಣನೆಗೆ ತೆಗೆದುಕೊಂಡು, ಸಾರ್ವಜನಿಕರ ಹಿತಾಸಕ್ತಿಗೆ ಒತ್ತುಕೊಟ್ಟು ಅಂಡರ್ ಪಾಸ್ ನಿರ್ಮಾಣಕ್ಕೆ ಆದ್ಯತೆ ನೀಡುತ್ತಾರೆಯೋ ಇಲ್ಲವೋ ಎಂದು ಕಾದು ನೋಡಬೇಕಿದೆ.
ವರದಿ : ಸುಪ್ರಿಯಾ ವಿಷ್ಣು ನಾಯ್ಕ
ಕಡಮೆ ಶಾಲೆಯಲ್ಲಿ ನಡೆದ ಸಂವಿಧಾನ ದಿನಾಚರಣೆ
ಗೋಕರ್ಣ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ್ಕೇರಿ ಕಡಮೆಯಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಮುಖ್ಯಾಧ್ಯಾಪಕರಾದ ಉಮಾ. ಜಿ ನಾಯ್ಕ ಮಾತನಾಡಿ “ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮ ದೇಶವಾಗಿದ್ದು ಅದರ ಮೂಲಾಧಾರವೇ ನಮ್ಮ ದೇಶದ ಸಂವಿಧಾನ. ಪ್ರಜೆಗಳಾದ ನಾವು ಸಂವಿಧಾನಕ್ಕೆ ಬದ್ಧರಾಗಿ ಜೀವಿಸಬೇಕು. ವಿದ್ಯಾರ್ಥಿಗಳಾದ ನೀವು ಸಂವಿಧಾನವನ್ನು ಅರಿತು ಉತ್ತಮ ಪ್ರಜೆಗಳಾಗಿ ಬಾಳಿ” ಎಂದರು. ಡಾಕ್ಟರ್ ಬಿ.ಆರ್. ಅಂಬೇಡ್ಕರ್, ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್, ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವಿದ್ಯಾರ್ಥಿಗಳಿಗೆ ಸಂವಿಧಾನ ವಿಷಯಕ್ಕೆ ಸಂಬಂಧಿಸಿದಂತೆ ಭಾಷಣ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ ಹಮ್ಮಿಕೊಳ್ಳಲಾಯಿತು. ಶಿಕ್ಷಕರಾದ ರಾಜೀವ ಗಾಂವಕರ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆಯನ್ನು ಹೇಳಿಕೊಟ್ಟರು. ಶಿಕ್ಷಕರಾದ ಲತಾ ಗೌಡ, ನಯನಾ ಜಿ.ಪಿ, ವೈಶಾಲಿ ನಾಯಕ, ಸವಿತಾ ಗೌಡ, ನಾಗರತ್ನ ಗೌಡ ಉಪಸ್ಥಿತರಿದ್ದರು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಈಶ್ವರ ಮಡಿವಾಳ ರವರು ವಿದ್ಯಾರ್ಥಿಗಳಿಗೆ ಸಂವಿಧಾನ ದಿನಾಚರಣೆಯ ಶುಭಾಶಯ ಕೋರಿದರು. ಹೀಗೆ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.
ಬಳ್ಳೂರು ಗ್ರಾಮದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೃಷ್ಣ ರವರಿಗೆ ಗೆಲುವು
ಸಾಲಿಗ್ರಾಮ ತಾಲೂಕು ಲಕ್ಷ್ಮೀಪುರ ಗ್ರಾಮ ವ್ಯಾಪ್ತಿಗೆ ಸೇರುವ ಬಳ್ಳೂರು ಗ್ರಾಮದಲ್ಲಿ ಗ್ರಾಮ ಪಂಚಾಯತಿ ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೃಷ್ಣ (ಕರೀಮ್ ) ಅವರು ಗೆದ್ದ ಬಳಿಕ ಕೆ ಪಿ ಸಿ ಸಿ ಕಾರ್ಯಕಾರಣಿ ಸದಸ್ಯರಾದ ದೊಡ್ಡ ಸ್ವಾಮಿಗೌಡ ಅವರನ್ನು ಭೇಟಿ ಮಾಡಿ ಸನ್ಮಾನ ಮಾಡಿ ಗೌರವಿಸಲಾಯಿತು. ಇದೇ ಸಮಯದಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಸಣ್ಣಪ್ಪ. ಲಕ್ಷ್ಮಿಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಹುಚ್ಚೇಗೌಡ. ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಕುಮಾರ. ಪ್ರಸನ್ನ. ವಿಜಯ್ ಕುಮಾರ್.ಲೋಕೇಶ. ಪ್ರಭಾಕರ್ ಡಿ. ಹಲವು ಗಣ್ಯರು ಉಪಸ್ಥಿತರಿದ್ದರು
