ಮೈಸೂರು ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಧನುಷೋಟಿ ಜಲಪಾತೋತ್ಸವ ಕಾರ್ಯಕ್ರಮವನ್ನು ನವೆಂಬರ್ 30 ಹಾಗೂ ಡಿಸೆಂಬರ್ 1 ರಂದು ಎರಡು ದಿನಗಳ ಕಾಲ ಸಾಲಿಗ್ರಾಮ ತಾಲ್ಲೂಕಿನ ಶ್ರೀರಾಮ ದೇವಸ್ಥಾನದ ಆವರಣದ ಚುಂಚನಕಟ್ಟೆಯ ಅವರಣದಲ್ಲಿ ಸಂಜೆ 6.30 ಕ್ಕೆ ಧನುಷೋಟಿ ಜಲಪಾತೋತ್ಸವ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಸಮಾಜ ಕಲ್ಯಾಣ ಇಲಾಖಾ ಸಚಿವರಾದ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ ರವರು ನೆರವೇರಿಸಲಿದ್ದಾರೆ ಜೊತೆಯಾಗಿ ಘನ ಸರ್ಕಾರದ ಹಲವಾರು ಸಚಿವರು ಹಾಗೂ ಶಾಸಕರು ಉಪಸ್ಥಿತರಿರುತ್ತಾರೆ. ದಿನಾಂಕ :30-11-2024 4.30 00 5.00 ಗಂಟೆಯವರೆಗೆ ಬಸವಯ್ಯ(ಲಕ್ಷಿತಾಮ್) ಸಾಲಿಗ್ರಾಮ ಇವರ ತಂಡದಿಂದ ಜನಪದ ಝೇಂಕಾರ ಸಂಜೆ 5.00 ರಿಂದ 6.30 ರವರೆಗೆ ಡಾ.ಕಾ.ರಾಮೇಶ್ವರಪ್ಪ ಮತ್ತು ತಂಡದ ಇನಿದನಿ ಮಣ್ಣಮಕ್ಕಳ ಹೊನ್ನಪದಗಳ ಬಳಗ ಮೈಸೂರು ಇವರ ತಂಡದಿಂದ ಕನ್ನಡ ಸಂಗೀತ ವೈಭವ ಕಾರ್ಯಕ್ರಮ ರಾತ್ರಿ 7.30 ರಿಂದ 9.30 ರವರೆಗೆ ಖ್ಯಾತ ಸಂಗೀತ ನಿರ್ದೇಶಕರು ಮತ್ತು ಗಾಯಕರುಗಳಾದ ರಘು ದೀಕ್ಷಿತ್ ಮತ್ತು ತಂಡದವರಿಂದ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ದಿನಾಂಕ : 01-12-2024 4.30 80 5.00 ಗಂಟೆಯವರೆಗೆ ರಶ್ಮಿ ಮತ್ತು ತಂಡ ಮೈಸೂರು ರವರಿಂದ ಜನಪದ ಸಂಗೀತ ಕಾರ್ಯಕ್ರಮ ಸಂಜೆ 5 ರಿಂದ 6.30 ರವರೆಗೆ ಯು.ರಾಜೇಶ್ ಪಡಿಯಾರ್ ಹಾಗೂ ರಶ್ಮಿ ಚಿಕ್ಕಮಗಳೂರು ಮತ್ತು ತಂಡ ಮೈಸೂರು ರವರಿಂದ ಸಿ.ಅಶ್ವಥ್ ಗೀತೆಗಳ ಗಾಯನ (ಕನ್ನಡವೇ ಸತ್ಯ-ಕನ್ನಡವೇ ನಿತ್ಯ) ಸಂಜೆ 6.30 ರಿಂದ 7.30 ರವರೆಗೆ ಖ್ಯಾತ ನಟಿ ಪುಷ್ಪಾವತಿ ಖ್ಯಾತಿಯ ನಿಮಿಕಾ ರತ್ನಾಕರ್, ಖ್ಯಾತ ಕಿರುತೆರೆ ನಟಿ ಅಗ್ನಿಸಾಕ್ಷಿ ಖ್ಯಾತಿಯ ಪ್ರಿಯಾಂಕ ಡ್ರಮ್ಸ್ ಇವೆಂಟ್ಸ್ ಅಂಡ್ ಫ್ಯಾಷನ್ಸ್ ಬೆಂಗಳೂರು ರವರಿಂದ ಸ್ಯಾಂಡಲ್‌ವುಡ್ ನೈಟ್ಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರಾತ್ರಿ 7.30 ರಿಂದ 9.30 ರವರೆಗೆ ಖ್ಯಾತ ಸಂಗೀತ ನಿರ್ದೇಶಕ ಮತ್ತು ಗಾಯಕರುಗಳಾದ ಮಣಿಕಾಂತ್ ಕದ್ರಿ ಮತ್ತು ಹಂಸಿಕಾ ಅಯ್ಯರ್ ತಂಡದಿಂದ ಆಯೋಜಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜಲಪಾತೋತ್ಸವ ನಡೆಯಲಿರುವ ಹಿನ್ನೆಲೆ ಚುಂಚನಕಟ್ಟೆ ಮುಖ್ಯ ವೃತ್ತ ದೇವಾಲಯದ ರಸ್ತೆ ಮತ್ತು ದೇವಾಲಯದ ಸುತ್ತಮುತ್ತ ವಿದ್ಯುತ್ ದೀಪಾಲಂಕಾರ ಮಾಡುತ್ತಿದ್ದು, ಇದರ ಜೊತೆಗೆ ವೇದಿಕೆ ನಿರ್ಮಾಣ ಕಾರ್ಯವನ್ನು ಮಾಡುವುದರ ಜೊತೆಗೆ ಅರ್ಥಪೂರ್ಣವಾಗಿ ನವಂಬರ್ 30 ಡಿಸೆಂಬರ್ 01 ಚುಂಚನಕಟ್ಟೆ ಜಲಪಾತೋತ್ಸವ ಹಮ್ಮಿಕೊಳ್ಳಲಾಗುತ್ತಿದೆ ಕಾರ್ಯಕ್ರಮದ ಆವರಣದಲ್ಲಿ ವಸ್ತು ಪ್ರದರ್ಶನ ಹಾಗೂ ವಿವಿಧ ಮಳಿಗೆಗಳನ್ನು ತೆರೆಯಲಾಗುವುದು ಜಲಪಾತೋತ್ಸವ ಸಂಬಂಧ ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಜಲಪಾತೋತ್ಸವಕ್ಕೆ ಆಗಮಿಸುವ ಪ್ರವಾಸಿಗರಿಗೆ ಹೆಲ್ತ್ ಕ್ಯಾಂಪ್ ಮಾಡುವ ಮೂಲಕ ಉಚಿತ ಆರೋಗ್ಯ ತಪಾಸಣೆ ಮಾಡುವಂತೆ ಕ್ರಮಕೈಗೊಳ್ಳಲಾಗಿದೆಈಗಾಗಲೇ ಆವರಣದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಹಾಗೂ ಬರುವ ಭಕ್ತಾದಿಗಳಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. ನವೆಂಬರ್ 30 ಮತ್ತು ಡಿಸೆಂಬರ್ 1 ರಂದು ನಡೆಯುವ ಎರಡು ದಿನಗಳ ಧನುಷೋಟಿ ಜಲಪಾತೋತ್ಸವಕ್ಕೆ ಕ್ಷೇತ್ರದ ಶಾಸಕನಾಗಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕಿನ ಜನತೆಯನ್ನು ಈ ಮೂಲಕ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಸ್ವಾಗತಿಸುತ್ತೇನೆ. ತಾಲ್ಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಈ ಮೂಲಕ ಕೋರಿದೆ