ಸುರಪುರ /ಹುಣಸಗಿ ನಾರಾಯಣಪುರ ಜಲಾಶಯದ ಎಡದಂಡೆ ಮತ್ತು ಬಲದಂಡೆ ಕಾಲುವೆಗೆ ಏಪ್ರಿಲ್ ಒಂದರಿಂದ 15ನೇ ತಾರೀಕಿನವರೆಗೆ ನೀರು ಹರಿಸುವಂತೆ ಮಾಜಿ ಸಚಿವರಾಜುಗೌಡ ಹಾಗೂ ಅಮೀನ್ ರೆಡ್ಡಿ ಯಾಳಗಿ ಇವರ ನೇತೃತ್ವದಲ್ಲಿ 1-4-2025 ರಂದು ಭೀಮರಾಯನ ಗುಡಿ ಶಹಪುರ್ದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು
ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳಿಗೆ ನೀರು ಇಲ್ಲದೆ ವಣಗಿ ಹೋಗುತ್ತಿದ್ದು 15ನೆಯ ತಾರೀಖಿನವರೆಗೆ ನೀರು ಬಿಟ್ಟರೆ ಎಲ್ಲಾ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಬೆಳೆದುಕೊಳ್ಳಲು ಅನುಕೂಲವಾಗುತ್ತದೆ. ಈಗಾಗಲೇ ತಾಲೂಕಿನಲ್ಲಿ ರೈತರು ಆತ್ಮಹತ್ಯೆಗಳು ಮಾಡಿಕೊಳ್ಳುತ್ತಿದ್ದು ಸರ್ಕಾರ ರೈತರ ಕಷ್ಟಕ್ಕೆ ಸ್ಪಂದನೆ ನೀಡುತ್ತಿಲ್ಲ. ಆದ್ದರಿಂದ ಶಹಪುರ್ ಭೀಮರಾಯನ ಗುಡಿ ಮುಖ್ಯ ಇಂಜಿನಿಯರ್ ಅವರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಈ ಪ್ರತಿಭಟನೆಯಲ್ಲಿ ಎಲ್ಲಾ ಕನ್ನಡಪರ ಸಂಘಟನೆಗಳು, ರೈತಪರ ಸಂಘಟನೆಗಳು, ದಲಿತ ಪರ ಸಂಘಟನೆಗಳು, ರೈತಪರ ಚಿಂತಕರು, ರೈತ ಬಾಂಧವರು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕು ಎಂದು ತಿಳಿಸಿದರು
ಸಿದ್ದರಾಮ ಎಂ ಬೇವಿನಮಟ್ಟಿ
