ಏಪ್ರಿಲ್ 01 ರಿಂದ 15ರವರೆಗೆ ನಾರಾಯಣಪುರ ಜಲಾಶಯದ ಎಡದಂಡೆ ಮತ್ತು ಬಲದಂಡೆಯ ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಇಂದು ಶಹಾಪುರ ತಾಲೂಕಿನ ಭೀಮರಾಯನಗುಡಿಯ ಮುಖ್ಯ ಇಂಜಿನಿಯರ್ ಕಛೇರಿಯ ಮುಂಬಾಗದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ನರಸಿಂಹ ನಾಯಕ ರಾಜುಗೌಡ್ರು ಮತ್ತು ಶ್ರೀ ಅಮೀನರೆಡ್ಡಿ ಯಾಳಗಿ ಹಾಗೂ ರೈತಪರ ಸಂಘಟನೆ, ಎಲ್ಲಾ ಕನ್ನಡಪರ ಸಂಘಟನೆಗಳು ಹಾಗೂ ದಲಿತಪರ ಹೋರಾಟಗಾರರು ವಿವಿಧ ಸಂಘ ಸಂಸ್ಥೆಗಳು. ಶಹಾಪುರ ದಿಂದ ಕಲಬುರಗಿ ಹೊಗುವ ರಾಜ್ಯ ಹೆದ್ದಾರಿಯನ್ನು ಬಂದು ಮಾಡಿ ಪ್ರತಿಭಟನೆ ಮಾಡಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಬಸವರಾಜಪ್ಪಗೌಡ ವಿಭೂತಿಹಳ್ಳಿ ಹಾಗೂ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀ ರಾಜಾ ಹನಮಪ್ಪ ನಾಯಕ, ನರಸಿಂಹ ಪಂಚಮಗಿರಿ, ಶರಣು ನಾಯಕ್ ಬೈರಿಮಡ್ಡಿ, ಈಶ್ವರ್ ನಾಯಕ್, ಮತ್ತು ಇತರ ಹಿರಿಯ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು