ಯಾದಗಿರಿ ಜಿಲ್ಲೆಯ ಹುಣಸಗಿತಾಲೂಕಿನ ಗ್ರಾಮದಲ್ಲಿ ಧರ್ಮಲಿಂಗೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಿಂದ ಹತ್ತು ದಿನಗಳ ಕಾಲ ಜರುಗಿತ್ತು ಜಾತ್ರೆಯ ಪ್ರಯುಕ್ತ ಮಾರ್ಚ್ 20ರಿಂದ 30ರವರೆಗೆ ಗವಿಸಿದ್ದೇಶ್ವರ ಶಾಸ್ತ್ರಿ ಇವರು ಹುಬ್ಬಳ್ಳಿ ಸಿದ್ಧಾರೂಢರ ಪುರಾಣ ಪ್ರವಚನ ಹೇಳಿದರು ಸಿದ್ದಾರೂಡರ ಜೀವನ ಚರಿತ್ರೆಯನ್ನು ಅವರ ತತ್ವ ಸಿದ್ಧಾಂತವನ್ನು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದುಕೊಂಡು ಹೋಗುವಂತೆ ತಿಳಿಸಿದರು. ಯುಗಾದಿಯ ದಿನವಾದ ಭಾನುವಾರ ರಥಕ್ಕೆ ಛಾವಣಿ ಏರಿಸುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು, ಈ ಜಾತ್ರೆಯ ವಿಶೇಷ ಜೋಡು ರಥೋತ್ಸವ ಜರಗುವುದು. ಮಂಗಳವಾರ ದೋರನಹಳ್ಳಿಯ ಚಿಕ್ಕಮಠದ ಶ್ರೀ ಶಿವಲಿಂಗ ರಾಜೇಂದ್ರ ಶಿವಾಚಾರ್ಯ ಹಾಗೂ ತಾಳಿಕೋಟಿ ಖಾಸ್ಗತೇಶ್ವರ ವಿರಕ್ತಮಠದ ಶ್ರೀ ಸಿದ್ದಲಿಂಗ ದೇವರ ಸಾನ್ನಿಧ್ಯದಲ್ಲಿ ಮಹಿಳೆಯರು ಕುಂಭ, ಕಳಸ,ಡೊಳ್ಳು, ಪುರವಂತಿಕೆ ಸೇವೆ, ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು 400ಕ್ಕೂ ಹೆಚ್ಚು ಮುತ್ತೈದೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಮಾಡಲಾಯಿತು ಅಂದು ರಥವನ್ನು ಮಹಿಳೆಯರೇ ಉತ್ಸಾಹದಿಂದ ರಥವನ್ನು ಜೈ ಘೋಷಣೆಗಳ ಮೂಲಕ ಎಳೆಯುವುದು ವಿಶೇಷ. ದಿನಾಂಕ 2-4-2025ರಂದು ಧರ್ಮಲಿಂಗೇಶ್ವರ ಮೂರ್ತಿಗೆ ವಿಶೇಷ ಅಭಿಷೇಕಗಳ ಮೂಲಕ ಅಲಂಕರಿಸಿ ಎರಡನೆಯ ರಥೋತ್ಸವವನ್ನು ಪುರುಷರು ದೇವಸ್ಥಾನದ ಆವರಣದಿಂದ ಪಾದಕಟ್ಟಿಯವರೆಗೆ ಅದ್ದೂರಿಯಿಂದ ಎಳೆದರು ಬೀದಿ ಉದ್ದಕ್ಕೂ ನೆರೆದಿದ್ದ ಭಕ್ತರು ಉತ್ತತ್ತಿ,ಹೂ, ಜೈ ಘೋಷಣೆ ಮೂಲಕ ತಮ್ಮ ಭಕ್ತಿಯನ್ನು ಅರ್ಪಿಸಿದರು. ಜಾತ್ರೆಯಲ್ಲಿ ಹಗರಟಗಿ ಗ್ರಾಮದ ಸಕಲ ಭಕ್ತರಿಂದ ಹಾಗೂ ಗ್ರಾಮದ ಸುತ್ತಮುತ್ತಲಿನ ಜನರು ಭಾಗವಹಿಸಿದರು ಜಾತ್ರೆಯ ನೇತೃತ್ವವನ್ನು ದೇವಸ್ಥಾನದ ಸಮಿತಿಯವರು ಹಾಗೂ ಹಗರಟಗಿ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ವಹಿಸಿಕೊಂಡಿದ್ದರು
