ಯಾದಗಿರಿ:ಸುರಪುರ
ಶರಣಬಸವೇಶ್ವರರ ಜಾತ್ರೆಯ ಅಂಗವಾಗಿ ಅನ್ನ ಸಂತರ್ಪಣೆ ಕಾರ್ಯಕ್ರಮ ನೆರವೇರಿಸಲಾಯಿತು, ಸುರಪುರ ಪಟ್ಟಣದ ಮಾರುಕಟ್ಟೆಯ ಹತ್ತಿರ ವಲ್ಲಭಾಯಿ ಚೌಕ್ ಹತ್ತಿರ ಶ್ರೀ ಮೈಲಾರಲಿಂಗೇಶ್ವರ ಬಂಗಾರ ವ್ಯಾಪಾರಸ್ಥರಾದ, ಶ್ರೀ ಮಲ್ಲಿಕಾರ್ಜುನ್ ಗೂಡೂರ್ ಇವರ ಗೆಳೆಯರ ಬಳಗದ ವತಿಯಿಂದ ಕಲಬುರ್ಗಿಯ ದಾಸೋಹಿ ಶ್ರೀ ಶರಣಬಸಪ್ಪ ಅಪ್ಪನವರ ಜಾತ್ರಾ ಮಹೋತ್ಸವದ ಅಂಗವಾಗಿ ದಾಸೋಹ ಕಾರ್ಯಕ್ರಮವನ್ನು,ಸುರಪುರ ಪಟ್ಟಣದಲ್ಲಿ ನೆರವೇರಿಸಿದರು ಮೊದಲಿಗೆ ಶ್ರೀ ಶರಣಬಸವೇಶ್ವರರ ಭಾವಚಿತ್ರಕ್ಕೆ ಪೂಜಾ ಕಾರ್ಯಕ್ರಮವನ್ನು ಭಾಗ್ಯವಂತ ಕೊಟ್ರಯ್ಯ ಸ್ವಾಮಿ ಮಠಪತಿ ಇವರು ನೆರವೇರಿಸಿ ಇವರು ಮಾತನಾಡಿ, ದಾಸೋಹ ಕಾಯಕ ಮಾಡುವುದು ಒಂದು ಒಳ್ಳೆಯ ಸಮಾಜದ ಕಾರ್ಯ, ಬಸವೇಶ್ವರರ ದಾಸೋಹ ಕಾರ್ಯವನ್ನು ಎಲ್ಲರೂ ಜೀವನದಲ್ಲಿ ಅನ್ವಯ ಮಾಡಿಕೊಳ್ಳಬೇಕು, ಸಮಾಜದಲ್ಲಿ ನಾವೆಲ್ಲರೂ ಬಸವಣ್ಣರ ತತ್ವವನ್ನು ಪಾಲಿಸಬೇಕು ಎಂದು ಅಭಿಪ್ರಾಯ ಪಟ್ಟರು, ಸದರಿ ಕಾರ್ಯಕ್ರಮದಲ್ಲಿ ಚಂದ್ರಶೇಖರ್ ಗುಡೂರ್ ಸೋಮು ರಂಗನಪೇಟ್, ಭೀಮರಾಯ ಕುಂಬಾರ ಪೇಟ್, ಕೊಟ್ರಯ್ಯ ಸ್ವಾಮಿ ಮಠಪತಿ, ಮಂಜುನಾಥ್ ಗಚ್ಚಿನಮನಿ, ಹರ್ಷ ಹಳ್ಳ, ಮಹೇಶ್ ಹಳ್ಳ, ಬಸವರಾಜ್ ಹೂಗಾರ್, ಸಂತೋಷ್ ಚಿಕ್ಕನಹಳ್ಳಿ, ದೇವಿಂದ್ರ ತಳವಾರಿ, ಹರ್ಷವರ್ಧನ್ ಪತ್ತಾರ್, ಮತ್ತು ಸುರಪುರ ಪಟ್ಟಣದ ಸಕಲ ಭಕ್ತಾದಿಗಳು ಸದರಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ: ಸದ್ರಾಮ ಬೇವಿಮಟ್ಟಿ