ಹಾಸನ:- ವಿಮೆನ್ ಇಂಡಿಯಾ ಮೂವ್ಮೆಂಟ್ ಹಾಸನ ಜಲ್ಲಾ ಸಮಿತಿ ವತಿಯಿಂದ ಅಧಿಕಾರದಲ್ಲಿ ಮಹಿಳೆ, ನೈಜ ಸಬಲೀಕರಣವು ಮಹಿಳಾ ರಾಜಕೀಯ ಪ್ರಾತಿನಿಧ್ಯದಲ್ಲಿದೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಿಮ್ ಜಿಲ್ಲಾದ್ಯೆಕ್ಷೆ ಅಫ್ರೋಜಾ ಬೇಗಂ ರವರು ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ಕೂಡ ಪ್ರತಿನಿತ್ಯ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇದೆ, ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ, ಹಾಗೂ ಕೊಲೆಗಳನ್ನು ಖಂಡಿಸಿ, ದೇಶ ಹಾಗೂ ಒಳ್ಳೆಯ ಸಮಾಜ ಕಟ್ಟಲು ಮಹಿಳೆಯರು ಎದ್ದು ನಿಲ್ಲಬೇಕಿದೆ, ಪ್ರತಿಯೊಬ್ಬ ಮಹಿಳೆಯೂ ಸಹ ರಾಜಕೀಯದಲ್ಲಿ ಭಾಗಿಯಾಗಿ ದಮನಿತರ ಧ್ವನಿಯಾಗಿ ರಾಜಕೀಯದಲ್ಲಿ ಭಾಗಿಯಾಗಬೇಕಿದೆ ಎಂದರು. ಹಾಗೂ ಈ ದೇಶದ ಸಂವಿಧಾನವು ಮಹಿಳೆಯರಿಗೆ ಎಲ್ಲಾ ಹಕ್ಕುಗಳನ್ನು ನೀಡಿದ್ದು ಮಹಿಳೆಯರು ಕ್ರೀಡೆ, ಶಿಕ್ಷಣದ ಜೊತೆಗೆ ರಾಜಕೀಯದಲ್ಲಿಯೂ ಸಹ ಪ್ರಾತಿನಿಧ್ಯ ಸಾಧಿಸಬೇಕು ಎಂದು ಹೇಳಿದರು. ದಿನನಿತ್ಯ ಮಹಿಳೆಯರ ಮೇಲೆ ದೌರ್ಜನ್ಯ, ರೇಪ್, ಕೊಲೆಗಳನ್ನು ಮಾಡುವವರ ಮೇಲೆ ಯಾವುದೇ ರೀತಿಯ ಕಠಿಣ ಕಾನೂನು ರೂಪಿಸುವಲ್ಲಿ ಹಾಗೂ ಮಹಿಳೆಯರಿಗೆ ಸಂಪೂರ್ಣ ಸುರಕ್ಷತೆ ನೀಡುವಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ವಿಫಲವಾಗಿದೆ. ಆದ್ದರಿಂದ ನಾವು ಒಂದು ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹಮ್ಮಿ ವಿಮ್ ನ ಜೊತೆಗೂಡಿ ತಮಗಾಗುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ತಮ್ಮ ಹಕ್ಕುಗಳನ್ನು ಪಡೆಯಬೇಕು ಎಂದು ಹೇಳಿದರು. ಹಾಗೂ ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಜನರ ಪರವಾಗಿ ಆಡಳಿತ ನಡೆಸುವ ಬದಲು ಅಸಂವಿಧಾನಿಕ ಜನವಿರೋಧಿ ಕಾಯ್ದೆಗಳಾದ ತ್ರಿಬಲ್ ತಲಾಖ್, ಹಿಜಾಬ್, ಮದರಸ, ವಕ್ಫ್ ತಿದ್ದುಪಡಿ ಕಾಯ್ದೆಗಳನ್ನು ತರುವ ಮೂಲಕ ದೇಶದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸಕ್ಕೆ ಮುಂದಾಗಿದ್ದು ಇದಕ್ಕೆ ವಿಮ್ ಖಂಡಿಸುತ್ತದೆ ಎಂದು ಹೇಳಿದರು.
ಸಭೆಯನ್ನು ಉದ್ದೇಶಿಸಿ ವಿಮ್ ಹಾಸನ ಜಿಲ್ಲಾ ಸಮಿತಿ ಸದಸ್ಯೆ ಸುಫಿಯಾ ರವರು ಮಾತನಾಡಿ ಇಂದಿನ ಕಾಲಘಟ್ಟದಲ್ಲಿ ಮಹಿಳೆಯರು ಕೇವಲ ಮನೆಯ ಕೆಲಸಕ್ಕೆ ಮಾತ್ರ ಸೀಮಿತವಾಗದೆ, ದೇಶದ ಎಲ್ಲಾ ರಂಗಗಳಲ್ಲೂ ಮಹಿಳೆಯರು ಪ್ರಾತಿನಿಧ್ಯ ಸಾಧಿಸುತ್ತಿದ್ದಾರೆ. ಆದರೆ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯಿದ್ದು ಮಹಿಳೆಯರು ರಾಜಕೀಯದಲ್ಲಿ ಧುಮುಕಿ ರಾಜಕೀಯ ಆಗುಹೋಗುಗಳ ಬಗ್ಗೆ ತಿಳಿದುಕೊಂಡು, ಮಹಿಳೆಯರ ಪರವಾಗಿ ಹಾಗೂ ಸಮಾಜದ ಪರವಾಗಿ ಹೋರಾಟ, ಆಂದೋಲನಗಳನ್ನು ನಡೆಸುವ ಮುಖಾಂತರ ಮಹಿಳೆಯರ ಹಕ್ಕುಗಳನ್ನು ಪಡೆಯಬೇಕು, ಕ್ರೀಡೆ, ಶಿಕ್ಷಣದ ಜೊತೆಗೆ ರಾಜಕೀಯದಲ್ಲಿಯೂ ಸಹ ಮಹಿಳೆಯರು ಪ್ರಾತಿನಿಧ್ಯ ಸಾಧಿಸಿದಾಗ ಮಾತ್ರ ಮಹಿಳೆಯರ ನೈಜ ಸಬಲೀಕರಣವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಮ್ ರಾಜ್ಯ ಸಮಿತಿ ಸದಸ್ಯೆ ರೂಬಿ ವಾಹಿದ್, ಹಾಸನ ಜಿಲ್ಲಾ ಕೋಶಾಧಿಕಾರಿ ಸಲ್ಮಾ ಖಾನಂ ಹಾಗೂ ಸಮಿತಿ ಸದಸ್ಯೆಯರು, ವಿಮ್ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ವರದಿ ಪರ್ವಿಜ್ ಅಹಮದ್ ಹಾಸನ