ನಂಜನಗೂಡು ಪೊಲೀಸ್ ಉಪ ವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಪೊಲೀಸ್ ಅಧಿಕಾರಿ ರಘು ಅವರು 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ತಮ್ಮ ಸಿಬ್ಬಂದಿಗಳ ಒಳಗೂಡಿ ಧ್ವಜವನ್ನು ಹಾರಿಸುವುದರ ಹಾಗೂ ಮಹಾತ್ಮ ಗಾಂಧೀಜಿ, ಅಂಬೇಡ್ಕರ್ ಭಾವಚಿತ್ರಗಳಿಗೆ, ಧ್ವಜ ಕಂಬಕ್ಕೆ ಪೂಜಾ ಸಲ್ಲಿಸುವುದರ ಮೂಲಕ ಭಕ್ತಿ ಭಾವಗಳೊಂದಿಗೆ ರಾಷ್ಟ್ರಗೀತೆಯನ್ನು ಹಾಡುವುದರ ಮೂಲಕ ನಮಸ್ಕರಿಸುವುದರ ಮೂಲಕ ಸಂಭ್ರಮವಾಗಿ ಆಚರಣೆ ಮಾಡಿದರು. ಹಿರಿಯಾ ಅಧಿಕಾರಿ ರಘು ಅವರು ಎಲ್ಲರಿಗೂ ಹಸ್ತ ಲಾಗವ ನೀಡಿ ಶುಭ ಹಾರೈಸಿದರು. ಎಲ್ಲಾ ಪೊಲೀಸ್ ಸಿಬ್ಬಂದಿ ವರ್ಗ ಬಂದೂಕು ಎತ್ತಿ ಹಿಡಿದು ಧ್ವಜಕ್ಕೆ ವಂದನೆ ಹಾಗೂ ಗೌರವವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಸುನಿಲ್, ಗ್ರಾಮಾಂತರ ಉಪನಿರೀಕ್ಷಕರಾದ ನಾಗರಾಜ್, ಭಾಸ್ಕರ್, ಗೋಪಾಲಕೃಷ್ಣ ಮತ್ತು ಎಲ್ಲಾ ಪೊಲೀಸ್ ಸಿಬ್ಬಂದಿ ವರ್ಗದವರು ಹಾಜರಿದ್ದರು.
