ಮೈಸೂರು ಜಿಲ್ಲಾ ವಿಶ್ವಕರ್ಮ ಯುವ ಜಾಗೃತಿ ವೇದಿಕೆ ಇವರ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜಗನ್ಮೋಹನ ಅರಮನೆ ಮೈಸೂರಿನಲ್ಲಿ ನಡೆಯಿತು. ಈ ಕಾರ್ಯಕ್ರಮ ವನ್ನು ಅಧ್ಯಕ್ಷರಾದ ಕೆಂಡಗಣ್ಣ ವಿಶ್ವಕರ್ಮ ಇವರು ಅದ್ದೂರಿಯಾಗಿ ನಡೆಸಿದರು. ಸುಮಾರು 125 ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಅನಂತ ಶ್ರೀ ವಿಭೂಷಿತ ಶಿವಸಜ್ಞಾನತೀರ್ಥ ಮಹಾಸ್ವಾಮಿಗಳು ಅರೆಮಗನಹಳ್ಳಿ ವಹಿಸಿದ್ದರು. ಉದ್ಘಾಟನೆ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯನವರು ನೆರವೇರಿಸಿದರು. ಅವರಿಗೆ ವಿವಿಧ ಬೇಡಿಕೆನೊಳಗೊಂಡ ಮನವಿ ಪತ್ರವನ್ನು ವಿಶ್ವಕರ್ಮದ ಜನಾಂಗದ ಅಧ್ಯಕ್ಷರಾದ ಕೆಂಡಗಣ್ಣ ಸ್ವಾಮಿಯವರು ಜನಾಂಗದ ವಿವಿಧ ಮುಖಂಡರು ಸೇರಿ ಮನವೇನು ಸಲ್ಲಿಸಲಾಯಿತು. ಘನ ಉಪಸ್ಥಿತಿ ಶ್ರೀ ಜಿ ರಘು ಆಚಾರ್ ವಿಧಾನ ಪರಿಷತ್ ಸದಸ್ಯರು, ಸಮಾರಂಭದ ಅಧ್ಯಕ್ಷತೆಯನ್ನು ನಂದಕುಮಾರ್ ಮಾಜಿ ಅಧ್ಯಕ್ಷರು ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ವಹಿಸಿದ್ದರು, ಶ್ರುತಿ ಪ್ರಹ್ಲಾದ್ ಹಿನ್ನೆಲೆ ಗಾಯಕಿ ಸಮಾರಂಭದಲ್ಲಿ ಹಲವಾರು ಗಣ್ಯರು ರಾಜಕೀಯ ಮುಖಂಡರು ಉಪಸ್ಥಿತರಿದ್ದರು
