ನಂಜನಗೂಡಿನ ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಸರಕಾರಿ ಜೂನಿಯರ್ ಕಾಲೇಜು ಆಟದ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಹಿರಿಯಾಪತ್ರಿಕ ಸಂಪಾದಕ ಕಲಿಗಾಲ ವಾರಪತ್ರಿಕೆಯ ಕಲ್ಕಿ ಶ್ರೀಯುತ ದ್ವಾರಕನಾಥ್ ಅವರಿಗೆ ಮಾನ್ಯ ಜನಪ್ರಿಯ, ಸರಳ ಸದ್ಗುಣಗಳ ನಾಯಕರು, ಶಾಸಕರಾದ ದರ್ಶನ್ ಧ್ರುವನಾರಾಯಣ್, ನಗರಸಭೆ ಅಧ್ಯಕ್ಷರು ಶ್ರೀಕಂಠ, ತಾಲೂಕು ದಂಡಾಧಿಕಾರಿಗಳಾದ ಶಿವಕುಮಾರ್ ಅತ್ತೂರು, ಕಾಳ ಪಂಚಾಯತಿ ಅಧಿಕಾರಿ, ನಗರಸಭೆ ಪೌರಾಯುಕ್ತರು, ಡಿವೈಎಸ್ಪಿ ನಗರಸಭೆ ಸದಸ್ಯರು ರಾಜಕೀಯ ಮುಖಂಡರು ಹಾಗೂ ಹಲವಾರು ಗಣ್ಯರು ಒಟ್ಟುಗೂಡಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಆತ್ಮೀಯವಾಗಿ ಶಾಲು, ಹಾರ ಹಾಗೂ ಪ್ರಶಸ್ತಿ ಪತ್ರ ನೀಡುವುದರ ಮೂಲಕ ಸನ್ಮಾನಿಸಲಾಯಿತು. ಈ ಸನ್ಮಾನ ಸಮಾರಂಭವನ್ನು ಸಾವಿರಾರು ದೇಶಪ್ರೇಮಿಗಳು ಕಣ್ಣಾರೆ ಸವಿದು ಸಂಭ್ರಮಿಸಿದರು. ಈ ಸಮಾರಂಭವು ಅದ್ದೂರಿಯಾಗಿ ನಡೆಯಿತು. ಪತ್ರಿಕಾ ಸಂಪಾದಕರಿಗೆ ಸನ್ಮಾನ ಸಮಾರಂಭವನ್ನು ಕಂಡು ಹರ್ಷ ಹಾಗೂ ಪ್ರಶಂಸೆಯನ್ನು ವ್ಯಕ್ತಪಡಿಸಿದರು.
