ನಂಜನಗೂಡಿನ ತಾಲೂಕಿನ ಸಿವಿಲ್ ಕ್ರಿಮಿನಲ್ ಕೋರ್ಟ್ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನೆರೆದಿದ್ದ ಎಲ್ಲಾ ದೇಶ ಪ್ರೇಮಿಗಳೊಂದಿಗೆ ಮನರಂಜನ ಗೀತೆ ಹಾಡುವುದರ ಮೂಲಕ ಹಾಗೂ ನ್ಯಾಯಾಧೀಶರುಗಳು, ಗಣ್ಯರು, ದೇಶಪ್ರೇಮಿ ಭಾಷಣ ಮಾಡುವುದರ ಮೂಲಕ ಆದ್ದೂರಿಯಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಮಾರಂಭದಲ್ಲಿ ಹಿರಿಯ ನ್ಯಾಯಾಧೀಶರದ ಸತೀಶ್ ಅವರು ಸ್ವಾತಂತ್ರ ದಿನಾಚರಣೆಯನ್ನು ಭಾಷಣವನ್ನು ಸವಿವರಾಗಿ ವಿವರಿಸಿದರು ಹಾಗೂ ದೇಶವನ್ನು ಉಳಿಸಿಕೊಂಡು ಹೋಗುವುದರ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದರು. ಕೃತಿಕಾ ಆರ್ ಪವರ್ ಹಿರಿಯ ನ್ಯಾಯಾಧೀಶರು, ಸತೀಶ್ ವಕೀಲರು, ಮುಂತಾದ ಗಣ್ಯ ವ್ಯಕ್ತಿಗಳು ಸ್ವಾತಂತ್ರ್ಯ ದಿನಾಚರಣೆಯ ವೇದಿಕೆಯಲ್ಲಿ ಪಾಲ್ಗೊಂಡಿದ್ದರು.
