ಎರಡನೇ ಪತ್ನಿ ಮಗನಿಂದ ತಂದೆ ಹತ್ಯೆ.ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ.
ಮೈಸೂರು ಎರಡನೇ ಪತ್ನಿ ಮಗನಿಂದಲೇ ತಂದೆ ಭೀಕರವಾಗಿ ಕೊಲೆಯಾದ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೀಡಿಕಾಲೋನಿಯಲ್ಲಿ ನಡೆದಿದೆ.ಮುತೀಬ್(36) ಕೊಲೆಯಾದ ವ್ಯಕ್ತಿ.ಎರಡನೇ ಪತ್ನಿ ಮಗ ಮಾತೀನ್ ತಂದೆಯನ್ನೇ ಕೊಂದ ಮಗ.ತನ್ನ ತಾಯಿಯನ್ನ ಎರಡನೇ ಮದುವೆ ಆಗಿದ್ದ ಮುತೀಬ್ ಜೊತೆ ಆಗಾಗ ಮತೀನ್ ಗಲಾಟೆ ಮಾಡುತ್ತಿದ್ದ.ತಾಯಿಯನ್ನ ಮದುವೆ ಆಗಿದ್ದು ಮತೀನ್ ಇಷ್ಟ ಇರಲಿಲ್ಲವೆಂದು ಹೇಳಲಾಗಿದೆ.ಈ ವಿಚಾರದಲ್ಲಿ ಕೆಲವು ದಿನಗಳ ಹಿಂದೆ ಮುತೀಬ್ ಜೊತೆ ಮತೀನ್ ಗಲಾಟೆ ಮಾಡಿದ್ದ.ನಂತರ ಇಬ್ಬರ ನಡುವೆ ರಾಜಿ ಆಗಿತ್ತು.ನಿನ್ನೆ ತಡರಾತ್ರಿ ಮುತೀಬ್ ಹೋಟೆಲ್ ನಿಂದ ತೆರಳಿದ್ದಾರೆ.ಮುತೀಬ್ ನ ಮತೀನ್ ಹಿಂಬಾಲಿಸಿ ಹೋಗಿ ಸಾತಗಳ್ಳಿಯಲ್ಲಿರುವ VTO ಕಾಲೇಜ್ ಬಳಿ ಇರುವ ಬಾರ್ ಬಳಿ ನಿಂತಿದ್ದಾಗ ಅಟ್ಯಾಕ್ ಮಾಡಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಂದು ಪರಾರಿಯಾಗಿದ್ದಾನೆ.ಉದಯಗಿರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಮತೀನ್ ಬಂಧನಕ್ಕೆ ಜಾಲ ಬೀಸಿದ್ದಾರೆ.