ಯಾದವಾಡ ಗ್ರಾಮದ ಆರಾಧ್ಯ ದೈವ ಚೌಕೇಶ್ವರ , ಘಟ್ಟಗಿ ಬಸವೇಶ್ವರ ಜಾತ್ರೆಯ ಅಂಗವಾಗಿ ಗುಡಿಯ ಆವರಣದಲ್ಲಿನ ಕುಸ್ತಿ ಮೈದಾನದಲ್ಲಿ ಸೋಮವಾರ ನಡೆದ ಪುರುಷರ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಗಳು ಕುಸ್ತಿ ಪ್ರೇಮಿಗಳ ಮನ ತನಿಸಿದವು.
ಕ್ರೀಡಾಪಟುಗಳು ಯಾವುದೇ ರಿತಿಯ ಹೊಂದಾಣಿಕೆಯ ಆಟ ಆಡಬಾರದು ಅಂತಹ ಆಟಗಾರರು ಕಂಡು ಬಂದಲ್ಲಿ ಅವರನ್ನು ಕುಸ್ತಿ ಪಂದ್ಯಾವಳಿಯಿಂದ ಹೊರಹಾಕಲಾಗುವುದು ಎಂದು ಕಮೀಟಿಯವರು ಹೇಳುತ್ತಿದ್ದರು. ಕುಸ್ತಿ ಪಂದ್ಯಗಳಲ್ಲಿ ರಾಷ್ಟ್ರಮಟ್ಟದ ಪೈಲ್ವಾನರು ಭಾಗವಹಿಸಿದ್ದರು ಮುಧೋಳ , ಅಥಣಿ, ಹನಗಂಡಿ, ಜಮಖಂಡಿ ಮಹಾರಾಷ್ಟ್ರದಿಂದಲು ಪೈಲ್ವಾನರು ಬಂದಿದ್ದರು.
ಶಿವಾನಂದ ಹಂಚನಾಳ ಶಿರೋಳ , ವರುಣ ಕುಮಟೊಳ್ಳಿ ಮುಧೋಳ ಇವರು ಕುಸ್ತಿಯ ಹೊಸ ಹೊಸ ದಾವ ಪೇಚ ಮತ್ತು ಪಟ್ಟುಗಳನ್ನು ಪ್ರದರ್ಶಿಸಿದರು. ಇವರ ಸೆಣಸಾಟ ನೋಡಿ ಜನರು ಕೇಕೇ ಹಾಕುವುದು ಸೀಟಿ ಹೊಡೆಯುವುದು ಕೆಳಗೆ ಬಿದ್ದಾಗ ಓವ್ ಅನ್ನುವದು ಉತ್ತಮ ಅಂಕ ಪಡೆದಾಗ ಚಪ್ಪಾಳೆ ತಟ್ಟಿ ಪ್ರೊತ್ಸಾಹಿಸಿದರು.
ಕುಸ್ತಿಯಲ್ಲಿ ಭಾಗವಹಿಸಿದ ಎಲ್ಲ ಪೈಲ್ವಾನರು ಕ್ರೀಡಾಮನೋಭಾವದಿಂದ ಆಡಿ ವಿಶೇಷ ನಗದು ಬಹಮಾನ ಮತ್ತು ಸತ್ಕಾರಕ್ಕೆ ಪಾತ್ರರಾದರು. ಈ ಸಂದರ್ಭದಲ್ಲಿ ನಿರ್ಣಾಯಕರಾಗಿ ಕುಸ್ತಿ ತರಬೇತುದಾರ ಶಂಕರ ಗಾಣಗೇರ ಉತ್ತಮ ತೀರ್ಪು ನೀಡಿದರು ಜಾತ್ರೆ ಕಮೀಟಿಯ ಸದಸ್ಯರಾದ ರಮೇಶ ಸಾವಳಗಿ, ಕಲ್ಮೇಶ ಗಾಣಗೇರ , ಹಣಮಂತ ಚಿಕ್ಕೇಗೌಡರ , ಗುರುನಾಥ ರಾಮದುರ್ಗ , ಹನಮಂತ ಹ್ಯಾಗಾಡಿ , ಗೊಲಪ್ಪ ಕಾಗವಾಡ , ವೆಂಕಟ ಕೇರಿ ಮಲ್ಲಪ್ಪ ರಾಮದುರ್ಗ , ಹನಮಂತ ಬಿಲಕುಂದಿ ವೆಂಕಟ ಕೇರಿ ವಿಠ್ಠಲ ಕಂಕನೋಡಿ ಮಲ್ಲಪ್ಪ ರಾಮದುರ್ಗ, ಎಮ್ ಎಮ್ ಶೆಟ್ಟರ ಪಂದ್ಯಾವಳಿಗಳನ್ನು ಅಚ್ಚುಕಟ್ಟಾಗಿ ಆಯೊಜಿಸಿದ್ದರು ಪಂದ್ಯದಲ್ಲಿ ಗೆದ್ದವರಿಗೆ ಜಾತ್ರೆ ಕಮೀಟಿ ಅಧ್ಯಕ್ಷರಾದ ಶಿವಪ್ಪಗೌಡ ನ್ಯಾಮಗೌಡರ ಬಹುಮಾನ ನೀಡಿ ಗೌರವಿಸಿದರು.
