ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕು ಹರಿಶ್ಚಂದ್ರಪುರ ಅಂಗನವಾಡಿ ಕೇಂದ್ರದಲ್ಲಿ ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಮುದಾಯ ಆರೋಗ್ಯ ಕೇಂದ್ರ ಗೋಣಿಕೊಪ್ಪವತಿಯಿಂದ ರಾಷ್ಟ್ರೀಯ ಕಿಶೋರಿ ಸ್ವಾಸ್ತ್ಯ ಕಾರ್ಯಕ್ರಮದ ಅಡಿಯಲ್ಲಿ ಆಪ್ತ ಸಮಾಲೋಚಕರಾದ ಶ್ರೀಮತಿ ರಮ್ಯರವರು ಭೇಟಿ ನೀಡಿ ಹದಿಹರಿಯದ ಹೆಣ್ಣುಮಕ್ಕಳಿಗೆ ಪೌಷ್ಟಿಕ ಆಹಾರ ಸೇವನೆ,ಋತುಚಕ್ರ,ಶುಚಿತ್ವ, R T I/S T I ಉತ್ತಮ ಜೀವನ ಶೈಲಿ ,ಆರೋಗ್ಯ, ಬಾಲ್ಯ ವಿವಾಹ, ಹಾಗೂ ಬಾಲ ಗರ್ಭಿಣಿ ಯಿಂದಾಗುವ ತೊಂದರೆಗಳ ಬಗ್ಗೆ ಮೊಬೈಲ್ ಬಳಕೆಯಿಂದಾಗುವ , ಹದಿ ಹರೆಯದ ಹೆಣ್ಣು ಮಕ್ಕಳು ಅನುಭವಿಸುತ್ತಿರುವ ತೊಂದರೆಗಳಾದ ಅಪೌಷ್ಟಿಕ ಮಗು,ಗರ್ಭಪಾತ, ಅನೀ ಮಿಯ ಹೆರಿಗೆ ಸಮಯ ಮರಣ ಮೊದಲಾದ ತೊಂದರೆಗಳ ಬಗ್ಗೆ ಮಾಹಿತಿ ನೀಡಿದರು ಕಿಶೋರಿಯರು ಹೇಗೆ ಇರಬೇಕು ಎಂಬುವುದರ ಬಗ್ಗೆ ಅರಿವು ಮೂಡಿಸಿದರು ಇಂದಿನ ಕಾರ್ಯ್ರಮದಲ್ಲಿ ಗೋಣಿಕೊಪ್ಪ ಗ್ರಾಮಪಂಚಾಯಿತಿ ಸದಸ್ಯೆ ರಾದ ಶ್ರೀಮತಿ ಸಪೂರ, ಆರೋಗ್ಯ ಇಲಾಖೆಯಿಂದCHO ಪೃಥ್ವಿ,ಶಿವಮ್ಮ,ಚಿತ್ರ ದಮಯಂತಿ ಹದಿಹರೆಯದ ಹೆಣ್ಣು ಮಕ್ಕಳು ಅಂಗನವಾಡಿ ಶಿಕ್ಷಕಿ ಶ್ರೀಮತಿ ಲತಾ ಪಾಲ್ಗೊಂಡು ಸಂಪೂರ್ಣ ಮಾಹಿತಿ ನೀಡಲಾಯಿತು.
