ಸುರಪುರ ಪಟ್ಟಣದ ವಕೀಲರ ಸಂಘದಲ್ಲಿ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಯಿತು.
ಡಾ:: ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ದೇವೇಂದ್ರಪ್ಪ ಬೇವಿನಕಟ್ಟಿ ಹಾಗೂ ವಕೀಲರ ಸಂಘದ ಸರ್ವ ಸದಸ್ಯರುಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಮೂಲಕ ಕಾರ್ಯಕ್ರಮವನ್ನು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ದೇವೇಂದ್ರಪ್ಪ ಬೇವಿನಕಟ್ಟಿ, ಮಾತನಾಡಿ ಎಲ್ಲರೂ ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಪಾಲಿಸಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಎಲ್ಲರೂ ನಡೆದುಕೊಳ್ಳೋಣ ಎಂದು ಹೇಳಿದರು. ಅಪ್ಪಾಸಾಹೇಬ್ ಪಾಟೀಲ್ ಮಾತನಾಡಿ ಅಂಬೇಡ್ಕರ್ ಅವರು ಬರೆಕೊಟ್ಟ ಸಂವಿಧಾನದ ಅಡಿಯಲ್ಲಿ ನಾವು ನೀವುಗಳು ಎಲ್ಲಾ ಕೆಲಸ ಮಾಡುತ್ತಿದ್ದು. ಪ್ರತಿಯೊಬ್ಬ ಪ್ರಜೆಯೂ ಈ ಸಮಾಜದಲ್ಲಿ ಸಮಾನತೆಯ ಇರುವ ಉದ್ದೇಶದಿಂದ ಹೋರಾಟ ಮಾಡಿದರು. ಹಿಂದುಳಿದ ವರ್ಗದವರಿಗೆ ಸವಿಧಾನದ ಅಡಿಯಲ್ಲಿ ಮೀಸಲಾತಿಯನ್ನು ಕಲ್ಪಿಸಿಕೊಟ್ಟ ಮಹಾನ್ ವ್ಯಕ್ತಿ. ಅವರ ತತ್ವ ಸಿದ್ಧಾಂತಗಳನ್ನು ರೂಡಿಸಿಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು . ಸದರಿ ಕಾರ್ಯಕ್ರಮದಲ್ಲಿ ನಂದನಗೌಡ ಪಾಟೀಲ್. ವೆಂಕಟೇಶ್. ಯಂಕ ರೆಡ್ಡಿ ಬೋನಳ.ವಿಶ್ವಾಮಿತ್ರ ಕಟ್ಟಿಮನಿ. ಯಲ್ಲಪ್ಪ ಹುಲಕಲ್. ಭೀಮಣ್ಣ. ಆದಪ್ಪ ಹೊಸ್ಮನಿ. ನಂದಕುಮಾರ್.ಅಪ್ಪಣ್ಣ ಗಾಯಕವಾಡ. ಮಂಜುನಾಥ್ ಗುಡಗುಂಟೆ. ಇನ್ನು ಅನೇಕ ವಕೀಲರು ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
