ಸುರಪುರ ತಾಲೂಕಿನ ದೇವಪುರ ಗ್ರಾಮದ ದೇವಪುರ್ ಕ್ರಾಸ್ ಬಳಿ ಬಳಿ ಡಾ: ಬಿ ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ದಿನಾಂಕ 14 -4- 2025 ರಂದು ಮುಂಜಾನೆ 8-0ಗಂಟೆಗೆ ಸುಮಾರಿಗೆ ಡಾ: ಬಿ ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ದೇವಪುರ ಗ್ರಾಮ ಪಂಚಾಯತಿಯಲ್ಲಿ ಮತ್ತು ಅದೇ ರೀತಿ ದೇವಪುರ ಕ್ರಾಸಿನಲ್ಲಿರುವಂತ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಿಜ್ರಮಣೆಯಿಂದ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವಪುರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದಂತಹ ಶರಣಪ್ಪ ಮತ್ತು ಗ್ರಾಮ ಪಂಚಾಯತಿ ಸದಸ್ಯರು ಬಲಭೀಮ ನಾಯಕ್ ನ್ಯಾಯವಾದಿಗಳು ಇವರು ಡಾ. ಬಿಆರ್ ಅಂಬೇಡ್ಕರ್ ಅವರ ಆದರ್ಶ ತತ್ವ ಭಾರತ ಸಂವಿಧಾನದ ಬಗ್ಗೆ ಸವಿಸ್ತಾರವಾಗಿ ತಿಳಿಹೇಳಿದರು ಬಲಭೀಮ ನಾಯಕ್ ವಕೀಲರು ಮಾತನಾಡಿ ಹಿಂದುಳಿದ ವರ್ಗದಲ್ಲಿ ಬಡತನದಲ್ಲಿ ಜನಿಸಿದ ಡಾ:ಬಿ ಆರ್ ಅಂಬೇಡ್ಕರ್ ಅವರು ಹಿಂದುಳಿದ ವರ್ಗದ ಸಮುದಾಯಗಳಿಗೆ ಎಲ್ಲಾ ಇಲಾಖೆಯಲ್ಲಿ ಸಮಾನ ಸ್ಥಾನವನ್ನು ಸಿಗಲು ಹೋರಾಟ ಮಾಡಿದ ಬಗ್ಗೆ ತಿಳಿಸುತ್ತಾ ಭಾರತಕ್ಕೆ ಅಮೂಲ್ಯ ರತ್ನವಾಗಿ ನೀಡಿದ್ದುಹಿಂದುಳಿದ ವರ್ಗದ ಕುಟುಂಬವಾಗಿದ್ದು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಿ ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಪಾಲಿಸುವಂತೆ ತಿಳಿಸಿದರು. ಅನೇಕ ಮುಖಂಡರು ಅಂಬೇಡ್ಕರ್ ಅವರ ಆದರ್ಶ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಚೆನ್ನಪ್ಪ ತಳವಾರ್ ಡಿಎಸ್ಎಸ್ ಮುಖಂಡರು, ವೆಂಕಟೇಶ್ ಜಂಗಿನ್, ಜಾನಕಾರ್,ಬಸವರಾಜ್ ಸಂತೋಷ್ ಬಾಗಲಿ,ಹನುಮಂತ ದೊಡ್ಡಮನಿ,ಅಶೋಕ್ ಕೌಲಿ,ಈಸೂಪ್ ಕಂಡಕ್ಟರ್,ಹುಸೇನ್ ಸಾಬ್ ತಿಂಥಣಿ, ಇರ್ಫಾನ್ ಮುಲ್ಲಾ,ಡಾಕ್ಟರ್ ಕಣ್ಣೀರ್ ಚಂದ್ರಕಾಂತ್ ಕವಲಿ,ದೇವಪುರ ಗ್ರಾಮದ ಹಿರಿಯರು ಯುವಕರು ದಲಿತಪರ ಸಂಘಟನೆಗಳು,ಎಲ್ಲರೂ ಪಾಲುಗೊಂಡು ಅಂಬೇಡ್ಕರ್ ಜಯಂತಿಯನ್ನು ಬಹು ವಿಜೃಂಭಣೆಯಿಂದ ನೆರವೇರಿಸಲಾಯಿತು.
