ಯಾದವಾಡ ಗ್ರಾಮದ ಜೆ.ಎನ್.ಎಸ್ ಶಾಲೆಯಲ್ಲಿ ನಡೆದ ಎಸ್.ಎಸ.ಎಲ್.ಸಿ ಪರೀಕ್ಷೆಯ ಕೊನೆಯ ದಿನವಾದ ಇಂದು ಮಕ್ಕಳ ಮುಖದಲ್ಲಿ ಸಂಭ್ರಮ ಮನೆ ಮಾಡಿತ್ತು. ಪರೀಕ್ಷೆ ಚೆನ್ನಾಗಿ ಬರೆದಿದ್ದೇವೆ ಪಲಿತಾಂಶವು ಚೆನ್ನಾಗಿಯೇ ಬರುತ್ತದೆ, ನಮ್ಮ ಶಿಕ್ಷಕರು ನಮಗೆ ಉತ್ತಮ ಶಿಕ್ಷಣ ನೀಡಿದ್ದಾರೆ. ನಮ್ಮ ವಿದ್ಯಾಭ್ಯಾಸದ ಕುರಿತು ನಮಗೆ ಪೋನ ಮಾಡಿ ವಿಚಾರಿಸುತ್ತಿದ್ದರು. ಯಾವುದೇ ರೀತಿಯ ಸಮಸ್ಯೆಗಳು ಇದ್ದರು ನಮಗೆ ಸಹಾಯ ಮಾಡಿದ್ದಾರೆ ನಾವು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಪರೀಕ್ಷೆ ಬರೆದ ವಿದ್ಯಾರ್ಥಿನಿ ವರ್ಷಿಣಿ ಶಹಾಪೂರಮಠ ಮತ್ತು ಸಿದ್ದು ದುರ್ಗನ್ನವರ ನಮ್ಮ ಪತ್ರಿಕೆಗೆ ಪ್ರತಿಕಿಯೆ ನೀಡಿದರು .ಕೊನೆಯ ದಿನದ ಪರೀಕ್ಷೆ ಮುಗಿಯುವುದನ್ನೇ ಕಾಯುತ್ತಿದ್ದ ವಿದ್ಯಾರ್ಥಿಗಳು ಪಟಾಕಿ ಹಾರಿಸಿ ಸಂಭ್ರಮಿಸಿದರು. ಶಾಲೆಯ ಮುಖ್ಯಶಿಕ್ಷಕರಾದ ಜಿ.ಎಚ್.ಕಾಂಬಳೆ ಗುರುಗಳು ಮಾತನಾಡಿ ಈ ಭಾರಿಯ ವಿದ್ಯಾರ್ಥಿಗಳು ಹೆಚ್ಚು ಶ್ರಮಪಟ್ಟಿದ್ದಾರೆ ನಮ್ಮ ಶಾಲೆಯ ಫಲಿತಾಂಶ ಚೆನ್ನಾಗಿ ಬರುತ್ತದೆ. ನಮ್ಮ ಶಾಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ ಎಲ್ಲ ಸಿಬ್ಬಂಧಿಗಳು ಮತ್ತು ನಮ್ಮ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ನಮಗೆ ಸಹಕಾರ ನೀಡಿದ್ದಾರೆ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸುತ್ತೇನೆ ಎಂದರು.
