ಇಂಡಿ: ವ್ಯಕ್ತಿಯ ಗುಣಗಳಿಂದ ಸಂಪನ್ನನಾಗುತ್ತಾನೆ, ಸದಾ ಕ್ರೀಯಾಶೀಲತೆಯನ್ನು ಮೈಗೂಡಿಸಿಕೊಳ್ಳುವ ಆದರ್ಶತನ ಇಂದು ಎಲ್ಲರಲ್ಲಿ ಬರಬೇಕಿದೆ ಎಂದು ಐಕ್ಯೂಎಸಿ ಸಂಚಾಲಕ ಪ್ರೊ. ರವಿಕುಮಾರ ಅರಳಿ ಹೇಳಿದರು.
ಅವರು ಇಂಡಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ರಮೇಶ ಆರ್.ಎಚ್ ಹಾಗೂ ಗ್ರಂಥಪಾಲಕ ತಿಪ್ಪಣ್ಣ ವಗ್ದಾಳ ಅವರು ಸಹ ಪ್ರಾಧ್ಯಾಪಕರಾಗಿ ಪದೋನ್ನತಿ ಹೊಂದಿದ ಪ್ರಯುಕ್ತ ಅಭಿನಂದಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತಾನಡಿದ ಪ್ರಾಚಾರ್ಯ ಪ್ರೊ.ರಮೇಶ ಆರ್.ಎಚ್ ” ಪದವಿ, ಗೌರವಗಳು ಬರುತ್ತಿರುತ್ತವೆ, ಕರ್ತವ್ಯದಲ್ಲಿ ಎಲ್ಲರನ್ನೂ ಸಮಾನರಾಗಿ ಕಂಡು ಕೆಲಸ ಮಾಡುವ ಪ್ರಾಮಾಣಿಕತೆ ಇರಬೇಕು ಎಂದರು. ಎಲ್ಲರಿಗೂ ಒಳಿತನ್ನು ಬಯಸುವುದು ಮುಖ್ಯಕಾರ್ಯವಾಗಿದೆ ಎಂದರು.
ಅಕ್ಕಮಹಾದೇವಿ ವಿವಿ ಸಿಂಡಿಕೇಟ್ ಸದಸ್ಯ ಪ್ರೊ. ಎಸ್.ಜೆ.ಮಾಡ್ಯಾಳ, ಬೆರಗು ಪ್ರಕಾಶನದ ರಮೇಶ ಕತ್ತಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರೊ. ಸಂಗಮೇಶ ಹಿರೇಮಠ ಸ್ವಾಗತಿಸಿದರು. ಎನ್. ಎಸ್.ಎಸ್. ಸಂಯೋಜಕ ಪರಸಪ್ಪ ದೇವರ ವಂದಿಸಿದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು , ವಿದ್ಯಾರ್ಥಿಗಳು ಹಾಜರಿದ್ದರು.
ಪೋಟೋ ಕ್ಯಾಪ್ಸನ್: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಬಡ್ತಿ ಹೊಂದಿದ ಪ್ರಾಚಾರ್ಯ ರಮೇಶ ಆರ್.ಎಚ್, ಗ್ರಂಥಪಾಲಕ ತಿಪ್ಪಣ್ಣ ವಗ್ದಾಳ ಅವರನ್ನು ಗೌರವಿಸಲಾಯಿತು.