ಹುಣಸಗಿ : ಹುಣಸಗಿ ತಾಲೂಕಿನ ಯಡಹಳ್ಳಿ ಗ್ರಾಮದ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಪಬ್ಲಿಕ್ ಶಾಲೆ, ಒಂದು ದಶಕದ ಹಿಂದೆ ತಲೆಯತ್ತಿದ ಈ ಶಾಲೆ ಬಡವರು ಮತ್ತು ಕಾರ್ಮಿಕರು, ಕೃಷಿಕರ ಮಕ್ಕಳ ಪಾಲಿಗೆ ಅಕ್ಷರದ ಅಕ್ಷಯ ಪಾತ್ರೆ ಪ್ರತಿವರ್ಷವೂ ಒಂದಿಲ್ಲಾ ಒಂದು ದಾಖಲೆ ಮಾಡುತ್ತಲೆ ಬರುತ್ತಿದೆ, ನೋಡೋದಿಕ್ಕೆ ಕುಟೀರ ಗುರುಕುಲದಂತೆ ಕಂಡರು ಸಂಸ್ಕಾರ ಸಂಸ್ಕೃತಿಯ ತೊಟ್ಟಿಲಂತಿದೆ, ಇದರ ಸಂಸ್ಥಾಪಕ ನಿರ್ಮಾಕರಾದ ಶ್ರೀ ದೀಪಕ ಮ್ಯಾಗೇರಿ ಮತ್ತು ಶ್ರೀಮತಿ ಮ್ಯಾಗೇರಿಯವರು ಹಗಲಿರಳು ಮಕ್ಕಳ ಅಕ್ಷರಭಿವೃದ್ಧಿಗಾಗಿ ಶ್ರಮಿಸುತ್ತಲೇಯಿದ್ದಾರೆ, ಸಹಶಿಕ್ಷಕರ ಅಚ್ಚುಮೆಚ್ಚಿನ ದೀಪಕ ಮ್ಯಾಗೇರಿ ನೂರಾರು ಮಕ್ಕಳಿಗೆ ನಗು ನಗುತ್ತಲೆ ಮಾತನಾಡಿಸುತ್ತಾ ಮಕ್ಕಳ ಮನದಲ್ಲಿ ಮನೆಮಾಡಿದ ಭಯವನ್ನು ಹೋಗಲಾಡಿಸಿ, ಸ್ಪರ್ಧಾತ್ಮಕ ಪರಿಕ್ಷೆಗಳಿಗೆ ಸ್ಪರ್ಧೆಯೊಡ್ಡುವ ರೀತಿಯಲ್ಲಿ ತರಬೇತಿ ನೀಡುವ ಮೂಲಕ ಇಂದು ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನಲ್ಲಿ ಬಡವರ ಪಾಲಿನ ಆಶಾಕಿರಣದಂತಾಗಿದೆ, ಈ ವರ್ಷವೂ ಅಂದರೆ 2025 ರ ವಸತಿ ಶಾಲೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನವೋದಯ ವಸತಿ ಶಾಲೆಗೆ ಆಯ್ಕೆಯಾಗುವಂತೆ ತರಬೇತಿ ನೀಡಿ ಪಾಲಕರ ಪಾಲಿಗೆ ಕೈಗೆಟಕುವ ನಕ್ಷತ್ರದಂತೆ ಹೊಳೆಯುತ್ತಿದೆ, ಈ ವರ್ಷ ಭೀಮಾಶಂಕರ ತಂದೆ :ನಿಂಗಪ್ಪ ದೊಡ್ಡಮನಿ (ಯಡಹಳ್ಳಿ )2025 ನೇ ಸಾಲಿನ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ನವೋದಯ ಶಾಲೆಗೆ ಆಯ್ಕೆಯಾಗಿರೋದು ಶ್ಲಾಘನೀಯ, ವಿದ್ಯಾರ್ಥಿಯ ಈ ಸಾಧನೆಗೆ ಶಾಲೆಯ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗ ಪಾಲಕರು ಹಾಗೂ ಊರಿನ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಅತಿ ಹೆಚ್ಚು ನವೋದಯ ಮೊರಾರ್ಜಿ ವಿವಿಧ ವಸತಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆಯಾಗುವಂತೆ ತಯಾರು ಮಾಡಿದ ಕೀರ್ತಿ ಶ್ರೀ ರೇವಣಸಿದ್ದೇಶ್ವರ ಶಾಲೆಗೆ ಸಲ್ಲುತ್ತದೆ, ಹೀಗೆ ದೀಪಕ ಮ್ಯಾಗೇರಿಯವರ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆ ಮುಂದುವರೆಯಲಿ, ಸಮಾಜದಲ್ಲಿ ಶಿಕ್ಷಣದಿಂದ ವಂಚಿತರಾದವರನ್ನ ಕರೆತಂದು ಶಿಕ್ಷಣ ನೀಡುವಂತ ಶಕ್ತಿ ಭಗವಂತನೀಡಲಿ ಅಂತ ನಮ್ಮ ಪತ್ರಿಕಾವತಿಯಿಂದ ಶುಭ ಹಾರೈಸುತ್ತೇವೆ.
