ಶಿವಮೊಗ್ಗ. ಏಪ್ರಿಲ್ 3 ಶಾವತಿ ಮುಳುಗಡೆ ಸಂತ್ರಸ್ಥರ ಪುನರ್ವಸತಿಗೆಂದು ಅರಣ್ಯ ಜಮೀನು. ಡಿ ರಿಜರ್ವ್ ಸಂಬಂಧ ಜಂಟಿ ಪರಿಶೀಲನೆಗೆ ಬಂದ ವೇಳೆ ನಿಯೋಜಿತ ಸಿಬ್ಬಂದಿಗಳಿಗೆ ಅಗತ್ಯ ಮಾಹಿತಿ ದಾಖಲೆ ಒದಗಿಸುವಂತೆ ಶಿವಮೊಗ್ಗ ತಹಸಿಲ್ದಾರ್ ರಾಜೀವ್ ವಿ ಎಸ್ ತಿಳಿಸಿದ್ದಾರೆ.
ಮಾನ್ಯ ಜಿಲ್ಲಾಧಿಕಾರಿಗಳ ಪತ್ರದ ಅನ್ವಯ ಶರಾವತಿ ಸಂತ್ರಸ್ತರ ಪುನರ್ ವಸತಿಗೆಂದು ಅರಣ್ಯ ಜಮೀನು ಬಿಡುಗಡೆಗಾಗಿ ಅನುಮತಿ ಕೋರಿ ಕೇಂದ್ರ ಸರ್ಕಾರ ಮತ್ತು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಜಂಟಿ ಸರ್ವೆ ವರದಿಗೆ ಸೂಚಿಸಿದ್ದು. ಈ ಪೈಕಿ ಶಿವಮೊಗ್ಗ ತಾಲೂಕಿನ ಕೆಳಕಂಡ ಗ್ರಾಮ ಹಾಗೂ ಸರ್ವೆ ನಂಬರುಗಳು ಒಳಗೊಂಡಿರುತ್ತವೆ.
ಚೋರಡಿ ಸರ್ವೆ ನಂಬರ್ 117. ಕೋಣೆ ಹೊಸೂರು 23. 22 ತಪ್ಪುರು 45. 44 ಮತ್ತು 19 ಕುಂಸಿ201 ಸಿಂಗನಹಳ್ಳಿ 61 ಕೊರಗಿ 30 ಶಾಂತಿಕೆರೆ 1 ಒಡೇರ ಕೊಪ್ಪ1 ಶೆಟ್ಟಿಕೆರೆ 1 ಮಂಜರಿ ಕೊಪ್ಪ 26.27 28.37.7 ಅನುಪಿನ ಕಟ್ಟೆ 127 ಹನುಮಂತಪುರ 6 ಸೂಡುರು 16 ದೊಡ್ಡ ಮತ್ತಿಲಿ 16 ಆಡಿನ ಕೊಟ್ಟಿಗೆ 17 ಕೂಡಿ 31.32. 33.34 ತಾವರೆಕೊಪ್ಪ 24ಪುರ ದಾಳು 1 ಮಲ್ಲೇಶಂಕರ ಎಸ್ಎಫ್ 1 ಶೆಟ್ಟಿಹಳ್ಳಿ 24 ಚಿತ್ರ ಶೆಟ್ಟಿ ಹಳ್ಳಿ 1.7.8.24.8 ಈ ಗ್ರಾಮಗಳ ಗ್ರಾಮಗಳ ಬಾಪ್ತು ಶರಾವತಿ ಪುನರ್ ವಸತಿ ಸೌಲಭ್ಯ ಕಲ್ಪಿಸುವ ಕುರಿತು ಅರಣ್ಯ ಭೂಮಿಯನ್ನು ಡಿ ರಿಸರ್ವ್ ಮಾಡುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ರಾಜಸ್ವ ನಿರೀಕ್ಷಕರ ನೇತೃತ್ವದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಭೂ ಮಾಲೀಕರುಗಳು ಅರಣ್ಯ ಅಧಿಕಾರಿಗಳನ್ನು ಒಳಗೊಂಡ ತಂಡವು ಜಂಟಿ ಸ್ಥಳ ಪರಿಶೀಲನ ಕಾರ್ಯಕ್ರಮವನ್ನು ನಡೆಸುವುದು.
ಈ ವೇಳೆ ಪ್ರಸ್ತಾವನೆಯಲ್ಲಿನ ದಾಖಲೆ ಸ್ಕೆಚ್ ಜಿಪಿಎಸ್ ದತ್ತಾಂಶಗಳನ್ನು ಆದರಿಸಿ ಪ್ರಸ್ತಾಪಿತ ಬ್ಲಾಕ್ ಹಾಗೂ ಸರ್ವೇ ನಂಬರ್ನಲ್ಲಿರುವ ಬ್ಲಾಕ್ ಗಡಿ ಹಾಗೂ ವಿಸ್ತೀರ್ಣವನ್ನು ಭೂಮಾಪಕರುಗಳು ಮೋಜಿಣಿ ಮಾಡಿ ಜಿಪಿಎಸ್ ದತ್ತಾಂಶಗಳನ್ನು ಸಂಗ್ರಹಿಸಿ ನಂತರ ಬ್ಲಾಕ್ ಗಡಿಯ ಒಳಗಿರುವ ಪ್ರದೇಶದಲ್ಲಿನ ಭೂ ಅನುಭೋಗದಾರರು/ ಅಥವಾ ಇವರ ಪರವಾಗಿ ವಾರ ಸುದಾರರು ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಆಡಳಿತಾಧಿಕಾರಿಗಳವರ ಸಮ್ಮುಖದಲ್ಲಿ ಸ್ಥಳದಲ್ಲಿ ಹಾಜರಾಗಿ ಭೂ ಅನುಭೋಗದಾರರು ಅನುಭೋಗದಲ್ಲಿರುವ ಪ್ರದೇಶವನ್ನು ತೋರಿಸಿದ ಆಧಾರದ ಮೇಲೆ ಸದರಿಯವರ ಅನುಭೋಗದಲ್ಲಿರುವ ಪ್ರದೇಶದ ಹಾಗೂ ವಿಸ್ತೀರ್ಣವನ್ನು ಮೋಜಣಿ ಮಾಡಿಕೊಂಡು ಡಿಜಿಪಿಎಸ್ ದತ್ತಾಂಶಗಳು ಹಾಗೂ ವಿಸ್ತೀರ್ಣದ ವಿವರಗಳನ್ನು ಸಂಗ್ರಹಿಸಿಕೊಂಡು ನಿಯಮಾನುಸಾರ ಕ್ರಮ ವಹಿಸಲಾಗುವುದು. ಈ ಸಂದರ್ಭದಲ್ಲಿ ನಿಯೋಜಿತ ಸಿಬ್ಬಂದಿಗಳಿಗೆ ಅಗತ್ಯ ಮಾಹಿತಿ ಮತ್ತು ದಾಖಲೆ ಒದಗಿಸಬೇಕೆಂದು ತಿಳಿಸಿರುತ್ತಾರೆ.
ವರದಿ. MH ರಾಘವೇಂದ್ರ ಸಂಪೋಡಿ.
