ಅರಸೀಕೆರೆ : ಬಾಲಕನಿಗೆ ದ್ವಿಚಕ್ರ ವಾಹನವನ್ನು ಓಡಿಸಲು ಅವಕಾಶ ಮಾಡಿಕೊಟ್ಟ ಬೈಕ್ ಮಾಲೀಕರಿಗೆ ಅರಸೀಕೆರೆ ನಗರದ ಹಿರಿಯ ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ 26 ಸಾವಿರ ರೂ.ದಂಡ ವಿಧಿಸಿದೆ.

- ನಗರದ ಸಿದ್ದಪ್ಪನಗರ ಬಡಾವಣೆ ಮುಖ್ಯ ರಸ್ತೆಯಲ್ಲಿ ಮಾ.18ರಂದು ಬೈಕ್ ವೀಲಿಂಗ್ ಮಾಡುತ್ತಿದ್ದ ಬಾಲಕನ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಾಹನ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು
- ಮಾಲೀಕರಿಗೆ 26 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ. ಇತ್ತೀಚೆಗೆ ನಗರದ ರಸ್ತೆಗಳಲ್ಲಿ
- ಅಪ್ರಾಪ್ತರು ಸೇರಿದಂತೆ ಹೆಲವರು ಬೈಕ್ ವೀಲಿಂಗ್ ಮಾಡುವ ಹಾವಳಿ ಹೆಚ್ಚಾಗಿದೆ. ಸ್ಥಳೀಯ ಪೊಲೀಸರ ದಿಟ್ಟ ಕ್ರಮದಿಂದ ಬೈಕ್ ವೀಲಿಂಗ್ ಮಾಡುವವರ ಮೇಲೆ ಕೇಸ್ ದಾಖಲು ಮಾಡುತ್ತಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ
• ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ - ನಿಮ್ಮ ಸುತ್ತ ಬೈಕ್ ವೀಲಿಂಗ್ ನಡೆಯುತ್ತಿದ್ದರೆ ಕರ್ಕಶ ಶಬ್ದದ ಸೈಲೆನ್ಸರ್ ಧ್ವನಿಮಾಡುತ್ತಿದ್ದರೆ 112 ಕರೆಮಾಡಿ .
ವರದಿ ಪರ್ವಿಜ್ ಅಹಮದ್ ಅರಸೀಕೆರೆ