.
ಶಿವಮೊಗ್ಗ ತಾಲೂಕಿನ ಆದ್ಯಂತ ಅಕ್ರಮ ಮಧ್ಯ ಮಾರಾಟ ಹಾವಳಿ ಮಾರಾಟ ಹಾವಳಿ ಜೋರಾಗಿದ್ದು – ವಾರಕ್ಕೊಮ್ಮೆ ಕಲೆಕ್ಷನ್ ಮಾಡಿಕೊಂಡು ಸುಮ್ಮನಿದೆಯಾ ಅಬಕಾರಿ ಇಲಾಖೆ.
ಶಿವಮೊಗ್ಗ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಹಾಗೂ ಪಟ್ಟಣ ಪ್ರದೇಶದಲ್ಲಿ ಹೋಟೆಲ್ ಕಿರಾಣಿ ಅಂಗಡಿ ಹಾಗೂ ಕೆಲವು ಮನೆಗಳಲ್ಲಿ ಅಕ್ರಮಮಧ್ಯ ಮಾರಾಟ ನಡೆಸುತ್ತಿದ್ದರು ಶಿವಮೊಗ್ಗ ತಾಲೂಕಿನ ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ವಾರಕ್ಕೊಮ್ಮೆ ಬರುವ ಕಮಿಷನ್ ಬಂದರೆ ಸಾಕು ಯಾರು ಏನಾದರೇನು ಊರು ಹಾಳಾದರೇನು ಎಂಬಂತೆ ವರ್ಥಿಸುತ್ತಿರುವದನ್ನು ಕಂಡು ಹೆಣ್ಣು ಮಕ್ಕಳು ಹಿಡಿಶಾಪ ಹಾಕುವಂತೆ ಆಗಿದೆ.
ತಾಲೂಕಿನ ಆದ್ಯಂತ ಹಳ್ಳಿ ಹಳ್ಳಿಗಳಲ್ಲಿ ಮದ್ಯ ಮಾರಾಟದ ದಂದೆ ಕಣ್ಣಿಗೆ ಕಾಣಿಸುತ್ತಿದ್ದರು ತಮಗೆ ಏನು ಗೊತ್ತಿಲ್ಲ ಎಂಬಂತೆ ತಾಲೂಕಿನ ಅಬಕಾರಿ ಅಧಿಕಾರಿಗಳು ನಿದ್ರೆಗೆ ಜಾರಿ ದಂತೆ ನಟಿಸಿ ಕಮಾಯಿ ಪಡೆದುಕೊಳ್ಳುತ್ತಿದಾರೆ. ಇವರ ಈ ರೀತಿಯ ನಿರ್ಲಕ್ಷತನವು ಗ್ರಾಮೀಣ ಭಾಗದ ಅನೇಕ ಕುಟುಂಬಗಳನ್ನು ಬೀದಿ ಪಾಲು ಮಾಡುತ್ತಿದೆ. ಅತಿ ಹೆಚ್ಚಾಗಿ ಕುಡಿತದ ಚಟಕ್ಕೆ ಬೀಳುತ್ತಿರುವ ಇವತ್ತಿನ ಯುವ ಜನಾಂಗ ಹಾಗೂ ಕೂಲಿ ಕಾರ್ಮಿಕರ ಕುಟುಂಬಗಳು ತಮ್ಮ ಬದುಕು ಮತ್ತು ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವ ದುರಂತ ಚಿತ್ರಣಗಳು ಕಂಡು ಬರುತ್ತಿವೆ. ಇಸ್ಟಾದೋ ಲಜ್ಜೆಗೆಟ್ಟ ಅಧಿಕಾರಿಗಳು ವಾರಕ್ಕೊಮ್ಮೆ ಬರುವ ಮಾಮೂಲು ವಸು ಲಾತಿಯಲ್ಲಿಯೇ ನಿರತರಾಗಿ ಹಳ್ಳಿಗಳ ನೆಮ್ಮದಿ ಹಾಳು ಮಾಡುತ್ತಿರುವುದು ಏಕೆ ಎಂಬ ಪ್ರಶ್ನೆಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.
ತಾಲೂಕಿನಲ್ಲಿರುವ ಎಲ್ಲಾ ಅಕ್ರಮ ಮಧ್ಯದ ಅಂಗಡಿಗಳಿಗೆ ವಾರಕ್ಕೊಮ್ಮೆ ಇಂತಿಷ್ಟು ಎಂದು ಮಾಮೂಲಿ ನಿಗದಿಯಾಗಿದ್ದು ಅದನ್ನು ವಸೂಲಿ ಮಾಡಲು ಕುದ್ದು ತಾಲೂಕಿನ ಪ್ರಮುಖ ಅಧಿಕಾರಿಯೆ ಹೋಗುತ್ತಾರೆ ಎಂದು ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ.
ಅಬಕಾರಿ ಅಧಿಕಾರಿಗಳಿಗೆ ಹಳ್ಳಿಗಳಲ್ಲಿ ನಡೆಯುವ ಅಕ್ರಮ ಮಧ್ಯ ಮಾರಾಟ ಚಟುವಟಿಕೆಗಳು ಗೊತ್ತಿಲ್ಲವೆಂದಲ್ಲ. ಆದರೆ ಈ ಅಕ್ರಮ ದಂಧೆಗಳಿಗೆ ಅವರ ಕುಮ್ಮಕ್ಕು ಸಹಕಾರ ಇರೋದ್ರಿಂದ ಎಲ್ಲವೂ ರಾಜಹೌಷವಾಗಿ ನಡೆಯುತ್ತಿದೆ.
ಅಬಕಾರಿ ಅಧಿಕಾರಿಗಳು ಅಕ್ರಮ ಮಧ್ಯ ಮಾರಾಟಗಾರಗಳ ಮೇಲೆ ನಡೆಸುವ ದಾಳಿಗಳು ಪ್ರಾಮಾಣಿಕವಾಗಿ ಇದ್ದರೆ ಇಷ್ಟೊತ್ತಿಗಾಗಲೇ ಅಕ್ರಮ ದಂಧೆ ಕೊರರನ್ನು ಹೆಡೆಮುರಿ ಕಟ್ಟಬಹುದಿತ್ತು ಆದರೆ ಅಧಿಕಾರಿಗಳ ಲಂಚದ ದಾಹಕ್ಕೆ ಗ್ರಾಮೀಣ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಹಣ ಬಾಕ ಅಧಿಕಾರಿಗಳು ಇನ್ನಾದರೂ ಎಚ್ಚರಗೊಳ್ಳುವರೆ ನೋಡಬೇಕು.