ಹುಣಸೂರು ನರೇಗಾ ಹಣ ದುರ್ಬಳಕೆ ಆಗುತ್ತಿರುವ ಪ್ರಕರಣವೊಂದು ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ಮಾನವ ದಿನಗಳ ಬಳಕೆ ಮಾಡುವ ಬದಲು ಯಂತ್ರಗಳನ್ನ ಬಳಸಿ ಕಾಮಗಾರಿ ನಡೆಸಿರುವುದು ಹಾಗೂ ಕಾರ್ಮಿಕರು ಕೆಲಸ ಮಾಡಿದಂತೆ ದಾಖಲೆಗಳನ್ನ ಸೃಷ್ಟಿಸಿ ಬಿಲ್ ಹಣ ಪಡೆಯಲು ಹುನ್ನಾರ ನಡೆಸಿದ್ದಾರೆ.ಮಾಹಿತಿ ಅರಿತ ನಮ್ಮ ಟಿವಿ 23ಮಾಧ್ಯಮ ಅಕ್ರಮಕ್ಕೆ ಬ್ರೇಕ್ ಹಾಕಿ ಬಿಲ್ ಪಾವತಿಯನ್ನ ಸ್ಥಗಿತಗೊಳಿಸಿ .ಈ ಅಕ್ರಮದಲ್ಲಿ
ರೈತ ಸಂಘಟನೆಯಲ್ಲಿರುವ ಮಹಾದೇವ ಗ್ರಾಮ ಪಂಚಾಯಿತಿ ಸದಸ್ಯರು . ಜ್ಯೋತಿ
ಸುರೇಶ್ ಈ 3ಜನ ಸದಸ್ಯರು ಶಾಮೀಲಾಗಿರುವುದು ಬೆಳಕಿಗೆ ಬಂದಿದೆ.ಕಾಮಗಾರಿ ನಡೆಸಿದ ವ್ಯಕ್ತಿಯೇ ಇದನ್ನ ಹೇಳಿಕೊಂಡು ಅಚ್ಚರಿ ಮೂಡಿಸಿದ್ದಾನೆ.
ಕಟ್ಟೆಮಳಲವಾಡಿ ಗ್ರಾಮದ ರವಿ ರವರ ಜಮೀನಿನಿಂದ ಮೊಹಮ್ಮದ್ ಸನಾವುಲ್ಲಾ ಜಮೀನಿನ ವರೆಗೆ ನಾಲಾ ಪುನಶ್ಚೇತನ ಕಾಮಗಾರಿಯನ್ನ ನರೇಗಾ ಯೋಜನೆಯಡಿ ನೀಡಲಾಗಿದೆ.ಈ ಯೋಜನೆ ಅನ್ವಯದಂತೆ ಯಂತ್ರಗಳನ್ನ ಬಳಸದೆ ಸ್ಥಳೀಯ ಕೂಲಿ ಕಾರ್ಮಿಕರನ್ನ ಬಳಸಿಕೊಳ್ಳಬೇಕೆಂಬ ನಿಯಮವಿದೆ.ಆದರೆ ಈ ನಿಯಮವನ್ನ ಗಾಳಿಗೆ ತೂರಿದ ಕಾಮಗಾರಿ ಉಸ್ತುವಾರಿ ವಹಿಸಿದ ವ್ಯಕ್ತಿ ಯಂತ್ರಗಳನ್ನ ಬಳಸಿದ್ದಾನೆ.ದಾಖಲೆಗಾಗಿ ಕಾಮಗಾರಿ ನಡೆದ ಸ್ಥಳದಲ್ಲಿ ಕೆಲವು ಕೂಲಿ ಕಾರ್ಮಿಕರನ್ನ ನಿಲ್ಲಿಸಿ ಫೋಟೋ ತೆಗೆದು ಅಪ್ ಲೋಡ್ ಮಾಡಿದ್ದಾನೆ.ಕಾಮಗಾರಿ ನಡೆಯುವ ವೇಳೆ ಪಿಡಿಓ ವಿಜಯಕುಮಾರಿ ಸ್ಥಳದಲ್ಲಿ ಇರಬೇಕೆಂಬ ನಿಯಮವಿದೆ.ಆದ್ರೆ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿ ಕಾಮಗಾರಿ ಪೂರ್ಣಗೊಳಿಸಿ ಬಿಲ್ ಪಾವತಿಗೆ ದಾಖಲೆಗಳನ್ನ ನೀಡಿದ್ದಾನೆ.ಈ ಸಂಭಂಧ ಕಾಮಗಾರಿ ನಡೆಸಿದ ವ್ಯಕ್ತಿಯನ್ನ ಪ್ರಶ್ನಿಸಿದಾಗ ಯಂತ್ರಗಳನ್ನ ಬಳಸಿರುವುದಾಗಿ ಒಪ್ಪಿಕೊಂಡಿದ್ದಾನೆ.ಅಲ್ಲದೆ ಇದರಲ್ಲಿ ಪಿಡಿಓ, ವಿಜಯಕುಮಾರಿ
ಪಂಚಾಯಿತಿ ಅಧ್ಯಕ್ಷರು ಚಿನ್ನ ಮುತ್ತು ನರೇಗಾ ಇಂಜಿನಿಯರ್ ಹಾಗು ಮಹಾದೇವ್ ರೈತಮುಖಂಡ ಹಾಗೂ ಇತರ ಅಧಿಕಾರಿಗಳಿಗೆ ಪಾಲು ಹೋಗುತ್ತದೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.ಸಾಕಷ್ಟು ಗ್ರಾಮಗಳಲ್ಲಿ ಇಂತಹ ಅಕ್ರಮಗಳು ನಡೆಯುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿದೆ.ಸ್ಥಳೀಯರು ಈ ಅಕ್ರಮವನ್ನ ಬೆಳಕಿಗೆ ತಂದು ಬಿಲ್ ಪಾವತಿಗೆ ಬ್ರೇಕ್ ಹಾಕಬೇಕಾಗಿದೆ.ನರೇಗಾ ಹೆಸರಲ್ಲಿ ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕುತ್ತಿರುವ ಬಗ್ಗೆ ಸುರೇಶ್ ರಹಸ್ಯ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದಿದ್ದಾನೆ ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿರುವುದು ವಿಪರ್ಯಾಸ.ಕೂಡಲೇ ಸಂಭಂಧ ಪಟ್ಟ ಮೇಲಧಿಕಾರಿಗಳು ಎಚ್ಚೆತ್ತು ಅಕ್ರಮಕ್ಕೆ ಬ್ರೇಕ್ ಹಾಕಬೇಕಿದೆ.