ಡಿ.ವಿ.ಎಸ್ ಸಂಜೆ ಕಾಲೇಜು ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ಅಡಿಯಲ್ಲಿ 2024-25 ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಮಲೇಶಂಕರ ಗ್ರಾಮದಲ್ಲಿ ದಿನಾಂಕ 12-12-24 ರಿಂದ18-12-24 ರವರೆಗೆ ನಡೆಯಲಿದ್ದು ಇದರ ಉದ್ಘಾಟನ ಕಾರ್ಯಕ್ರಮವನ್ನು ದಿನಾಂಕ 12-18-24 ಗುರುವಾರದಂದು ನೆರವೇರಿಸಲಾಯಿತು..
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೊ.ಎ.ಟಿ.ಪದ್ಮೇಗೌಡ , ಪ್ರಾಂಶುಪಾಲರು ಡಿ.ವಿ.ಎಸ್.ಸಂಜೆ ಕಾಲೇಜು,ಇವರು ನೆರವೆರಿಸಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ.ಕೆ.ಜಿ.ವೆಂಕಟೇಶ್ ರವರು ರಾಷ್ಟ್ರೀಯ ಸೇವಾ ಯೋಜನೆಯ ಕುರಿತು ಮತ್ತು ಶಿಬಿರದ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುನಾಥ ಎಂ.ಟಿ.ಅಧ್ಯಕ್ಷರು ಸರ್ವಸಿದ್ಧಿ ವಿನಾಯಕ ಯುವಕ ಸಂಘ,ಮಲೆಶಂಕರ ಇವರು ವಹಿಸಿದ್ದರು.ಕಾರ್ಯಕ್ರಮದಲ್ಲಿ ಶ್ರೀ ಮಂಜಪ್ಪ ಜಿ ಕೆ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ,ಮತ್ತು ರಾಘವೇಂದ್ರ ಸಂಪೋಡಿ, ಪತ್ರಕರ್ತರು,ಹಾಗೂ ಸಂದೇಶ ಎನ್ ,ಮನು ಎಸ್ .ಮೂರ್ತಿ ಉಪಸ್ಥಿತರಿದ್ದರು.. ಉದ್ಘಾಟನ ಕಾರ್ಯಕ್ರಮದ ನಂತರ ಸಮುದಾಯ( ರಿ),ಶಿವಮೊಗ್ಗ ಇವರು “ಆ ಕರಾಳ ರಾತ್ರಿ ” ಎಂಬ ನಾಟಕವನ್ನು ಪ್ರಸ್ತುತ ಪಡಿಸಿದರು..
ಕಾರ್ಯಕ್ರಮದ ನಿರೂಪಣೆಯನ್ನು ಶಿಬಿರಾರ್ಥಿಯಾದ ಮಧುಸೂದನ್ ನೆರವೆರಿಸಿದರು, ಸ್ವಾಗತ ಕಾರ್ಯಕ್ರಮವನ್ನು ಮಂಜಪ್ಪ ಜಿ ಕೆ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನೆರವೆರಿಸಿದರು ವಂದನಾರ್ಪಣೆಯನ್ನು ಶಿಬಿರಾರ್ಥಿಯಾದ ಪೂಜಾ ರವರು ಸಲ್ಲಿಸಿದರು
