ಮಾಜಿ ವಿಧಾನ ಪರಿಷತ್ ಸದಸ್ಯೆ,ಕೊಡಗು ಕಾಂಗ್ರೆಸ್ ನಾಯಕಿ ಶಾಂತೆಯಂಡ ವೀಣಾ ಅಚ್ಚಯ್ಯ ನವರಿಗೆ ರಾಜ್ಯ ಮಟ್ಟದ ಉಪಾಧ್ಯಕ್ಷರಾಗಿ ಆಯ್ಕೆ ಗೊಳಿಸಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಚಾರ ಸಮಿತಿಯ ಉಪಾಧ್ಯಕ್ಷರನ್ನಾಗಿ ವೀಣಾ ಅಚ್ಚಯ್ಯ ನವರನ್ನು ನೇಮಕ ಮಾಡಿ ಎ.ಐ.ಸಿ.ಸಿ ಆದೇಶ ಹೊರಡಿಸಿದೆ.
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ.ಕೊಡಗು ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ,ರಾಜ್ಯ ಸರ್ಕಾರದ ನಿಗಮ ಮಂಡಳಿಯ ಅಧ್ಯಕ್ಷರಾಗಿ ,ಕರ್ನಾಟಕ ವಿಧಾನ ಪರಿಷತ್ ಸದಸ್ಯೆಯಾಗಿ ಕಾರ್ಯ ನಿರ್ವಹಿಸಿದ ವೀಣಾ ಅಚ್ಚಯ್ಯ ನವರಿಗೆ ಈಗ ರಾಜ್ಯದಲ್ಲಿ ಪಕ್ಷ ಸಂಘಟನೆಯ ಮಹತ್ವದ ಜವಾಬ್ದಾರಿ ನೀಡಲಾಗಿದೆ.ಮಾಜಿ ರಾಜ್ಯ ಸಭಾ ಸದಸ್ಯರಾದ ಡಾ ಎಲ್ ಹನುಮಂತಯ್ಯ ನವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ನಿನ್ನೆ ಈ ಐ.ಸಿ.ಸಿ ಪ್ರಚಾರ ಸಮಿತಿಯ ಕೊಡಗು ಅಧ್ಯಕ್ಷರಾಗಿ ಟಿ.ಪಿ ರಮೇಶ್ ಅವರನ್ನು ಅಧ್ಯಕ್ಷರಾಗಿ ಘೋಷಣೆ ಮಾಡಿದ್ದು ಇದರ ಬೆನ್ನೆಲೆ ಇಂದು ರಾಜ್ಯಮಟ್ಟದಲ್ಲಿ ಉಪಾಧ್ಯಕ್ಷರಾಗಿ ವೀಣಾ ಅಚ್ಚಯ್ಯನವರನ್ನು ಆಯ್ಕೆ ಮಾಡಿ ಘೋಷಿಸಿದೆ.
