ಹಾವೇರಿ: ಆಗಸ್ಟ್ 1ಕ್ಕೆ ಒಳ ಮೀಸಲಾತಿಯ ಪರವಾಗಿ ಸುಪ್ರೀಂ ಕೋರ್ಟು ತೀರ್ಪು ಕೊಟ್ಟು ಒಂದು ವರ್ಷ ಆಗುತ್ತಿದೆ.ಹರಿಯಾಣ,ತೆಲಂಗಾಣ,ಆAಧ್ರಪ್ರದೇಶ ಸರ್ಕಾರಗಳು ಒಳಮೀಸಲಾತಿ ಜಾರಿ ಮಾಡಿ ಆರು ತಿಂಗಳುಗಳೇ ಕಳೆಯಿತು.ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ನಿಧಾನ ಧೋರಣೆಯಿಂದ ಮಾದಿಗ ಸಮಾಜಕ್ಕೆ ಬಹಿರಂಗವಾಗಿ ಅನ್ಯಾಯ ಮಾಡುತ್ತಿದೆ.ಈಗಾಗಲೇ ಆಗಸ್ಟ್ 1 ರಿಂದ ಕರ್ನಾಟಕ ರಾಜ್ಯಾಧ್ಯಂತ ಹೋರಾಟಕ್ಕೆ ಕರೆ ಕೊಡಲಾಗಿದೆ.ಅದೇ ರೀತಿ ಹಾವೇರಿ ಜಿಲ್ಲೆಯಲ್ಲಿ ಅಗಸ್ಟ್-01 ರಂದು ಬೆಳಿಗ್ಗೆ 11 ಘಂಟೆಗೆ ಜಿಲ್ಲಾಡಳಿತ ಭವನದ ಮುಂದೆ ಬೃಹತ್ ಪ್ರತಿಭಟನೆ-ಹೋರಾಟ ಮಾಡಲಾಗುತ್ತಿದ್ದು,ಸಮಾಜದ ಮುಖ್ಯಸ್ಥರು,ಬಂಧು ಬಾಂಧವರು,ಗುರು ಹಿರಿಯರು,ಸಮಾಜದ ಸರ್ವ ಸಂಘಗಳ ಸರ್ವ ಪದಾಧಿಕಾರಿಗಳು ಪಕ್ಷಾತೀತವಾಗಿ ಈ ಒಳಮೀಸಲಾತಿ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ,ಈ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಹಾವೇರಿ ಜಿಲ್ಲಾ ಸರ್ವ ಮುಖಂಡರ ಪರವಾಗಿ ಕೋರಲಾಗುತ್ತಿದೆ ಎಂದು ರಾಜ್ಯ ಸಂಘಟನಾ ಸಂಚಾಲಕರಾದ ಉಡಚಪ್ಪ ಮಾಳಗಿ ಹಾಗೂ ಜಿಲ್ಲಾಧ್ಯಕ್ಷರಾದ ನಾಗರಾಜ ಮಾಳಗಿ. ವಿಶೇಷ ಆಹ್ವಾನಿತರು. ಗವಿಸಿದ್ದಪ್ಪ ದ್ಯಾಮಣ್ಣನವರ್. ಡಿಎಸ್ ಮಾಳಗಿ. ಅಶೋಕ್ ಮರಿಯಣ್ಣನವರ್. ಪರಮೇಶಪ್ಪ ಮೇಗಳಮನಿ . ಹೊನ್ನಪ್ಪ ತಗಡಿನಮನಿ. ಮಂಜಪ್ಪ ನಾಗಪ್ಪ ಮರೋಳ. ಹನುಮಂತಪ್ಪ ಸಿ ಡಿ ಮಾಲತೇಶ ಎಲ್ಲಾಪುರ. ಸುಭಾಸ್ ಬೆಂಗಳೂರು ಮಾರುತಿ ಬಣಕಾರ್. ಜಗದೀಶ್ ಹರಿಜನ. ಬಸವಣ್ಣಪ್ಪ ದ್ಯಾಮಪ್ಪ ಹಳ್ಳಳ್ಳಿ. ಮಹೇಶಪ್ಪ ಶಾಖಾರ. ಹನುಮಂತ ಹೌoಸಿ. ಶಂಭುಲಿಂಗಪ್ಪ ದಿವಟರ. ಪ್ರಕಟಣೆಯಲ್ಲಿ ಕೋರಿದ್ದಾರೆ.
