ನಂದಿ ಬೆಟ್ಟದ ಪರಿಸರದ ವ್ಯವಸ್ಥೆಯನ್ನು ಭವಿಷ್ಯದ ಪೀಳಿಗೆಗೆ ಉಳಿಸಿರುವುದುರ ಜೊತೆಗೆ ನಂದಿ ಬೆಟ್ಟದಲ್ಲಿ ಹುಟ್ಟುವ ಐದು ನದಿಗಳನ್ನು ಪುನಶ್ಚೇತಗೊಳಿಸುವುದು ಮತ್ತು ನಂದಿ ಬೆಟ್ಟದ ಸುತ್ತಲಿನ ಪ್ರದೇಶವನ್ನು ಕಳೆದ ದಶಕದಲ್ಲಿ ವಾಣಿಜ್ಯೀಕರಣ ಗೊಳಿಸಲಾಗಿದೆ, ಪ್ರವಾಸೋದ್ಯಮವನ್ನು ಉತ್ತೇಜಿಸಲು ನಿರ್ಧರಿಸಲಾಗಿದ್ದು ಇದರಿಂದ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ. ಆದಕಾರಣ 2-7 -2025ರ ಬುಧವಾರದಂದು ನಂದಿ ಬೆಟ್ಟದಲ್ಲಿ ನಡೆಯಲಿರುವ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಪರಿಸರದ ಮೇಲಿನ ಅತ್ಯಾಚಾರ ನಿಲ್ಲಿಸಲು ಪರಿಸರಸ್ನೇಹಿ ಶಾಸನಬದ್ಧ ಜವಾಬ್ದಾರಿಯುತವಾದ ನಿರ್ಧಾರವನ್ನು ಕೈಗೊಳ್ಳಬೇಕೆಂದು ಮತ್ತು ನಂದಿ ಬೆಟ್ಟವನ್ನು ಜೀವವೈವಿಧ್ಯ ಕೇಂದ್ರವೆಂದು ಘೋಷಿಸಲು ವ್ಯವಸ್ಥೆ ಮಾಡಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಲಾಯಿತು, ಪತ್ರಿಕಾಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿದಂತ ಪರಿಸರವಾದಿಗಳಂತ ಡಾಕ್ಟರ್ ಯಾ ಲ್ಲಪ್ಪನವರು ನಂದಿ ಬೆಟ್ಟಗಳು ಭೂಮಿಯ ಹೊರಪದರದ ಅತ್ಯಂತ ಹಳೆಯ ಮತ್ತು ಸ್ಥಿರವಾದ ಭಾಗದಲ್ಲಿ ನೆಲೆಗೊಂಡಿದೆ. ಈ ಬೆಟ್ಟದಲ್ಲಿ ಅರ್ಕಾವತಿ,ಪಾಲರ್, ಪೆನ್ನಾರ್ ದಕ್ಷಿಣ ಪೆನ್ನಾರ್ ಮತ್ತು ಚಿತ್ರಾವತಿ ನದಿಗಳು ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುತ್ತವೆ ಲಕ್ಷಾಂತರ ಜನರಿಗೆ ಜೀವನೋಪಾಯ ಕಲ್ಪಿಸಿದೆ
ಆದರೆ ಇಂದು ಪ್ರವಾಸೋದ್ಯಮದ ಹೆಸರಿನಲ್ಲಿ ಯಂತ್ರೋಪಕರಣ ಗಳಿಂದ ನೈಸರ್ಗಿಕ ಪರಿಸರ ವ್ಯವಸ್ಥೆಗೆ ಅಡ್ಡಿಯಾಗಿದೆ ಸ್ಥಳೀಯ ಸಸ್ಯ ಜಾತಿಗಳು ನಾಶವಾಗಿದೆ ನೀರಿನ ಮೂಲಗಳು ಮತ್ತು ಮಣ್ಣಿನ ಗುಣಮಟ್ಟದ ಅವನತಿ ಕಾಣುತ್ತಿದೆ ಶಬ್ದ ಮಾಲಿನ್ಯಕ್ಕೆ ಕಾರಣವಾಗಿದೆ. ಕಲ್ಲು ಗಣಿಗಾರಿಕೆ ಚಟುವಟಿಕೆಗಳು ಈಗಾಗಲೇ ಗಮನಾರ್ಹಾಹಾ ನಿಯನ್ನುಂಟು ಮಾಡಿದೆ ಎಂದು ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆ ಹೂವಿನ ವರ್ತಕರ ಸಂಘದ ಅಧ್ಯಕ್ಷರಾದಂತಹ ಶ್ರೀಧರ್ ಅವರು ಮಾತನಾಡುತ್ತಾ ಚಿಕ್ಕಬಳ್ಳಾಪುರದ ಸುಂದರ ಪರಿಸರವನ್ನ ನಾಶ ಮಾಡುವಂತಹ ಯೋಜನೆಗಳನ್ನು ರೂಪಿಸಿರುವುದು ಖಂಡನೀಯ . ರೈತರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲದಂತಹ ಸರ್ಕಾರ ಕನಿಷ್ಠ ಪಕ್ಷ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಯೆನ್ನಾದರೂ ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಗೆ ಕೊಡಲಿ. ನಂದಿ ಬೆಟ್ಟದ ಸುತ್ತಮುತ್ತಲು ನಡೆಯುತ್ತಿರುವ ಗಣಿಗಾರಿಕೆ ನಿಲ್ಲಲಿ ಎಂದು ಸರ್ಕಾರವನ್ನು ಒತ್ತಾಯಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ. ಕಿರಣ್, ಲಾಯರ್ ಜ್ಯೋತಿ. ಇತರರು ಉಪಸ್ಥಿತರಿದ್ದರು.
