ಜುಲೈ ೧ ಕನ್ನಡ ಪತ್ರಿಕಾ ದಿನವಾಗಿದೆ. ಈ ದಿನವನ್ನು ಕನ್ನಡದ ಮೊಟ್ಟಮೊದಲ ಪತ್ರಿಕೆ ಮಂಗಳೂರು ಸಮಾಚಾರ ಪ್ರಕಟವಾದ ದಿನವಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ಆಚರಿಸುತ್ತದೆ, ಮತ್ತು ಪತ್ರಿಕೆಗಳ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.
ಜುಲೈ ೧, ೧೮೪೩ ರಂದು ಮಂಗಳೂರಿನಲ್ಲಿ ಮಂಗಳೂರು ಸಮಾಚಾರ ಪತ್ರಿಕೆಯ ಮೊದಲ ಸಂಚಿಕೆ ಪ್ರಕಟವಾಯಿತು. ಇದು ಕನ್ನಡದ ಮೊದಲ ಮುದ್ರಿತ ಪತ್ರಿಕೆಯಾಗಿದೆ. ಈ ಪತ್ರಿಕೆಯನ್ನು ಜರ್ಮನ್ ಮಿಷನರಿ ಹೆರ್ಮನ್ ಫ್ರೆಡ್ರಿಕ್ ಮೊಗ್ಲಿಂಗ್ ಅವರು ಸ್ಥಾಪಿಸಿದರು. ಅವರು ಬಾಸೆಲ್ ಮಿಷನ್ನಲ್ಲಿದ್ದರು ಮತ್ತು ಕನ್ನಡ ಭಾಷೆಯನ್ನು ಕಲಿತು ಈ ಪತ್ರಿಕೆಯನ್ನು ಪ್ರಕಟಿಸಿದರು. ಈ ಪತ್ರಿಕೆಯು ಎರಡು ವರ್ಷಗಳ ಕಾಲ ನಡೆಯಿತು, ಮತ್ತು ಇದು ಕನ್ನಡ ಪತ್ರಿಕೋದ್ಯಮಕ್ಕೆ ಬಹಳ ಮಹತ್ವದ ಕೊಡುಗೆಯಾಗಿದೆ.
ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ, ಪತ್ರಿಕೆಗಳು ಸಮಾಜದಲ್ಲಿ ಹೇಗೆ ಪ್ರಮುಖ ಪಾತ್ರವಹಿಸುತ್ತವೆ ಎಂಬುದನ್ನು ತಿಳಿಸುವುದು. ವಿಶೇಷವಾಗಿ, ಪತ್ರಿಕೆಗಳು ಸಮಾಜದಲ್ಲಿನ ವದಂತಿಗಳನ್ನು ತಡೆಯಲು ಮತ್ತು ಸತ್ಯ ಮಾಹಿತಿಯನ್ನು ಒದಗಿಸಲು ಸಹಾಯ ಮಾಡುತ್ತವೆ.
ಪ್ರತಿ ವರ್ಷ ಕರ್ನಾಟಕದಲ್ಲಿ ಜುಲೈ ೧ ರಂದು ‘ಪತ್ರಿಕಾ ದಿನ’ವನ್ನು ಆಚರಿಸಲಾಗುತ್ತದೆ. ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಪ್ರಕಟಗೊಂಡ ದಿನವಾಗಿದ್ದು ಪತ್ರಿಕೋದ್ಯಮದ ಪರಿಚಯ, ಅದರ ಹಿನ್ನೆಲೆ, ಕಾಲಕ್ಕೆ ತಕ್ಕಂತೆ ಅದು ಬದಲಾದ ವೈಖರಿ ಬಗ್ಗೆ ಜನಸಾಮಾನ್ಯರಿಗೆ ತಿಳಿಸಬೇಕು ಎನ್ನುವ ಉದ್ದೇಶದಿಂದ ಈ ದಿನ ಕರ್ನಾಟದಲ್ಲಿ ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತದೆ.
ಕನ್ನಡದ ಪ್ರಪ್ರಥಮ ಪತ್ರಿಕೆ ಮಂಗಳೂರು ಸಮಾಚಾರ ೧೮೪೩ ರ ಜುಲೈ ೧ ರಂದು ಮಂಗಳೂರಿನಲ್ಲಿ ಬಾಸೆಲ್ ಮಿಷನ್ನವರ ಮುದ್ರಣಾಲಯದಿಂದ ಪ್ರಕಟವಾಯಿತು. ರೆವರೆಂಡ್ ಹರ್ಮನ್ ಮೋಗ್ಲಿಂಗ್ ಅವರು ಸಂಪಾದಕರಾಗಿದ್ದರು. ಜರ್ಮನ್ನ ಮತ ಪ್ರಚಾರಕರಾದ ಮೋಗ್ಲಿಂಗ್ ಅವರನ್ನು ಕನ್ನಡ ಪತ್ರಿಕೋದ್ಯಮದ ಮೂಲಪುರುಷ, ಕನ್ನಡ ಪತ್ರಿಕೋದ್ಯಮದ ಪಿತಾಮಹ ಎಂದು ಅವರನ್ನು ಕರೆಯಲಾಗುತ್ತದೆ.ಮಂಗಳೂರು ಸಮಾಚಾರ ಪ್ರಾರಂಭದ ಬಗ್ಗೆ ಹಲವಾರು ವಿವಾದಗಳು ಉಂಟು ಕನ್ನಡ ಪತ್ರಿಕೆ ಮೊದಲು ಮಂಗಳೂರಿನಲ್ಲಿ ಅಥವಾ ಬಳ್ಳಾರಿಯಲ್ಲಿ ಪ್ರಾರಂಭದ ಬಗ್ಗೆ ಸಾಕಷ್ಟು ಬೇರೆ ಬೇರೆ ವಿಚಾರಗಳು ಇವೆ.
ಮಂಗಳೂರು ಸಮಾಚಾರ ಪತ್ರಿಕೆ ೮ ತಿಂಗಳ ಕಾಲ ಪಾಕ್ಷಿಕವಾಗಿ ಪ್ರಕಟವಾಯಿತು. ವರ್ತಮಾನಗಳು, ಸರಕಾರಿ ನಿರೂಪಗಳು ಕಾನೂನು, ಸುಬುದ್ಧಿಯನ್ನು ಹೇಳುವ ಸಾಮತಿಗಳು, ಹಾಡುಗಳು, ಕತೆಗಳು, ಅಂತರಾಜ್ಯ ವರ್ತಮಾನಗಳು, ವಾಚಕರ ವಾಣಿಗಳು ಅಂಕಣಗಳಾಗಿದ್ದವೆAದು ಮಂಗಳೂರು ದರ್ಶನ ದಾಖಲಿಸಿದೆ. ಬಳಿಕ ಈ ಪತ್ರಿಕೆಯ ಹೆಸರನ್ನು ಕನ್ನಡ ಸಮಾಚಾರ ಎಂದು ಬದಲಿಸಿ ಬಳ್ಳಾರಿಯಿಂದ ಪ್ರಕಟಿಸಲು ಆರಂಭಿಸಿದರು.
ಮಂಗಳೂರುಸಮಾಚಾರ ಪತ್ರಿಕೆ: ಮೋಗ್ಲಿಂಗ್ ಅವರು ಯುರೋಪಿಯನ್ ಪತ್ರಿಕೆಯ ಕುರಿತು ಅಪಾರ ಜ್ಞಾನ ಹೊಂದಿದ್ದರಿOದ ಕನ್ನಡದ ಮೊದಲ ಪತ್ರಿಕೆಯು ವೃತ್ತಿಪರ ಸ್ಪರ್ಶವನ್ನು ಪಡೆಯಿತು. ಅವರು ಹಲವಾರು ಯುರೋಪಿಯನ್ ಭಾಷೆಗಳ ಮೇಲೆ ಪಾಂಡಿತ್ಯವನ್ನು ಹೊಂದಿದ್ದರು. ೧೮೪೦ ರಲ್ಲಿ ಮಂಗಳೂರಿಗೆ ಬಂದಿಳಿದ ಕೂಡಲೇ ತುಳು, ಕೊಂಕಣಿ, ಕನ್ನಡ ಕಲಿತರು. ಅವರು ಮಿಷನರಿಯಾಗಿದ್ದರೂ, ಸ್ಥಳೀಯ ಸಾಹಿತ್ಯ ಮತ್ತು ಶಿಕ್ಷಣದಲ್ಲಿ ತೀವ್ರ ಆಸಕ್ತಿಯನ್ನು ತೋರಿಸಿದರು.
ಮಂಗಳೂರ ಸಮಾಚಾರ ಓದುಗರ ಮೇಲೆ ಪ್ರಭಾವ ಬೀರಿತು. ಹೆಚ್ಚಿನ ಸುದ್ದಿಗಳನ್ನು ವಿದೇಶಿ ಮತ್ತು ಭಾರತೀಯ ಪತ್ರಿಕೆಗಳಿಂದ ಸಂಗ್ರಹಿಸಲಾಗುತ್ತಿತ್ತು. ಇದು ಕಲ್ಲಚ್ಚಿನಲ್ಲಿ ಹದಿನೈದು ದಿನಗಳಿಗೊಮ್ಮೆ ಮಂಗಳೂರಿನಿAದ ಪ್ರಕಟವಾಗುತ್ತಿತ್ತು. ನಾಲ್ಕು ಪುಟಗಳನ್ನೊಳಗೊಂಡ ಪತ್ರಿಕೆಯ ಬೆಲೆ ಒಂದು ಪೈಸೆ ನಿಗದಿ ಮಾಡಲಾಗಿತ್ತು. ಸಂಪಾದಕರಾಗಿ, ಮೋಗ್ಲಿಂಗ್ ಅವರೇ ಸುದ್ದಿಗಳನ್ನು ಆಯ್ಕೆ ಮಾಡುತ್ತಿದ್ದರು. ಇದರಲ್ಲಿ ಸ್ಥಳೀಯ ಸುದ್ದಿಗಳು, ಸರ್ಕಾರಿ ಅಧಿಸೂಚನೆಗಳು, ಕಾನೂನು ವಿಷಯಗಳು, ಹಾಡುಗಳು, ಕಥೆಗಳು ಮತ್ತು ಇತರ ರಾಜ್ಯಗಳ ಸುದ್ದಿಗಳು ಪ್ರಕಟವಾಗುತ್ತಿತ್ತು. ಭಾರತದ ವಿವಿಧ ಭಾಗಗಳನ್ನು ವಶಪಡಿಸಿಕೊಳ್ಳಲು ಬ್ರಿಟಿಷರು ಮಾಡುತ್ತಿದ್ದ ಪ್ರಯತ್ನಗಳ ಕುರಿತು ಅವರು ವ್ಯಾಪಕವಾಗಿ ಪ್ರಕಟಿಸಿದರು. ಜೊತೆಗೆ ಅಪರಾಧಗಳನ್ನು ಮಾಡಿದರೆ ಅದಕ್ಕೆ ತಕ್ಕ ಶಿಕ್ಷೆಯಾಗುತ್ತದೆ ಎಂಬ ತಿಳಿವಳಿಕೆ ಜನರಲ್ಲಿ ಉಂಟಾಗಬೇಕೆOಬ ಉದ್ದೇಶದಿಂದ ಕೋರ್ಟಿನ ಪ್ರಕರಣಗಳಿಗೆ ಸಂಬOಧಿಸಿದ ಸಮಾಚಾರಗಳನ್ನು ಹೆಚ್ಚಾಗಿ ಪ್ರಕಟಿಸಲಾಗುತ್ತಿತ್ತು.
:ಮೋಗ್ಲಿಂಗ್ ಅವರು ಒಬ್ಬ ಮಿಷನರಿಯಾಗಿದ್ದರೂ, ಕೂಡ ಶಿಕ್ಷಣ, ಸಾಹಿತ್ಯಿಕ ಚಟುವಟಿಕೆಗಳು ಮತ್ತು ಪತ್ರಿಕೆ ಪ್ರಕಟಣೆಗಳಿಗೆ ಹೆಚ್ಚಿನ ಸಮಯವನ್ನು ಮೀಸಲಿಟ್ಟರು. ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕಾಗಿ ಅವರು ಮಾಡಿದ ಶ್ಲಾಘನೀಯ ಕೆಲಸಕ್ಕಾಗಿ, ಟ್ಯೂಬಿಂಗೆನ್ನ ಎರ್ಹಾರ್ಡ್ ಕಾಲ್ರ್ಸ್ ವಿಶ್ವವಿದ್ಯಾನಿಲಯವು ೧೮೫೮ ರಲ್ಲಿ ಮೋಗ್ಲಿಂಗ್ಗೆ ಗೌರವ ಡಾಕ್ಟರೇಟ್ ಅನ್ನು ನೀಡಿದ್ದು ಕನ್ನಡಕ್ಕಾಗಿ ಮಾಡಿದ ಕಾರ್ಯಕ್ಕಾಗಿ ಅಂತಹ ಗೌರವವನ್ನು ಪಡೆದ ಮೊದಲ ವ್ಯಕ್ತಿಯಾಗಿದ್ದಾರೆ.
ಆಗಿನ ಬರಹದ ವ್ಯಾಕರಣ – ಪದ ಬಳಕೆಯ ಶೈಲಿಯಲ್ಲಿ ಈ ಪತ್ರಿಕೆ ಪಾಕ್ಷಿಕವಾಗಿ ಸುಮಾರು ೮ ತಿಂಗಳ ಕಾಲ ಸತತವಾಗಿ ಪ್ರಕಟವಾಯಿತು. ಮಂಗಳೂರು ಸಮಾಚಾರ ಪತ್ರಿಕೆಯೊಂದಿಗೆ ಆರಂಭವಾದ ಕನ್ನಡ ಪತ್ರಿಕಾರಂಗ ಇಂದು ಅಧುನಿಕ ತಂತ್ರಜ್ಞಾನದೊAದಿಗೆ ಬೆಳೆದಿದ್ದು ಈಗ ಅನೇಕ ಪತ್ರಿಕೆಗಳು, ಸ್ಯಾಟಲೈಟ್ ಚಾನೆಲ್ಗಳು, ದೇಶದಲ್ಲೇ ಗರಿಷ್ಠ ಎಂಬAತೆ ಬಹುಭಾಷಾ ಪ್ರಾದೇಶಿಕ ಚಾನೆಲ್ಗಳು, ಆನ್ಲೈನ್ ಆವೃತ್ತಿಗಳು, ವೆಬ್ಸೈಟ್ಗಳು, ಸಂಜೆ ಪತ್ರಿಕೆಗಳು, ವೆಬ್ ಪತ್ರಿಕೆಗಳು, ಫೇಸ್ಬುಕ್- ವಾಟ್ಸ್ಪ್ಪ್ ಮಾಹಿತಿ- ಇಂರ್ನೆಟ್ ವಿನಿಮಯ ಗ್ರೂಪ್ಗಳು, ನೇರ ಪ್ರಸಾರ ನೀಡುವ ಸುದ್ದಿವಾಹಿನಿಗಳು… ಹೀಗೆ ಮಾಧ್ಯಮದ ಕ್ಷಣಕ್ಷಣದ ಸುದ್ದಿಗಳನ್ನು ನೀಡುವ ಮೂಲಕ ಜನಮಾನಸದಲ್ಲಿ ಒಂದಾಗಿದೆ. ಪತ್ರಿಕ್ಯೋದಮದಲ್ಲಿ ಉದ್ಯೋಗ ಅವಕಾಶವೂ ಸೃಷ್ಠಿಯಾಗಿ ಅನೇಕ ಪತ್ರಕರ್ತರು ರಾಜ್ಯ- ದೇಶ – ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಮಾಧ್ಯಮ ಬರವಣೆಗೆ ಹಾಗೂ ನಿರೂಪಣೆಗಳು ಇಂದಿನ ಕಾಲಘಟ್ಟದಲ್ಲಿ ಅತ್ಯಂತ ಮಹತ್ವ ಪಡೆದಿವೆ. ಬರವಣೆಯ ಶುದ್ಧತೆ, ವ್ಯಾಕರಣ ಹಾಗೂ ವಿಷಯ ಮಂಡನೆ ಎಲ್ಲವು ಅತ್ಯಂತ ಮಹತ್ವ ಪಡೆಯುತ್ತವೆ. ೭೦-೮೦ ದಶಕದ ಪತ್ರಕರ್ತರ ಮನೋಬಲ ಮತ್ತು ಬರವಣೆಯು ಅತ್ಯಂತ ನೇರ ಮತ್ತು ಸುಂದರವಾಗಿದ್ದು, ಇತ್ತಿಚಿಗೆ ಬರವಣೆಯಲ್ಲಿ ಗಂಧ-ಗಾಳಿ ಇಲ್ಲದಂತೆ ಆಗಿದೆ.ಪ್ರಜಾಪ್ರಭುತ್ವ ಹಾಗೂ ಭವಿಷ್ಯದ ದೃಷ್ಠಿಯಿಂದ ಮಾಧ್ಯಮವು ಬಲಗೊಳ್ಳಬೇಕು.ಹಾಗೂ ನೇರ, ನಿಷ್ಠುರ ಹಾಗೂ ಶುದ್ಧ ಬರಹಗಾರರು ಮಾಧ್ಯಮ ರಂಗಕ್ಕೆ ಅವಶ್ಯಕತೆ ಇದೆ.
ಕನ್ನಡದ ಪತ್ರಿಕ್ಯೋದ್ಯಮದ ವಿಷಯದಲ್ಲಿ ಇಂದು ಎಲ್ಲಾ ವಿಶ್ವವಿದ್ಯಾಲಯಗಳಲ್ಲೂ ವೃತ್ತಪರ ಕೋರ್ಸ್ ರೂಪದಲ್ಲಿ ಪತ್ರಿಕ್ಯೊದ್ಯಮ ಪದವಿ, ಸ್ನಾತಕೋತ್ತರ ಪದವಿ, ಪಿಹೆಚ್ಡಿ ಸೇರಿದಂತೆ ಪಿಜಿ ಡಿಪ್ಲೋಮಾ ಕೋಸ್ರ್ಗಳನ್ನು ಸಹ ಆರಂಭಿಸಲಾಗಿದ್ದು ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮಾಡಿ ಪತ್ರಿಕೋದ್ಯಮದಲ್ಲಿ ಉದ್ಯೋಗವನ್ನು ಕಂಡುಕೊಳ್ಳುತ್ತಿದ್ದು, ಪತ್ರಿಕಾರಂಗ ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದೆ.
ಮಾದ್ಯಮದ ತಪ್ಪು ಬದಿಗಿಟ್ಟು, ಮಾದ್ಯಮದಲ್ಲಿ ಸಾಧಿಸಬೇಕಾದ ಅವಕಾಶಗಳು ಸಾಕಷ್ಟು ಇದ್ದು, ದೃಡ ನಿರ್ಧಾರದಿಂದ ಮಾದ್ಯಮದಲ್ಲಿ ಸಾಧನೆಗೆ ಸಾಕಷ್ಟು ಅವಕಾಶಗಳು ಇದ್ದು, ಪ್ರತಿಯೊಬ್ಬರು ಬಳಸಿಕೊಂಡು ಉತ್ತಮ ಸಮಾಜಕ್ಕಾಗಿ ಉತ್ತಮ ಮಾದ್ಯಮ ಬೆಳೆಸಬೇಕು.
ರಮೇಶ.ಎಸ್.ಜಿ
ಸಂಪಾದಕರು
ಕನಸಿನ ಭಾರತ
