ನಂಜನಗೂಡು ತಾಲೂಕು ಪತ್ರಕರ್ತರ ಸಂಘ ಇವರ ವತಿಯಿಂದ ಇಂದು ಸಂಭ್ರಮದ ಪತ್ರಿಕಾ ದಿನಾಚರಣೆ ಹಾಗೂ ಶ್ರೀ ಶಿವರಾತ್ರೇಶ್ವರ ಮಾಧ್ಯಮ ಪ್ರಶಸ್ತಿ ಪ್ರಧಾನ ಸಮಾರಂಭ ಪಟ್ಟಣದ ಶ್ರಾವಣಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಸಮಾರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದ ಜನಪ್ರಿಯ ಶಾಸಕರಾದ ದರ್ಶನ್ ಧ್ರುವನಾರಾಯಣ ಅವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ ಪತ್ರಕರ್ತರ ದಿನಾಚರಣೆಯನ್ನು ಆಚರಿಸುತ್ತಿರುವುದು ನನಗೆ ಹತ್ತಿರ ಸಂತೋಷವನ್ನುಂಟು ಮಾಡಿದೆ ಎಂದು ಪತ್ರಕರ್ತರ ಹಾಗೂ ಪತ್ರಿಕಾ ವಿಕಾರಕರ ಕ್ಷೇಮಾಭಿವೃದ್ಧಿಗಾಗಿ ಸದಾ ನಾನು ಅವರ ಅವರ ಹೇಳಿಗೆಗಾಗಿ ಹೋರಾಡುತ್ತೇನೆ ಎಂದರು. ಸಮಾಜದಲ್ಲಿ ಪತ್ರಿಕಾ ವಿತರಕರು ಪತ್ರಕರ್ತರು ಇರಬೇಕಾದದ್ದು ನಮ್ಮ ಸಂವಿಧಾನದ ಹಕ್ಕಾಗಿದೆ. ಪತ್ರಕರ್ತರು ಸತ್ಯವನ್ನು ಈ ಸಮಾಜ ಸಾರ್ವಜನಿಕರಿಗೆ ಎತ್ತಿ ಹಿಡಿಯಬೇಕಾದ್ರು ಅವರ ಧರ್ಮ ಎಂದರು.. ಸಿದ್ದರಾಮಯ್ಯನವರ ಸರಕಾರ ಪತ್ರಕರ್ತರಿಗೆ ಬಸ್ ಪಾಸ್ ನೀಡಿರುವುದು ಉತ್ತಮ ಯೋಜನೆಯಾಗಿದೆ ಎಂದರು. ನಂತರ ಅವರನ್ನು ಎಲ್ಲಾ ಪತ್ರಕರ್ತರ ಪರವಾಗಿ ಸನ್ಮಾನಿಸಲಾಯಿತು. ಹಾಗೂ ಶ್ರೀಕೋಡಿ ಪ್ರತಾಪ್ ಇವರಿಗೆ ಶಿವರಾತ್ರಿ ಕೇಶ್ವರ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ವಿವಿಧ ಪತ್ರಿಕಾ ಸಂಪಾದಕರು ಪತ್ರಿಕ ವರದಿಗಾರರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ನಗರ ಸಭಾಧ್ಯಕ್ಷರಾದ ಶ್ರೀಕಂಠ, ಹಾಗೂ ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷರಾದ ದೀಪಕ್ ಮುಂತಾದ ಹಲವಾರು ನಾಯಕರು ಭಾಗವಹಿಸಿದ್ದರು.
