ನೆಲಮಂಗಲ ತಾಲೋಕು ದೊಡ್ಡಬೆಲೆ ಹಾಗೂ ಅಮ್ಮಸಂದ್ರ ರೈಲು ನಿಲ್ದಾಣದಲ್ಲಿ ಸಿಂಧನೂರು ಇಂದ ಯಶವಂತಪುರ ಫಾಸ್ಟ್ ಪ್ಯಾಸೆಂಜರ್ ರೈಲು ಗಾಡಿ ಸಂಖ್ಯೆ 16545 ನಿಲುಗಡೆ ಮಾಡುತ್ತಿದ್ದು ಇಂದು ದೊಡ್ಡಬೆಲೆ ರೈಲು ನಿಲ್ದಾದಲ್ಲಿ ಮೊದಲ ಬಾರಿ ನಿಲುಗಡೆ ಗೊಂಡ ರೈಲಿಗೆ ಪೂಜಾ ಕಾರ್ಯಕ್ರಮ ವನ್ನು ನೆರವೇರಿಸಿದರು ಪೂಜಾ ಕಾರ್ಯಕ್ರಮದಲ್ಲಿ ದೊಡ್ಡಬೆಲೆ ಪಂಚಾಯಿತಿ ಮಾಜಿ ಅಧ್ಯಕ್ಷರಾದ ತಡಸಿಘಟ್ಟ ಪುರುಷೋತ್ತಮ್ ಹಾಗೂ ಸಮಾಜ ಸೇವಕರಾದ ದೊಡ್ಡಬೆಲೆ ನಿರ್ವಾಣ ಸ್ವಾಮಿ ಗುತ್ತಿಗೆದಾರರದ ಮತ್ತು ಸಮಾಜ ಸೇವಕರಾದ
ದೊಡ್ಡಬೆಲೆ ಜಗದೀಶ್ ಮತ್ತು ಗಿರೀಶ್ ನಾಗರಾಜು ದೊಡ್ಡಬೆಲೆ ಶ್ಯಾಮಣ್ಣ ಮತ್ತು ದೊಡ್ಡಬೆಲೆ ಗ್ರಾಮಸ್ಥರು ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಸುಮಾರು ನಾಲ್ಕುನೂರ್ ಜನ ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು
ಇನ್ನು ಇ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪುರುಷೋತ್ತಮ್ ನಾವು ಸಚಿವರಿಗೆ ಮನವಿ ಕೊಟ್ಟಿದ್ದೆವು ನಮ್ಮ ಮನವಿಗೆ ಸ್ಪಂದಿಸಿ ರೈಲು ನಿಲುಗಡೆ ಗೆ ಆದೇಶ ಕೊಟ್ಟಿದು ನಮಗೆ ಸಂತಸ ತಂದಿದೆ
ಇನ್ನು ವಿದ್ಯಾರ್ಥಿಗಳಿಗೆ ಬಡವರಿಗೆ ಕಾರ್ಮಿಕರಿಗೆ ತುಂಬಾ ಅನುಕೂಲ ಆಗತ್ತದೆ
ಎಂದು ಸಂತೋಷ ವ್ಯಕ್ತ ಪಡಿಸಿದರು.
ಮಾರುತಿ
