ಹುಣಸಗಿ: ಅವಧಿ ಮುಗಿದು ವರ್ಷ ಕಳೆದಿದೆ, ಸಂಘಟನೆಯ ಆಡಳಿತ ಯಂತ್ರ ಸ್ಥಗಿತಗೊಂಡ ಪ್ರಯುಕ್ತ, ಆದಷ್ಟು ಬೇಗ ಹುಣಸಗಿ ತಾಲ್ಲೂಕಿನ ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ಚುನಾವಣೆ ನಡಿಸಬೇಕು ಮತ್ತು ಅಧ್ಯಕ್ಷ ಉಪಾಧ್ಯಕ್ಷೆ ಆಯ್ಕೆ ಪ್ರಕ್ರಿಯ ನಡಿಸಬೇಕಿದೆ, ಜೊತೆಗೆ ಸಮಾಜದ ಹಿತ ಚಿಂತನೆಗಾಗಿ ಹಾಗೂ ಸಮಾಜದ ಅಭಿವೃದ್ಧಿಗಾಗಿ ಸಂಘಟನೆ ಅವಶ್ಯಕತೆ ಇರುತ್ತದೆ, ಶೈಕ್ಷಣಿಕವಾಗಿ ಸಾಮಾಜಿಕವಾಗಿ ಸಮಾಜವನ್ನ ಕಟ್ಟುವಲ್ಲಿ ಸಂಘಟನೆ ಕಟ್ಟುವಿಕೆ ಅನಿವಾರ್ಯ ಹಾಗೂ ಕರ್ನಾಟಕದಲ್ಲಿ ಕುರುಬರ ಸಂಘ ಅಸ್ಥಿತ್ವಕ್ಕೆ ಬಂದು ಹಲವಾರು ದಶಕಗಳೆ ಸಂದಿವೆ, ತೀರಾ ಇತ್ತೀಚೆಗೆ ಹುಣಸಗಿ ತಾಲ್ಲೂಕಿನಲ್ಲಿ ಸಂಘಟನೆ ಹುಟ್ಟಿಕೊಂಡಿದ್ದು ಮತ್ತೆ ಗಾಢ ನಿದ್ರೆಗೆ ಜಾರಿದಂತಿದೆ, ಕಾಲಾವಧಿ ಮುಗಿದರು ಮರು ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ನಿಂತಿದೆ ಸಮಾಜದ ಹಿತದೃಷ್ಠಿಯಿಂದ ಆದಷ್ಟು ಬೇಗ ಚುನಾವಣೆ ನಡಿಸಬೇಕೆಂದು ಯಾದಗಿರಿ ಜಿಲ್ಲಾ ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಐಕೂರು ಅವರಿಗೆ ಒತ್ತಾಯ ಮಾಡಿ ಇನ್ನಿತರ ಸಂಘದ ಕಾರ್ಯ ವೈಕರಿಗಳ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಕುರುಬ ಸಮಾಜದ ಹಿರಿಯ ಮುಖಂಡ “ರಂಗಣ್ಣ.ಬಿ.ಡಂಗಿ” ಪತ್ರಿಕಾ ಗೋಷ್ಠಿಯಲ್ಲಿ ಒತ್ತಾಯ ಮಾಡಿದ್ದಾರೆ.
ಅವಧಿ ಮುಗಿದರೂ ನಿದ್ರಾವಸ್ಥೆಲ್ಲಿರುವ ಸಮಾಜದ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿದ ಶಿಕ್ಷಣ ಪ್ರೇಮಿ ರಮೇಶ ತೆಗ್ಗಿನ ಮನಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ನಿರ್ದೇಶಕರು, ಆದಷ್ಟು ಬೇಗ ಸಂಘಕ್ಕೆ ಚುನಾವಣೆ ಅಥವಾ ಆಯ್ಕೆ ಪ್ರಕ್ರಿಯ ನಡಿಸಬೇಕೆಂದು ಒತ್ತಾಯ ಮಾಡಿದ್ದಾರೆ.
ಶ್ರೀ ಚಂದ್ರಕಾಂತ ಸಿದ್ರಾಮಪ್ಪ ಮಲ್ಕಾಪೂರ ಅವರು ಮಾತನಾಡುತ್ತಾ. ಸಂಪೂರ್ಣವಾಗಿ ನಿಷ್ಕ್ರಿಯಗೊಂಡ ಸಂಘದ ಆಡಳಿತ ಸಮಾಜಕ್ಕೆ ಅಂಟಿದ ರೋಗದಂತೆ, ಈ ತರದ ಸಂಘಟನೆ ಯಾರಿಗೆ ಬೇಕಿದೆ, ದಕ್ಷ ಅಧ್ಯಕ್ಷ ಮತ್ತು ಆಡಳಿತ ಮಂಡಳಿಯ ಅವಶ್ಯಕತೆ ಇದೆ ಮತ್ತು ಸಮಾಜದ ಒಳತಿಗಾಗಿ ಕೆಲಸ ಮಾಡುವ ವ್ಯಕ್ತಿಗಳನ್ನ ಆಯ್ಕೆ ಮಾಡಬೇಕಿದೆ ಅಂತ ಅಭಿಪ್ರಾಯ ಪಟ್ಟರು.
ಈ ಸಂಧರ್ಭದಲ್ಲಿ ಸಿದ್ದಪ್ಪ ಕೊಟೆಗುಡ್ಡ,ನಿಂಗಣ್ಣ ಕೊಟೆಗುಡ್ಡ,ಅಂಬ್ರೆಶ ಕೊಟೆಗುಡ್ಡ, ಈರಪ್ಪ ಮುಂತಾದವರು ಪತ್ರಿಕಾಘೋಷ್ಠಿ ಕರೆದು ಜಿಲ್ಲಾ ಅಧ್ಯಕ್ಷರಿಗೆ ಒತ್ತಾಯ ಮಾಡಿದ್ದಾರೆ, ಒಂದು ವೇಳೆ ಜಿಲ್ಲಾ ಅಧ್ಯಕ್ಷರು ನಮ್ಮ ಮನವಿಗೆ ಸ್ಪಂದಿಸದೆ ಹೋದಲ್ಲಿ ಮುಂದಿನ ಅಂದರೆ ಮೇ ತಿಂಗಳಲ್ಲಿ ಸಮಾಜದ ಸರ್ವರನ್ನೂ ಸಭೆ ಕರೆದು ಸಂಘಕ್ಕೆ ಅಧ್ಯಕ್ಷ ಸಂಘದ ಸದಸ್ಯರುಗಳನ್ನ ನೆಮಕ ಮಾಡಬೇಕಾಗುತ್ತದೆ ಎಂದು ಖಾರವಾಗಿ ರಂಗಣ್ಣ ಡಂಗಿ ಹೇಳಿದ್ದಾರೆ.
