ಸುರಪೂರ : ಸುರಪುರ ತಾಲೂಕಿನ ಶಳ್ಳಗಿ ಕ್ರಾಸ್ ಹತ್ತಿರ ದಿನಾಂಕ :28-4-2025 ರಂದು 5-30ಗಂಟೆ ಸುಮಾರಿಗೆ ಕ್ರೂಜರ್ ಮತ್ತು ಆಟೋ ಮಧ್ಯೆ ಭೀಕರ ಅಪಘಾತ ಸಂಭವಿಸಿ ನಾಲ್ಕು ಜನ ಮೃತಪಟ್ಟಿರುತ್ತಾರೆ.
ಸುರಪುರದಿಂದ ದೇವಾಪುರ ಕಡೆ ಹೊರಟಿರುವ ಆಟೋ ಮತ್ತು ಲಿಂಗಸೂಗೂರ ದಿಂದ ಜೇವರ್ಗಿ ಕಡೆ ಹೊರಟಿರುವ ಕ್ರೂಜರ್ ಮಧ್ಯ ಶಳ್ಳಗಿ ಕ್ರಾಸ್ ಹತ್ತಿರ ಭೀಕರ ರಸ್ತೆ ಅಪಘಾತವಾಗಿದ್ದು ಅಪಘಾತದಲ್ಲಿ ಆಟೋ ಸಂಪೂರ್ಣ ನೂಜ್ಜು ನೂಜ್ಜು ಆಗಿದ್ದು ಆಟೋದಲ್ಲಿದ್ದ ಬುಡ್ಡಪ್ಪ ತಳವಾರ,ದೇವಪ್ಪ ಚಿಂಚೋಡಿ ಇಬ್ಬರು ಸ್ಥಳದಲ್ಲಿ ಮೃತ ಪಟ್ಟಿರುತ್ತಾರೆ. ರಾಚಯ್ಯ ಸ್ವಾಮಿ ಮತ್ತು ಮಾನಪ್ಪ ಅಂಬಿಗೇರ ಇವರನ್ನು ಸ್ಥಳಿಯ ಸುರಪುರ ತಾಲೂಕ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆ ಗಾಗಿ ಕಲಬುರ್ಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯದಲ್ಲಿ ಇಬ್ಬರು ಸಾವನ್ನುತ್ತಿರುತ್ತಾರೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ, ಇವರು ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಮೃತಪಟ್ಟವರು ನಾಲ್ಕು ಜನ ದೇವಪುರ ಗ್ರಾಮದ ನಿವಾಸಿ ಆಗಿರುತ್ತಾರೆ
ಅಪಘಾತವನ್ನು ಸುರಪುರ ಪೊಲೀಸ್ ಠಾಣೆಯಲ್ಲಿ ದಾಖಲಾತಿ ಯಾಗಿರುತ್ತದೆ.
