ಗುತ್ತಲ : ಪಟ್ಟಣ ಪಂಚಾಯಿತಿ ಆವರಣದಲ್ಲಿ ಪೌರ ನೌಕರರ ತಾಲೂಕು ಆಡಳಿತದಿಂದ ಅನಿರ್ದಿಷ್ಟ ಮುಷ್ಕರ ರಾಜ್ಯದಲ್ಲಿರುವ ಎಲ್ಲಾ ಮಹಾನಗರ ಪಾಲಿಕೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ವತಿಯಿಂದ ಪಟ್ಟಣ ಪಂಚಾಯಿತಿ ಇಲಾಖೆಯ ಮುಂದುಗಡೆ ದಿನಾಂಕ 27/5 /2025 ಮಂಗಳವಾರ ದಿಂದ ನೌಕರರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಹಂತ ಹಂತವಾಗಿ ಹೋರಾಟಗಳನ್ನು ನಡೆಸುವ ಕುರಿತು ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ.
ರಾಜ್ಯದಲ್ಲಿರುವ ಎಲ್ಲಾ ಮಹಾನಗರ ಪಾಲಿಕೆ ,ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ನಾವುಗಳು ಹಂತ ಹಂತವಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿರುವುದರಿಂದ ಎಲ್ಲಾ ಬೇಡಿಕೆಗಳನ್ನು ಚರ್ಚಿಸಿ ರಾಜ್ಯಸಭೆಯಲ್ಲಿ ತೀರ್ಮಾನಿಸಿ ಘನ ಸರ್ಕಾರಕ್ಕೆ ನಮ್ಮ ಸಂಘದ ವತಿಯಿಂದ ಹಂತ ಹಂತವಾಗಿ ಹಕ್ಕು ಒತ್ತಾಯಕ್ಕಾಗಿ ವಿವಿಧ ರೀತಿಯಲ್ಲಿ ಮುಷ್ಕರವನ್ನು ಕೈಗೊಳ್ಳಲಾಗುತ್ತಿದೆ,
ಮಾನ್ಯರವರು ಪೌರವೃಂದದ ನೌಕರರ ಪ್ರಮುಖ ಬೇಡಿಕೆಗಳಾದ ನೌಕರರನ್ನು ಸರ್ಕಾರಿ ನೌಕರರ ಎಂದು ಘೋಷಿಸುವುದು ಹಾಗೂ ಕೆ.ಜಿ ಅಯ್.ಡಿ ಜಿ.ಪಿ.ಎಫ್, ಜ್ಯೋತಿ ಸಂಜೀವಿನಿ ಸೇರಿದಂತೆ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯವನ್ನು ಪೌರ ನೌಕರರಿಗೂ ಜಾರಿ ಮಾಡುವುದು ಹಾಗೂ ಹೊರಗುತ್ತಿಗೆ ಮೇಲೆ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ಸಿಬ್ಬಂದಿಗಳು, ಲೋಡರ್ಸ್ ಕ್ಲಿರ್ನ, ಪೌರ ಕಾರ್ಮಿಕರು ,ಸೂಪರ್ವೈಸರ್, ಕಂಪ್ಯೂಟರ್ ಆಪರೇಟರ್, ಜೂನಿಯರ್ ಪ್ರೋಗ್ರಾಮರ್, ಇನ್ನಿತರ ಗುತ್ತಿಗೆ ಹೊರಗುತ್ತಿಗೆ ಮೂಲಕ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ನೇರ ಪಾವತಿ ವೇತನ ಮಾಡುವುದು ಕಾಯಂ ಮಾಡುವುದು ಇತರೆ ಬೇಡಿಕೆಗಳನ್ನು
ಮಾನ್ಯ ರವರು ಪೌರ ನೌಕರರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ತಮ್ಮ ಮೂಲಕ ಮಾನ್ಯ ಘನ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲು ಮಾನ್ಯರಲ್ಲಿ ವಿನಂತಿಸುತ್ತೇವೆ. ಎಂದು ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ಒತ್ತಾಯಿಸುತ್ತದೆ.
