ಭಾರತ ಸ್ವಾತಂತ್ರ್ಯದ ನಂತರ ಈ ಪಾಕಿಸ್ತಾನವೆಂಬ ಪಾಪಿ ರಾಷ್ಟ್ರ ಭಾರತಕ್ಕೆ ಸದಾ ಮಗ್ಗುಲದ ಮುಳ್ಳಾಗಿ ಕಾಡುತ್ತಲೇ ಬಂದಿದೆ, ಕಾಶ್ಮೀರದ ವಿಷಯದಲ್ಲಂತು ಸುಖಾಸುಮ್ಮನೆ ಖ್ಯಾತೆ ತೆಗಿಲಿಲ್ಲಾಂದ್ರೆ ಆ ದೇಶಕ್ಕೆ ತಿಂದಿರೋ ಅನ್ನ ಅರಗಲಾರದೇನು ಅನ್ನುವಷ್ಟರ ಮಟ್ಟಿಗೆ ತಯಾರಾಗಿ ನಿಂತ ಕುಕೃತ್ಯದ ರಾಷ್ಟ್ರವೆಂದರೆ ತಪ್ಪಾಗಲಾರದು.
ಒಂದಷ್ಟು ಇತಿಹಾಸವನ್ನು ನಾವು ನೋಡುವುದಾದರೆ ಈ ಪಾಪಿಸ್ತಾನ ಒಂದಲ್ಲ ಎರಡಲ್ಲ ಹಲವಾರು ಕಿಡಿಗೇಡಿತನದ ಕೃತ್ಯಗಳನ್ನೆಸಗಿದ್ದು ನಮ್ಮ ಅರಿವಿಗೆ ಬರಬಹುದು…..
ಇತಿಹಾಸ
1) ಮೊದಲ ಭಾರತ-ಪಾಕಿಸ್ತಾನ ಯುದ್ಧ (1947-1948) – ಕಾಶ್ಮೀರ ಸಂಘರ್ಷ
- ಕಾರಣ: ಭಾರತಕ್ಕೆ ಸೇರ್ಪಡೆಯಾದ ನಂತರ ಪಾಕಿಸ್ತಾನ ಬೆಂಬಲಿತ ಬುಡಕಟ್ಟು ಸೇನಾಪಡೆಗಳು ಜಮ್ಮು ಮತ್ತು ಕಾಶ್ಮೀರವನ್ನು ಆಕ್ರಮಿಸಿದವು.
- ಫಲಿತಾಂಶ: 1949 ರಲ್ಲಿ ವಿಶ್ವಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಕದನ ವಿರಾಮ ಘೋಷಿಸಲಾಯಿತು. ಕಾಶ್ಮೀರವನ್ನು ಎರಡು ರಾಷ್ಟ್ರಗಳ ನಡುವೆ ವಿಭಜಿಸುವ ಮೂಲಕ ನಿಯಂತ್ರಣ ರೇಖೆ (LoC) ಸ್ಥಾಪಿಸಲಾಯಿತು.
- ಸಾವುನೋವುಗಳು: ಸುಮಾರು 1,500 ಭಾರತೀಯ ಸೈನಿಕರು ಪ್ರಾಣ ಕಳೆದುಕೊಂಡರು.
2) ಎರಡನೇ ಭಾರತ-ಪಾಕಿಸ್ತಾನ ಯುದ್ಧ (1965) – ಆಪರೇಷನ್ ಜಿಬ್ರಾಲ್ಟರ್
- ಕಾರಣ: ಪಾಕಿಸ್ತಾನವು ಆಪರೇಷನ್ ಜಿಬ್ರಾಲ್ಟರ್ ಅನ್ನು ಪ್ರಾರಂಭಿಸಿತು, ಕಾಶ್ಮೀರದಲ್ಲಿ ದಂಗೆಯನ್ನು ಪ್ರಚೋದಿಸಲು ಸ್ಥಳೀಯರ ವೇಷದಲ್ಲಿರುವ ಸೈನಿಕರನ್ನು ಕಳುಹಿಸಿತು.
- ಪ್ರಮುಖ ಘಟನೆಗಳು: ಭಾರತವು ಕಾಶ್ಮೀರ ಮತ್ತು ಪಂಜಾಬ್ ಮುಂಭಾಗದಾದ್ಯಂತ ಪೂರ್ಣ ಪ್ರಮಾಣದ ಮಿಲಿಟರಿ ದಾಳಿಯೊಂದಿಗೆ ಪ್ರತಿಕ್ರಿಯಿಸಿತು.
- ಫಲಿತಾಂಶ: ಯುದ್ಧವು ಬಿಕ್ಕಟ್ಟಿನಲ್ಲಿ ಕೊನೆಗೊಂಡಿತು ಮತ್ತು ಎರಡೂ ದೇಶಗಳು 1966 ರಲ್ಲಿ ತಾಷ್ಕೆಂಟ್ ಒಪ್ಪಂದಕ್ಕೆ ಸಹಿ ಹಾಕಿದವು.
- ಸಾವುನೋವುಗಳು: ಸರಿಸುಮಾರು 3,000 ಭಾರತೀಯ ಸೈನಿಕರು ಹುತಾತ್ಮರಾದರು.
3) ಮೂರನೇ ಭಾರತ-ಪಾಕಿಸ್ತಾನ ಯುದ್ಧ (1971) – ಬಾಂಗ್ಲಾದೇಶದ ಜನನ.
- ಕಾರಣ: ಪೂರ್ವ ಪಾಕಿಸ್ತಾನದಲ್ಲಿ (ಈಗ ಬಾಂಗ್ಲಾದೇಶ) ಪಾಕಿಸ್ತಾನದ ಆಂತರಿಕ ಸಂಘರ್ಷ ಮತ್ತು ಬಂಗಾಳಿ ಸ್ವಾತಂತ್ರ್ಯ ಹೋರಾಟಗಾರರಿಗೆ ಭಾರತದ ಬೆಂಬಲ.
- ಪ್ರಮುಖ ಘಟನೆಗಳು: ಭಾರತವು ಪೂರ್ವ ಮತ್ತು ಪಶ್ಚಿಮ ಎರಡೂ ರಂಗಗಳ ಮೇಲೆ ಸಂಘಟಿತ ದಾಳಿಯನ್ನು ಪ್ರಾರಂಭಿಸಿತು.
- ಫಲಿತಾಂಶ: ಭಾರತಕ್ಕೆ ಐತಿಹಾಸಿಕ ಗೆಲುವು. 90,000 ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಶರಣಾದರು , ಇದು ಬಾಂಗ್ಲಾದೇಶದ ಸೃಷ್ಟಿಗೆ ಕಾರಣವಾಯಿತು .
- ಸಾವುನೋವುಗಳು: ಸುಮಾರು 3,800 ಭಾರತೀಯ ಸೈನಿಕರು ಹುತಾತ್ಮರಾದರು.
- ಮಹತ್ವ: ಭಾರತದ ಅತ್ಯಂತ ನಿರ್ಣಾಯಕ ಮಿಲಿಟರಿ ವಿಜಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
4) ಕಾರ್ಗಿಲ್ ಯುದ್ಧ (1999) – ಆಪರೇಷನ್ ವಿಜಯ್
- ಕಾರಣ: ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ವಲಯದಲ್ಲಿ ಪಾಕಿಸ್ತಾನಿ ಸೈನಿಕರು ಮತ್ತು ಉಗ್ರಗಾಮಿಗಳು ಭಾರತೀಯ ಪೋಸ್ಟ್ಗಳನ್ನು ಆಕ್ರಮಿಸಿಕೊಂಡರು .
- ಪ್ರಮುಖ ಘಟನೆಗಳು: ತೀವ್ರವಾದ ಎತ್ತರದ ಯುದ್ಧ ನಡೆಯಿತು. ಭಾರತೀಯ ಸೇನೆಯು ಎಲ್ಲಾ ಆಕ್ರಮಿತ ಸ್ಥಾನಗಳನ್ನು ಮರಳಿ ವಶಪಡಿಸಿಕೊಂಡಿತು.
- ಫಲಿತಾಂಶ: ಭಾರತವು ಎಲ್ಲಾ ಅತಿಕ್ರಮಣ ಪ್ರದೇಶಗಳನ್ನು ಯಶಸ್ವಿಯಾಗಿ ಮರಳಿ ಪಡೆದುಕೊಂಡಿತು. ಪಾಕಿಸ್ತಾನವು ಅಂತರರಾಷ್ಟ್ರೀಯ ಟೀಕೆಯನ್ನು ಎದುರಿಸಿತು.
ಇತರ ಸಂಘರ್ಷಗಳು ಮತ್ತು ಬಿಕ್ಕಟ್ಟುಗಳು
- ಸಿಯಾಚಿನ್ ಸಂಘರ್ಷ (1984 – ಮುಂದುವರಿಯುತ್ತಿದೆ): ಭಾರತೀಯ ಪಡೆಗಳು ವಿಶ್ವದ ಅತಿ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ ಹಿಮನದಿಯನ್ನು ವಶಪಡಿಸಿಕೊಂಡವು.
- ಸರ್ಜಿಕಲ್ ಸ್ಟ್ರೈಕ್ಗಳು (2016): ಉರಿ ದಾಳಿಗೆ ಪ್ರತೀಕಾರವಾಗಿ, ಭಾರತವು ಎಲ್ಒಸಿಯಾದ್ಯಂತ ನಿಖರವಾದ ಸರ್ಜಿಕಲ್ ಸ್ಟ್ರೈಕ್ಗಳನ್ನು ನಡೆಸಿತು.
- ಬಾಲಕೋಟ್ ವಾಯುದಾಳಿ (2019): ಪುಲ್ವಾಮಾ ದಾಳಿಯ ನಂತರ, ಭಾರತೀಯ ವಾಯುಪಡೆಯು ಪಾಕಿಸ್ತಾನದ ಬಾಲಕೋಟ್ನಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿತು.
ಇಷ್ಟೆಲ್ಲಾ ಗಲಭೆಗಳು ಯುದ್ಧಗಳು ನಡೆಯಬೇಕಾದರೆ ಪ್ರಮುಖ ಕಾರಣ ಪಾಕಿಸ್ತಾನದ ಪರಮ ನೀಚ ಕೃತ್ಯಗಳೆ ಕಾರಣ, ಗಡಿಯಾಚೆ ಮತ್ತು ಗಡಿಯಲ್ಲಿ ಒಂದಿಲ್ಲಾ ಒಂದು ಕುಕೃತ್ಯ ನಡಿಸುತ್ತಲೇ ಬಂದಿದೆ, ಹಾಗೆ ನೆನಪು ಮಾಡಿಕೊಂಡಾಗ, ಬಾಂಬೆಯ ತಜ್ ಹೊಟೆಲ್ ಮೇಲೆ ದಾಳಿ ಮಾಡಿ ಹಲವಾರು ಭಾರತದ ನಾಗರಿಕರ ಜೀವ ತೆಗೆದ ಪರಮ ನೀಚ ದೇಶ ಯಾವುದಾದರು ಇದ್ದರೆ ಅದು ಈಗಿನ ಪಾಪಿಸ್ತಾನ, ತೀರಾ ಮೊನ್ನೆ ನಡೆದ ಘಟನೆಯನ್ನ ಇಡೀ ವಿಶ್ವ ರಾಷ್ಟ್ರಗಳೇ ಗಂಭೀರವಾಗಿ ತೆಗೆದುಕೊಂಡಿವೆ, ಪಾಕಿಸ್ತಾನವೆಂಬ ಪಾಪಿ ರಾಷ್ಟ್ರ ಯಾವ ಒಪ್ಪಂದ ಮಾಡಿದರು ತನ್ನ ನೀಚ ಕೃತ್ಯಗಳನ್ನ ಬಿಡಲಾರದು, ಅದು ಒಂದು ತರ ನಾಯಿ ಬಾಲವಿದ್ದಂತೆ, ಯಾವತ್ತೂ ಅದು ನೆಟ್ಟಗಾಗಲಾರದು ಕೂಡ, ಇವತ್ತು ಅಮೇರಿಕಾ, ರಷ್ಯಾ, ವಿವಿಧ ಬಲಾಢ್ಯ ರಾಷ್ಟ್ರಗಳು ಭಾರತಿಯ ನೆಲದಲ್ಲಿ ಭಾರತದ ಪ್ರಜೆಗಳನ್ನ (ಪ್ರವಾಸಿಗರನ್ನ) ಮರ್ಸಿಲೆಸ್ ಆಗಿ ಕೊಂದಿರೋದನ್ನ ಕಟುವಾಗಿ ಟೀಕಿಸಲಾಗಿದೆ, ಭಾರತ ಕೂಡ ಬಹಳ ಆಘಾತಕ್ಕೊಳಗಾಗಿದೆ, ಶಾಂತಿ ಸಂದಾನಗಳಿಗೆ ಬೆಲೆ ಕೊಡದ ಇಂತ ಪರಮ ಪಾಪಿ ದೇಶಕ್ಕೆ ಯುದ್ಧದಿಂದಲೇ ಬುದ್ಧಿ ಕಲಿಸಬೇಕಾಗಿದೆ, ಅಮಾಯಕರ ಪ್ರಾಣ ತೆಗೆದು ಅಟ್ಟಹಾಸ ಮೆರೆಯುತ್ತಿರುವ ಕಟುಕರಂತಿರುವ ಪಾಕಿಸ್ತಾನದ ಪಾಪಿಗಳಿಗೆ, ವಿಶ್ವ ಸಂಸ್ಥೆಯೂ ತಕ್ಕ ಪಾಠ ಕಲಿಸುವಲ್ಲಿ ಮತ್ತು ಒಂದಷ್ಟು ಅಂತರಾಷ್ಟ್ರೀಯ ನೀತಿ ಉಲ್ಲಂಘನೆ ಮಾಡಿದಂತ ಈ ಪಾಪಿಸ್ತಾನಕ್ಕೆ ಕಿವಿ ಹಿಂಡಬೇಕಿದೆ.
ಪಾಕಿಸ್ತಾನಕ್ಕೆ ಇನ್ನೂ ಸರಿಯಾಗಿ ಅರಿವಿಗೆ ಬಂದಿರಲಿಕ್ಕಿಲ್ಲ, ಭಾರತ ಮತ್ತು ಭಾರತೀಯರು ಶಾಂತಿ ಪ್ರಿಯರು, ಅನ್ಯಾಯವೆಸಗಿದವರಿಗೂ ಕ್ಷಮದಾನ ಮಾಡುವಂತ ದೇಶ, ಆದರೂ ತನ್ನ ನಾಯಿ ಬುದ್ಧಿ ಬಿಡದ ಈ ಪಾಪಿಸ್ತಾನ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಬೇಕಾಗುವುದು ಅದರಲ್ಲಿ ಸಂಶಯವಿಲ್ಲ.

ಡಾ.ನಂದುಪೂಜಾರಿ.ಸಿದ್ದಾಪುರ
ರಾಜ್ಯ ಹಿರಿಯ ಪತ್ರಕರ್ತರು
ಕರ್ನಾಟಕ ಪ್ರೆಸ್ ಕ್ಲಬ್ ಸಂಘಟನಾ ಕಾರ್ಯದರ್ಶಿಗಳು
