ಬೆಂಗಳೂರಿನ ಸರ್ಕಾರಿ ಮೆಡಿಕಲ್ ಕಾಲೇಜ್ ಆವರಣದಲ್ಲಿ ಸಚಿವ ಶ್ರೀ ಶರಣ್ ಪ್ರಕಾಶ್ ಪಾಟೀಲ್, ಶಾಸಕ ಶ್ರೀ ಉದಯ್ ಬಿ ಗರುಡಾಚಾರ್, ಡಾ: ಇಫ್ತಿಕಾರ್ ಫರೀದ್ ಡಾ: ಸುಜಾತಾ ರಾತೋಡ್, ಡಾ: ಯಗ್ನ ಉನ್ಮೇಶ್ ಶುಕ್ಲ, ಡಾ: ಬಿ.ಸಿ.ಭಗವಾನ್, ಗಣ್ಯರು, ಪರಿಷತ್ ನ ಅಧಿಕಾರಿಗಳು ಸೇರಿ ಶುಭಾರಂಭ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿ; ಈ ಪರಿಷತ್ ನಿಂದ ರಾಜ್ಯದ ವೈದ್ಯಕೀಯ ಸಂಸ್ಥೆಗಳಿಗೆ, ವಿದ್ಯಾರ್ಥಿಗಳಿಗೆ, ನೌಕರ ವರ್ಗಕ್ಕೆ ಆಗುವ ಅನುಕೂಲಗಳನ್ನು ವಿವರಿಸಿ, ಗಣ್ಯರು ಮೊಬೈಲ್ ಆಪ್ ಮತ್ತು KSAHC ಲೋಗೋವನ್ನು ಸಂತೋಷದಿಂದ ಬಿಡುಗಡೆಗೊಳಿಸಿದರು.
ಈ ಶುಭ ಘಳಿಗೆಯಲ್ಲಿ ಗಣ್ಯರಿಗೂ ಸನ್ಮಾನಿಸಲಾಯಿತು. ಎಲ್ಲರ ಸಹಕಾರದಿಂದ ಪರಿಷತ್ ನ ಶುಭಾರಂಭ ಕಾರ್ಯಕ್ರಮ ಯಶಸ್ವಿಯಾಯಿತು.
