ಮೂಡಲಗಿ ತಾಲೂಕಿನ ಅವರಾದಿಯ ಉದಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ವಿಜ್ಞಾನ ವಸ್ತು ಪ್ರದರ್ಶನ, ಮಕ್ಕಳಿಂದ ಸಂತೆ, ಹಳ್ಳಿಯ ಸೊಗಡು ಪಾಲಕರ ವಾರ್ಷಿಕ ಕ್ರೀಡಾಕೂಟ ಹಾಗೂ ವಚನಕಾರರ ವಿಚಾರಧಾರೆ ವಿಜ್ಞಾನ ಚಿತ್ತಾರ ಮಾತಾ ಪಿತೃ ವಂದನಾ ಕಾರ್ಯಕ್ರಮ ಸೇರಿದಂತೆ ಜರುಗಿದ ಉದಯ ಪ್ರತಿಭಾ ಪುರಸ್ಕಾರ ಪರೀಕ್ಷೆ 2025 ರ ವಿಜೇತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭ ಬಹಳ ಸಂಭ್ರಮದಿಂದ ಜರುಗಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜಮಖಂಡಿ ತಾಲೂಕಿನ ಜಕನೂರ ಹೊಸಮಠದ ಪೂಜ್ಯರಾದ ಶ್ರೀ ಗಜಾನಂದ ಅಪ್ಪಾಜಿ, ಉದ್ಘಾಟಕರಾಗಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಲೋಕಸಭಾ ಸದಸ್ಯರಾದ ಶ್ರೀ ಜಗದೀಶ್ ಶೆಟ್ಟರ್ ಮುಖ್ಯ ಅತಿಥಿಗಳಾಗಿ ಅರಭಾವಿ ಮತಕ್ಷೇತ್ರದ ಯುವ ನಾಯಕರಾದ ಶ್ರೀ ಸರ್ವೋತ್ತಮ ಜಾರಕಿಹೊಳಿ ಹಾಗೂ ಬೆಳಗಾವಿ ಜಿಲ್ಲೆಯ ಬಿಜೆಪಿ ಗ್ರಾಮೀಣ ಅಧ್ಯಕ್ಷರಾದ ಶ್ರೀ ಶುಭಾಷ್ ಪಾಟೀಲ, ಸಂಸ್ಥೆಯ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ನಾಯಿಕ ಅತಿಥಿಗಳಾಗಿ ಮಾಜಿ ಎ.ಪಿ.ಎಂ.ಸಿ ಸದಸ್ಯರಾದ ಶ್ರೀ ಮಹಾದೇವ ಪಾಟೀಲ ಯುವ ಉದ್ಯಮಿ ಹಾಗೂ ಮಾಜಿ ಸೈನಿಕರಾದ ಶ್ರೀಶೈಲ ಭಜಂತ್ರಿ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಹಣಮಂತ ಪೂಜೇರಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದಾನಿಗಳನ್ನು ಸತ್ಕರಿಸಲಾಯಿತು. ಪಾಲಕರ ಕ್ರೀಡಾಕೂಟ ಆಯೋಜಿಸಲಾಗಿತ್ತು. ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಚ್.ಎಮ್.ಗಸ್ತಿ ಹಾಗೂ ಶಾಲೆಯ ಎಲ್ಲಾ ಪಾಲಕರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
