ಮಾಹಿತಿ ಹಕ್ಕು ಆಯೋಗದಲ್ಲಿ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಲು 25 ಅರ್ಜಿಗಳ ಮಿತಿಯನ್ನು ಹಾಕಿದ ಮಾಹಿತಿ ಹಕ್ಕು ಆಯೋಗದ ತೀರ್ಮಾನಗಳನ್ನು ವಿರೋಧಿಸುತ್ತಾ ಅರಣ್ಯ ಭೂಮಿ ಸಾಗುವಳಿದಾರರ ಒಕ್ಕೂಟದ ಅಧ್ಯಕ್ಷರಾದ ಶ್ರೀಯುತ ಗಣೇಶ್ ಬೆಳ್ಳಿ ಹೊಸನಗರ ಇವರು ಮಾಹಿತಿ ಹಕ್ಕು ಆಯೋಗಕ್ಕೆ ಕೆಲವೊಂದಷ್ಟು ಪ್ರಶ್ನೆಗಳನ್ನು ಮಾಡಿರುತ್ತಾರೆ. ಮಾಹಿತಿ ಹಕ್ಕು ಆಯೋಗದವರು ಒಬ್ಬ ಆರ್ಟಿಐ ಕಾರ್ಯಕರ್ತನಿಗೆ 25 ಅರ್ಜಿಗಳ ಮಿತಿಯನ್ನು ಹಾಕಿರುವುದರ ಹಿಂದೆ ಇರುವ ಕಾರಣಗಳು ಏನು ಎಂಬುದನ್ನು ಮಾಹಿತಿ ಹಕ್ಕು ಆಯೋಗ ಸ್ಪಷ್ಟವಾಗಿ ತಿಳಿಸಬೇಕಿದೆ!
ಈಗಾಗಲೇ ಮಾಹಿತಿ ಹಕ್ಕು ಆಯೋಗಕ್ಕೆ ಯಾರು ಯಾರ ಅರ್ಜಿಗಳು ಎಷ್ಟು ಇದೆ ಎಂಬುದನ್ನು ಸಹ ತಿಳಿಸಬೇಕಿದೆ ಇದರಲ್ಲಿ ಮಲೆನಾಡು ಭಾಗದಲ್ಲಿ ಅಣೆಕಟ್ಟು ನಿರ್ಮಾಣಗಳಿಂದ ಸಂತ್ರಸ್ತ ರಾ ಗಿರುವ ಮತ್ತು ಮಲೆನಾಡಲ್ಲಿ ಬದುಕುತ್ತಿರುವ ಜನರ ವಿರುದ್ಧ ಅರಣ್ಯ ಒತ್ತುವರಿ ಯಾಗಿದೆ ಎಂದು 1100 ಕ್ಕೂ ಹೆಚ್ಚು ಅರ್ಜಿಗಳನ್ನು ನೀಡಿದ ಗಿರಿಶಾಚಾರಿ ಯವರ ಅರ್ಜಿ ಗಳು ಎಷ್ಟಿವೆ ಎನ್ನುವುದನ್ನು ಸಹ ಆಯೋಗ ತಿಳಿಸಬೇಕಿದೆ ಇಂದು ಮಾಹಿತಿ ಹಕ್ಕು ಆಯೋಗ ಆಳುವ ಸರ್ಕಾರದ ಮತ್ತು ರಾಜಕೀಯ ಪಕ್ಷಗಳ ಕೈಗೊಂಬೆ ಆಗಿದೆಯೇ? ಬಡವರಿಗೆ ಭೂಮಿ ಹಕ್ಕು ನೀಡದ ಸರ್ಕಾರಗಳು ಈಗ ಮಾಹಿತಿ ಹಕ್ಕು ಕೇಳಲು ನಿಯಮ ಹಾಕುತ್ತಿರುವುದರ ಹಿಂದಿನ ಉದ್ದೇಶವೇನು? ಪ್ರಜಾಪ್ರಭುತ್ವದಲ್ಲಿ ಮಾಹಿತಿ ಬಹಿರಂಗ ಮಾಡಬೇಕಿರುವುದು ಸರ್ಕಾರದ ಜವಾಬ್ದಾರಿ. ಮಾಹಿತಿ ಕೇಳುವುದು ಪ್ರಜೆಗಳ ಹಕ್ಕು ಈ ಹಕ್ಕು ಗಳನ್ನು ಮೋಟಕು ಕುಗೊಳಿಸುವ ತಂತ್ರವನ್ನು ಮಾನ್ಯ ಸಿದ್ದರಾಮಯ್ಯನವರ ಸರ್ಕಾರ ಮಾಡುತ್ತಿದೆಯೇ?
ಅಥವಾ ಸ್ನೇಹಮಯಿ ಕೃಷ್ಣ ರವರ ಭಯ ಇದಕ್ಕೆ ಕಾರಣವೇ ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಬೇಕಿದೆ?
ಇಲ್ಲವಾದರೆ ಸರ್ಕಾರದ ಅಕ್ರಮಗಳನ್ನು ಬಯಲಿಗಳಿರುವ ಪ್ರಜ್ಞಾವಂತರನ್ನು ಹತ್ತಿಕುವ ಪ್ರಯತ್ನ ಎನ್ನುವುದಾದರೂ ಒಪ್ಪಿಕೊಳ್ಳಬೇಕು.
ಗಿರೀಶ್ ಆಚಾರ್ ಅವರಿಗೆ ಇತ್ತೀಚಿಗೆ ಚೇಂಜ್ ಮೇಕರ್ 2025 ಎಂಬ ಪ್ರಶಸ್ತಿಯನ್ನು ಕೊಟ್ಟ ಡೆಕ್ಕನ್ ಹೆರಾಲ್ಡ್ ಸಂಸ್ಥೆಯ ಉದ್ದೇಶವೇನು ಎಂಬುದನ್ನು ತಿಳಿಸಬೇಕಿದೆ.
ಈ ಡೆಕ್ಕನ್ ಹೆರಾಲ್ಡ್ ಸಂಸ್ಥೆ ಮೂಲ ಯಾರದ್ದು ಇದರ ಹಿಂದಿನ ಹಗರಣಗಳೇನು ಎನ್ನುವುದನ್ನು ಸಮೇತ ಜನರಿಗೆ ಈಗಾಗಲೇ ತಿಳಿದಿದೆ ಮತ್ತು ತಿಳಿಸಬೇಕಿದೆ. ಶಿವಮೊಗ್ಗದಲ್ಲಿ ಅರಣ್ಯ ಉಳಿಸಿದ ನ್ಯಾಯದ ಪ್ರಶಸ್ತಿಯನ್ನು ಗಿರೀಶ್ ಆಚಾರ್ ಅವರಿಗೆ ಕೊಟ್ಟ ಉದ್ದೇಶ ಏನು? ಗಿರೀಶ್ ಆಚಾರ್ ಅವರು ಅಧಿಕಾರಿಗಳ ಪರವಾಗಿ ಅರ್ಜಿಗಳನ್ನು ಹಾಕಿದ್ದಾರೆಯೇ?
ಮಲೆನಾಡಿನಲ್ಲಿ ವಾಸಸುತ್ತಿರುವ ಶರಾವತಿ ಮುಳುಗಡೆ ಸಂತ್ರಸ್ತರುಮತ್ತು ಅರಣ್ಯ ಒತ್ತುವರಿದಾರರ ಸಮಸ್ಯೆ ಗಳನ್ನು ಗುರುತಿಸದೆ ಅರಣ್ಯ ಇಲಾಖೆ ನೋಟಿಫಿಕೇಶನ್ ಮಾಡಿರುವುದನ್ನು ಪ್ರಶ್ನಿಸುವವರನ್ನು ಹತ್ತಿಕ್ಕುವ ಪ್ರಯತ್ನ ಇದಾಗಿದೆಯೇ?
ಹಾಗಾದರೆ ಅಧಿಕಾರಿಗಳ ಮೇಲೆ ಅನೇಕ ಲೋಕಾಯುಕ್ತ ದಾಳಿಗಳಾಗುತ್ತವೆ ದಾಳಿಗೊಳಗಾದ ಎಷ್ಟು ಅಧಿಕಾರಿಗಳಿಗೆ ಶಿಕ್ಷೆಯಾಗಿದೆ?
ಅಧಿಕಾರಿಗಳ ಮೇಲೆ ನಿಯಂತ್ರಣವಿಲ್ಲದ ಸರ್ಕಾರ ಅಧಿಕಾರಿಗಳು ಮಾಡುವ ತಪ್ಪುಗಳನ್ನು ಮುಚ್ಚಿಟ್ಟುಕೊಳ್ಳುವ ಸರ್ಕಾರ ಈ ಅಕ್ರಮಗಳನ್ನು ಬಯಲಿಗೆಳೆಯುವ ಮಾಹಿತಿ ಹಕ್ಕು ಕಾರ್ಯಕರ್ತರನ್ನು ಹತ್ತಿಕುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಸರ್ಕಾರದ ಈ ನಿರ್ಧಾರ ಖಂಡನೀಯ ಇದನ್ನು ಖಂಡಿಸುತ್ತಾ ಮಾಹಿತಿ ಹಕ್ಕು ಆಯೋಗವನ್ನು ತಕ್ಷಣ ಈ ನಿಯಮವನ್ನು ತಂದ ಉದ್ದೇಶಕ್ಕೆ ಸ್ಪಷ್ಟ ಕಾರಣ ತಿಳಿಸಬೇಕು ಮತ್ತು ಈ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸುತ್ತಾ ಇದುವರೆಗೆ ಸಾವಿರ ಸಾವಿರ ಅರ್ಜಿಗಳನ್ನು ಮಾಹಿತಿ ಹಕ್ಕು ಅಡಿಯಲ್ಲಿ ಸಲ್ಲಿಸಿರುವ ಗಿರೀಶ್ ಆಚಾರ್ ಮತ್ತು ಎಸ್ ಆರ್ ಹಿರೇಮಠ್ . ರವರ ಹೆಸರುಗಳು ಕಪ್ಪು ಪೆಟ್ಟಿಗೆ ಸೇರಿಲ್ಲವೇಕೆ ಎಂಬುದನ್ನು ಪ್ರಶ್ನಿಸುತ್ತಾ ಈ ಕಾಯ್ದೆಯ ವಿರುದ್ಧ ಹೋರಾಟವನ್ನು ರೂಪಿಸಿಕೊಳ್ಳುವುದಕ್ಕೆ ಮಲೆನಾಡಿನ ಅರಣ್ಯ ಭೂಮಿ ಸಾಗುವಳಿ ದಾರರು ಹಾಗೂ ಮುಳುಗಡೆ ಸತ್ರಸ್ತರ ಪರ ಹೋರಾಟ ನಡೆಸುತ್ತಿರುವ ಮುಳುಗಡೆ ಸಂತ್ರಸ್ಥರ ಹೋರಾಟ ಸಮಿತಿ ಮತ್ತು ಮಲೆನಾಡಿನ ಅರಣ್ಯ ಭೂಮಿ ಸಾಗುವಳಿದಾಗ ಒಕ್ಕೂಟದ ಅಧ್ಯಕ್ಷರಾದ ಗಣೇಶ್ ಬೆಳ್ಳಿ ಮತ್ತು ಪದಾಧಿಕಾರಿಗಳು ತಿಳಿಸಿರುತ್ತಾರೆ.
ವರದಿ MH ರಾಘವೇಂದ್ರ ಸಂಪೋಡಿ