ಹೂವಿನಹಡಗಲಿ .ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೂವಿನಹಡಗಲಿ ಮತ್ತು ಹಿರೇಹಡಗಲಿ ಯೋಜನಾ ಕಚೇರಿ ವ್ಯಾಪ್ತಿಯ ಹಿರೇಹಡಗಲಿ ವಲಯದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಯನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ಸರ್ ವಹಿಸಿಕೊಂಡರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿರುವ ಆರೋಗ್ಯ ಇಲಾಖೆಯ ಸಮುದಾಯ ಆರೋಗ್ಯ ಅಧಿಕಾರಿ ಅನಿಲ್ ಕುಮಾರ್ ಅವರು ಮಕ್ಕಳಿಗೆ ಮಾದಕ ವಸ್ತುಗಳೆಂದರೆನು ಅವುಗಳಿಗೆ ಹೇಗೆ ಮಕ್ಕಳು ದೂರ ಇರಬೇಕು ಎಂದು ಹೇಳಿದರು ಹಾಗೆಯೇ ಮೂರು ಹಂತದಲ್ಲಿ ಬಲಿಯಾಗುವ ಸಾಧ್ಯತೆಗಳಿರುತ್ತವೆ , 1)ಒತ್ತಡ ಹೆಚ್ಚಾದಾಗ, 2) ಸಹವಾಸ ದೋಷ,3) ಪ್ರಯೋಗ ಮಾಡುವುದರಿಂದ ಮಕ್ಕಳು ಕೆಟ್ಟ ಚಟಗಳಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಓದುವಾಗ ಹೆಚ್ಚು ಒತ್ತಡಕ್ಕೆ ಒಳಗಾಗಬಾರದು ಸ್ನೇಹಿತರೊಂದಿಗೆ ಇರುವಾಗ ಕೆಟ್ಟ ಚಟಗಳಿಗೆ ಬಲಿಯಾಗಬಾರದು. ಇದರಿಂದ ಆರೋಗ್ಯ ಹಾನಿ ಮತ್ತು ಅಂದುಕೊಂಡಂತೆ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲ .ಇದರಿಂದ ಹಲವಾರು ಕಾಯಿಲೆಗಳು ಮನುಷ್ಯನಿಗೆ ಬರುವುದರಿಂದ ನಾವು ಮತ್ತು ಮಕ್ಕಳು ಕೂಡ ಗುಟ್ಕಾ ಸೇವನೆ, ಮದ್ಯಪಾನ ಮಾಡುವುದು ಸಿಗರೇಟ ಡ್ರಗ್ಸ್, ಮುಂತಾದ ಮಾದಕ ವಸ್ತುಗಳಿಗೆ ಬಲಿಯಾಗದೆ ಶಿಕ್ಷಣದ ಕಡೆ ಹೆಚ್ಚು ಒತ್ತನ್ನ ಕೊಡಿ ಎಂದು ಮಾಹಿತಿಯನ್ನು ನೀಡಿದರು. ಕೃಷಿ ಮೇಲ್ವಿಚಾರಕರಾದ ದಿನೇಶ್ ರವರು ಪ್ರಾಸ್ತವಿಕವಾಗಿ ಮಾತನಾಡಿದರು .ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಶಾಲಾ ಕಾಲೇಜು ಮಕ್ಕಳಿಗೆ ದುಶ್ಚಟಗಳಿಗೆ ಬಲಿ ಆಗಬಾರದೆಂದು ಪ್ರತಿ ವರ್ಷವೂ ಕೂಡ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಇದರ ಪ್ರಯೋಜನವನ್ನು ಎಲ್ಲ ಮಕ್ಕಳು ಪಡೆದುಕೊಳ್ಳಬೇಕು ಎಂದರು,. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಪ್ರಾಂಶುಪಾಲರಾದ ಪ್ರಕಾಶ್ ಸರ್ ಮಾತನಾಡಿ ಮಕ್ಕಳಿಗೆ ಮಾದಕ ವಸ್ತುಗಳ ಜೊತೆಗೆ ಅತಿ ಮುಖ್ಯವಾಗಿ ಸಣ್ಣ ವಯಸ್ಸಿನಿಂದಲೇ ಮೊಬೈಲಿಗೆ ಅಡಿಟ್ ಆಗಿರುವ ಮಕ್ಕಳು ಇದ್ದಾರೆ ಇದನ್ನ ಎಲ್ಲ ಮಕ್ಕಳು ಕಡಿಮೆ ಮಾಡಬೇಕು ಮೊಬೈಲ್ ಯಾವುದಕ್ಕೆ ಬಳಸಬೇಕು ಅಷ್ಟು ಮಾತ್ರ ಬಳಸಬೇಕು ಇಲ್ಲವಾದಲ್ಲಿ ಅದು ಕೂಡ ಒಂದು ದುಶ್ಚಟ ಎಂದು ಕಾರ್ಯಕ್ರಮದ ಬಗ್ಗೆ ಶ್ಲಾಘನೀಯ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಾಕೀ ಮೋಕ್ಷವತಿ, ಕಾಲೇಜಿನ ಎಲ್ಲಾ ಉಪನ್ಯಾಸಕರು ಸೇವಾ ಪ್ರತಿನಿಧಿಯವರು ಹಾಗೂ ಹಲವಾರು ಶಾಲಾ ಮಕ್ಕಳು ಉಪಸ್ಥಿತಿ ಇದ್ದು ಮಾಹಿತಿ ಪಡೆದುಕೊಂಡರು
