ಲಿಂಗಸೂಗೂರ್. ತಾಲೂಕಿನ ನವಲಿ. ಜೀವನದಲ್ಲಿ ಆಸ್ತಿ ದುಡ್ಡಿಗಿಂತ ಆರೋಗ್ಯವೇ ಮುಖ್ಯವಾಗಿದ್ದು ಪ್ರತಿಯೊಬ್ಬರು ಯೋಗ ಮಾಡುವ ಮುಖಾಂತರ ವೃದ್ಧಿಸಿಕೊಳ್ಳಬೇಕು . ಆರೋಗ್ಯಕರ ಜೀವನಕ್ಕೆ ಯೋಗ ಪ್ರಹಧಾರಿಯಾಗಿದೆ. ಮತ್ತು ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇರುಹುದು ಸೂಕ್ತ ವೇದಿಕೆ ದೊರಕಿದರೆ ಅವರು ಜೀವನದಲ್ಲಿ ದೊಡ್ಡ ಸ್ಥಾನಕ್ಕೆ ಹೋಗುತ್ತಾರೆ. ತಂದೆ ತಾಯಿಯ ಹೆಸರು ತರುತ್ತಾರೆ. ಎಸ್ ಎಸ್ ಎಲ್ ಸಿ ಪಿಯುಸಿ ಮಕ್ಕಳು ಬದುಕು ರೂಪಿಸಿಕೊಳ್ಳಲು ಸನ್ಮಾನ ಪ್ರಶಸ್ತಿ ಅವರಿಗೆ ದೊರಕಬೇಕು ಎಂದು ವಸಂತ್ ಕುಮಾರ್ ಬಣಗಾರ್ ಅಧ್ಯಕ್ಷರು ಬಣಗಾರ
ಫೌಂಡೇಶನ್ ಸುರಪುರ
ಸುಕ್ಷೇತ್ರ ನವಲಿ ಶ್ರೀ ಜಡೆಯ ಶಂಕರಲಿಂಗ ದೇವಸ್ಥಾನದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಯೋಗ ಸಾಧಕರಿಗೆ ಸನ್ಮಾನ ಸಮಾರಂಭವು ಹಮ್ಮಿಕೊಳ್ಳಲಾಗಿತ್ತು. ಉದ್ಘಾಟಕರಾಗಿ ಅಮರಗೊಂಡಪ್ಪ ಮೇಟಿ ಪ್ರಥಮ ದರ್ಜೆ ಗುತ್ತಿಗೆದಾರರು. ರಾಜಕೀಯ ಮುಖಂಡರು ಲಿಂಗಸೂಗೂರು ಕಾರ್ಯಕ್ರಮವನ್ನು ಸಸಿಗೆ ನೀರಿರುವ ಮುಖಾಂತರ ಉದ್ಘಾಟಿಸಿದರು.
ಮುಖ್ಯ ಅತಿಥಿ
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಮಕ್ಕಳನ್ನು ಕುರಿತು ಶಿಕ್ಷಣವು ಸ್ವತಂತ್ರವಾಗಿ ಬದುಕುವುದನ್ನು ಕಲಿಸುತ್ತದೆ ನೀವು ಸಮಾಜ ಮೆಚ್ಚುವಂತ ಮತ್ತು ತಂದೆ ತಾಯಿಗೆ ಕೀರ್ತಿ ತರುವಂತಹ ಮತ್ತು ಸಮಾಜದ ಏಳಿಗೆಗಾಗಿ ನೀವು ಇನ್ನು ಉನ್ನತ ಹುದ್ದೆಗೆ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕೆಂದು. ಶ್ರೀ ಜಡಯ ಶಂಕರ್ ಲಿಂಗ ದೇವರ ಆಶೀರ್ವಾದ ನಿಮ್ಮೆಲ್ಲರಿಗೂ ಮೇಲಿರಲಿ ಎಂದು ಸಂಗೀತ ವೀರೇಶ್ ಮಜ್ಜಿಗಿ ಹೇಳಿದರು.
ಯೋಗ ಎಂದರೆ ದೇಹ ಉಸಿರು ಮನಸ್ಸು ಒಂದುಗೂಡಿಸಿ ಮಾಡುವುದು ಯೋಗವನ್ನು ಪ್ರತಿನಿತ್ಯ ಚಟುವಟಿಕೆಯಾಗಬೇಕು ಮನಸ್ಸು ಒಂದು ಗಾಳಿಪಟ ಉಸಿರು ಎನ್ನುವುದು ಸೂತ್ರ ಮನಸ್ಸಿನ ಎಲ್ಲಾ ಭಾವನೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಉಸಿರಾಟ ಮಹತ್ವದ ಪಾತ್ರ ವಹಿಸುತ್ತದೆ.ನಮ್ಮ ಮನಸ್ಸನ್ನು ನಮ್ಮ ಉಸಿರಾದ ಮೂಲಕ ಹತೋಟಿಗೆ ತರಬೇಕು. ಜೀವನದ ಪ್ರತಿಕ್ಷಣ ಆರೋಗ್ಯವಾಗಿ ಆನಂದ ವಾಗಿರಲು ಕಲಿತುಕೊಳ್ಳಲು ಪ್ರಯತ್ನಿಸಬೇಕು ಎಂದು ಆನಂದ್ ಬಾರಿಗಿಡದ ಹೇಳಿದರು.
ವಿಶೇಷವಾಗಿ ಶ್ರೀಮತಿ ಜಗದೀಶ್ವರಿ ಚೆನ್ನಪ್ಪ ಹರಸೂರ್ ದಂಪತಿಗಳು ಅಧ್ಯಕ್ಷರು ಬಣಗಾರ್ ಸಮಾಜ ಬೆಂಗಳೂರು 40ನೇ ವರ್ಷದ ಮದುವೆ ವಾರ್ಷಿಕೋತ್ಸವ ವನ್ನು ಆಚರಿಸಿಕೊಳ್ಳಲಾಯಿತು. ಸುಕ್ಷೇತ್ರ ಶ್ರೀ ಜಡೆಯ ಶಂಕರಲಿಂಗ ದೇವರ ಆಶೀರ್ವಾದ ಪಡೆದರು. ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಸದ್ಭಕ್ತರು ನವಲಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಜಡೆ ಯ ಶಂಕರ ದೇವರ ಆಶೀರ್ವಾದ ಪಡೆಯಬೇಕೆಂದು ಸದ್ಭಕ್ತರಲ್ಲಿ ಮನವಿ ಮಾಡಿಕೊಂಡರು
ಮಣ್ಣೆತ್ತಿನ ಅಮಾವಾಸ್ಯೆಯ ದಾಸೋಹ ಸೇವೆಯನ್ನು ಸಲ್ಲಿಸಿದರು. ವಿಶೇಷವಾಗಿ ಸನ್ಮಾನಿಸಲಾಯಿತು ಭರತನಾಟ್ಯ ಬಾಲ ಪ್ರತಿಭೆ ಸಾನ್ವಿ ಡಿ ಜಗಂಡ ಬಾವಿ ಮತ್ತು ಯೋಗ ಸಾಧಕ ರವಿ ಐದಭಾವಿ ಸನ್ಮಾನಿಸಲಾಯಿತು.
ವೈ ಬಿ ಚಳಿಮರದ ಶಿಕ್ಷಕರು ಶ್ರೀ ಜಡೆ ಶಂಕರಲಿಂಗ ದೇವಸ್ಥಾನದ ಬಗ್ಗೆ ದೇವಸ್ಥಾನದ ಇತಿಹಾಸವನ್ನು ಭಕ್ತಿಯ ಪವಾಡಗಳನ್ನು ಸಮಾರಂಭದಲ್ಲಿ ತಿಳಿಸಿದರು. ಚಂದ್ರಶೇಖರ್ ಸ್ವಾಮಿ ಎ ಡಬ್ಲ್ಯೂ ಸಾಯಕ ಕಾರ್ಯನಿರತ ಅಭಿಯಂತರ ಕೃಷ್ಣ ಭಾಗ್ಯ ಜಲ ನಿಗಮ. ರೋಡಬಂಡಾ. ನೀಲಮ್ಮ ಡಿ ಜಗಂಡ ಬಾವಿ ಶಿಕ್ಷಕರು ಮುದ್ದೇಬಿಹಾಳ ಅಜಿ ಬಾಬು ಅಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಲಿಂಗಸೂರು. ಶಂಕ್ರಪ್ಪ ಬಡಿಗೇರ್ ರೋಡಲ ಬಂಡ ದೇವರೆಡ್ಡಿ ಜೆಇ ರೋಡ್ಲ ಬಂಡ ಸಮಾರಂಭದ ವೇದಿಕೆ ಮೇಲಿದ್ದರೂ. ನಿರೂಪಣೆ ಶ್ರೀಧರ್ ಮಸ್ಕಿ ಸಾಹಿತಿ ಸ್ವಾಗತ ಸುರೇಶ್ ನಾಗಲಿಕರ್, ಬಳ್ಳಾರ ಪ್ರಾರ್ಥನೆ ವಿಜಯದಾಸ ನವಲಿ ಸಾಹಿತಿ ಕಿರಣ್ ಕಂದಗಲ್ ವಂದಿಸಿದರು.
