ವಿಜಯಪುರ : ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಹಯೋಗದಲ್ಲಿ ವಿನೂತನವಾಗಿ ಆಯೋಜಿಸಲಾದ ಒಂದು ದಿನದ ಪ್ರೇಕ್ಷಣೀಯ ಸ್ಥಳಗಳ ಪ್ರವಾಸದ ವಿನೂತನ ವಿಜಯ ರಥಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಶುಕ್ರವಾರ ಚಾಲನೆ ನೀಡಿದರು.
ಶುಕ್ರವಾರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ವಿಜಯ ರಥ ಬಸ್ಗೆ ಅವರು ಚಾಲನೆ ನೀಡಿದರು. ವಿಜಯ ರಥ ಬಸ್ ಪ್ರತಿದಿನ ಬೆಳಿಗ್ಗೆ ೯ ಗಂಟೆಗೆ ಕೇಂದ್ರ ಬಸ್ ನಿಲ್ದಾಣದಿಂದ ಹೊರಟು, ನಗರದ ಇಬ್ರಾಹಿಂ ರೋಜಾ ಸ್ಮಾರಕ, ಶ್ರೀ ಲಕ್ಷ್ಮಿ ದೇವಸ್ಥಾನ ತೊರವಿ, 1008 ಸಹಸ್ರಫಣಿ ಶ್ರೀ ಪಾರ್ಶ್ವನಾಥ ಜೈನ ಬಸದಿ, ಮಲೀಕ-ಇ-ಮೈದಾನ ತೋಪ್, ಬಾರಾಕಮಾನ, ಗಗನ್ ಮಹಲ್, ಜಾಮೀಯಾ ಮಸೀದಿ, ಶಿವಗಿರಿ-ಶಿವನ ಮೂರ್ತಿ, ಗೋಳಗುಮ್ಮಟ, ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿ ಮರಳಿ ಸಂಜೆ 4 ಗಂಟೆಗೆ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಲಿದ್ದು, ಮಧ್ಯಾಹ್ನ 11 ಗಂಟೆಗೆ ಚಹಾ-ಉಪಹಾರಕ್ಕಾಗಿ 15 ನಿಮಿಷ ಹಾಗೂ ಮಧ್ಯಾಹ್ನ 1.30 ಗಂಟೆಗೆ ವಿಶ್ರಾಂತಿಗೆ 30 ನಿಮಿಷ ಅವಕಾಶ ಕಲ್ಪಿಸಲಾಗಿದೆ.
ವರದಿ : ಯಮನಪ್ಪ ಚೌಧರಿ
