ಕಳ್ಳತನ ಗಾಂಜಾ ಸೇರಿದಂತೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಹೊರ ರಾಜ್ಯದ ಜನರ ಬೆಂಬಲಕ್ಕೆ ನಿಂತ ದಲಿತ ಮುಖಂಡನ ವಿರುದ್ಧ ಆಕ್ರೋಶ
ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ DSS ಜಿಲ್ಲಾ ಸಂಚಾಲಕ ನಿಂಗರಾಜು ಮಾಲ್ಲಡಿ ಅವರು ಕೇರಳ,ತಮಿಳುನಾಡು,ಆಂದ್ರಪ್ರದೇಶದ ಕೆಲವು ಜನರು ಕಟ್ಟೆಮಳಲವಾಡಿ ಗ್ರಾಮದಲ್ಲಿ ವಾಸವಾಗಿದ್ದು ಅವರಿಗೆ ಕಟ್ಟೆಮಳಲವಾಡಿ ಗ್ರಾಮದಲ್ಲಿ ನಿವೇಶನ ನೀಡುವಂತೆ ತಹಶೀಲ್ದಾರ್ ಮಂಜುನಾಥ್ ಅವರಿಗೆ ತಾಲ್ಲೂಕು ಪಂಚಾಯಿತಿ ಅಭಿವದ್ಧಿ ಅಧಿಕಾರಿ ಹೊಂಗಯ್ಯ ಅವರಿಗೆ ಮನವಿ ನೀಡಿದ್ದು ಇದನ್ನು ವಿರೋದಿಸಿ ಗ್ರಾಮದ ಎಲ್ಲ ಸಮಾಜದ ಮುಖಂಡರು ಗ್ರಾಮ ಪಂಚಾಯಿತಿ ಸದಸ್ಯರು ಅದ್ಯಕ್ಷರು ವಿವಿಧ ಪ್ರಗತಿ ಪರ ಸಂಘಟನೆಯ ಮುಖಂಡರು ಸೇರಿ ಉಪವಿಭಾಗಾಧಿಕಾರಿ ವಿಜಯ್ ಕುಮಾರ್ ರವರಿಗೆ, ತಹಶೀಲ್ದಾರ್ ಮಂಜುನಾಥ್ ಅವರಿಗೆ ಇಓ ಹೊಂಗಯ್ಯ, ಮನವಿ ಪತ್ರ ಸಲ್ಲಿಸಿ ನಿಂಗರಾಜು ಮಾಲ್ಲಡಿ ನೀಡಿರುವ ಮನವಿ ಪತ್ರವನ್ನು ತಿರಸ್ಕರಿಸಿ ಕಟ್ಟೆಮಳಲವಾಡಿ ಗ್ರಾಮದಲ್ಲಿ ಮೂಲ ವಾಸಿಯಾಗಿರುವ ಬಡವರಿಗೆ ನಿವೇಶನ ನೀಡುವಂತೆ ಮನವಿ ಮಾಡಿದರು.

ಇದೇ ವೇಳೆ ಮಾತನಾಡಿದ ಗ್ರಾಮಸ್ಥರು ನಮ್ಮ ಗ್ರಾಮದಲ್ಲಿ ಒಂದೇ ಮನೆಯಲ್ಲಿ ನಾಲ್ಕು ಐದು ಕುಟುಂಬಗಳು ವಾಸ ಮಾಡುತ್ತಿವೆ ಅವರಿಗೆ ಮನೆ ನಿವೇಶನ ಇಲ್ಲ ಆದರೆ ನಮ್ಮ ಗ್ರಾಮದ ದಲಿತ ಮುಖಂಡರೊಬ್ಬರು ಕಳ್ಳತನ ಗಾಂಜಾ ಗಂದದ ಮರ ಸಾಗಾಣಿಕೆ ಸೇರಿದಂತೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿರುವ ಹೊರ ರಾಜ್ಯದ ಜನರಿಗೆ ನಿವೇಶನ ಕೊಡಿ ಎಂದು ಮನವಿ ಸಲ್ಲಿಸಿದ್ದು ಇದಕ್ಕೆ ನಮ್ಮ ಗ್ರಾಮದ ಎಲ್ಲ ಜನರು ವಿರೋದ ಮಾಡುತ್ತಿದ್ದು ಅವರು ನೀಡಿರುವ ಮನವಿ ಪತ್ರವನ್ನು ತಿರಸ್ಕರಿಸುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಟರಾಜ್, ಹಾಲಿ ಉಪಾಧ್ಯಕ್ಷ ದಿಲೀಪ್, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಪದ್ಮಮ್ಮ ಬಸವರಾಜು, ಸೋಮ, ಸುರೇಶ್, ಅಶೋಕ H, ಡಿ ಮಹೇಶ್, ನಾಗರತ್ನಮ್ಮ, ಮಹದೇವ, ರಾಜು, ಕಿರಣ್ ಕುಮಾರ್, ಶಫೀಕ್ ಅಹಮದ್, ಹೊನ್ನ ಶೆಟ್ಟಿ,ಮಹದೇವ,ಜ್ಯೋತಿ ಸ್ವಾಮಿ, ಸಂಜು,ನಟರಾಜ್,ನವೀನ್, ಸೇರಿದಂತೆ ಗ್ರಾಮದ ಎಲ್ಲ ಸಮಾಜದ ಯಾಜಮನುರು ಮುಖಂಡರು ಹಾಜರಿದ್ದರು.
