ಹೆಬ್ಬಾಲೆ: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡೆಂಗ್ಯೂ ರೋಗಗಳ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಅಡ್ವಕಸಿ ಸಭೆಯನ್ನು ಆರೋಗ್ಯ ಕೇಂದ್ರದಲ್ಲಿ ನಡೆಸಲಾಯಿತು. ಡಾಕ್ಟರ್ ದರ್ಶನವರು ಸಭೆಯಲ್ಲಿ ಮುಂಜಾಗ್ರತಾ ಕ್ರಮದ ಬಗ್ಗೆ ಮಾಹಿತಿಯನ್ನು ನೀಡಿದರು. ಡಾಕ್ಟರ್ ಸಾನಿಯಾ ಅವರು ಮುಂಜಾಗ್ರತಾ ಕ್ರಮ, ಗೃಹ ಆರೋಗ್ಯದ ಬಗ್ಗೆ ವಿವರಿಸಿದರು ಆರೋಗ್ಯ ನಿರೀಕ್ಷಕರಾದ ಸಂಜಯ್ ಕುಮಾರ್ ಅವರು ತ್ಯಾಜ್ಯ ವಿಲೇವಾರಿ, ಕುಡಿಯುವ ನೀರಿನ ಸ್ವಚ್ಛತೆ, ಚರಂಡಿ ಶುಚಿತ್ವದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ಅರುಣ ಕುಮಾರಿ ವಹಿಸಿದ್ದರು. ಸಭೆಯಲ್ಲಿ ಚಂದ್ರಶೇಖರ್, ಮಂಜುನಾಥ್, ರವಿ, ಆರತಿ, ಶೀಲಾ, ತೇಜಸ್ವಿನಿ, ನಾಗೇಂದ್ರ ಆಚಾರಿ, ಶಶಿಕಲಾ ಭಾಗವಹಿಸಿದ್ದರು.
