ಶಿರಸಿ: ವೃತ್ತಿ ಪೋಲಿಸ್ ಇಲಾಖೆಯದ್ದಾದರೂ ಮನಸ್ಸು ಕವಿ ಹೃದಯದ್ದು ಆದರೆ ಸಾಹಿತ್ಯಕ್ಕಿಂತ ತಮ್ಮ ವೃತ್ತಿಯಲ್ಲಿಯೇ ಸಾಧನೆಮಾಡಿರುವ ಶಿರಸಿ ನಗರ ಠಾಣೆ ಪಿಎಸ್ಆಯ್ ನಾಗಪ್ಪ ಬಿ ಇವರಿಗೆ 2022 ನೇ ಸಾಲಿನ ಪ್ರತಿಷ್ಠಿತ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಅಯ್ಕೆಯಾಗಿದ್ದಾರೆ.
ಶಿರಸಿಯಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ಈ ಪ್ರಶಸ್ತಿಗೆ ಆಯ್ಕೆಯಾಗಿರುವುದು ಶಿರಸಿಗರಿಗೂ ಹೆಮ್ಮೆಯ ವಿಷಯವಾಗಿದೆ.ಶಿರಸಿ ಮಾರ್ಕೆಟ್ ಠಾಣೆಯ ಪಿಎಸ್ಆಯ್ ಆಗಿ ತಮ್ಮ ನಿಖರವಾದ ಸೇವೆಯ ಮೂಲಕ ಜನಸ್ನೇಹಿ ಪಿಎಸ್ಆಯ್ ಎಂದೇ ಗುರುತಿಸಿಕೊಂಡಿದ್ದ ಅವರು ಕಾರವಾರಕ್ಕೆ ವರ್ಗಾವಣೆಗೊಂಡಿದ್ದರು ನಂತರ ಅವರು ಪುನಃ ಶಿರಸಿ ನಗರ ಠಾಣೆಗೆ ಬಂದು ಪಿಎಸ್ಆಯ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನವರಾಗಿರುವ ನಾಗಪ್ಪ ರವರು ಗುಲ್ಬರ್ಗದಲ್ಲಿ ಪಿಎಸ್ಆಯ್ ಆಗಿ ನಿಯೋಜನೆಗೊಂಡ ಬಳಿಕ ಅವರು ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ನಗರ ಠಾಣೆಯ ಪಿಎಸ್ಆಯ್ ಆಗಿ ಸೇವೆ ಸಲ್ಲಿಸಿದರು.ನಂತರ ಅವರ ವೃತ್ತಿ ಸೇವೆ ಶಿರಸಿಯಲ್ಲಿ ಆರಂಭಗೊಂಡಿರುವದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.
