ಸುರಪೂರ:: ರಾಮ ನವಮಿ ಹಾಗೂ ಹನುಮ ಜಯಂತಿ ಪ್ರಯುಕ್ತ ದಿನಾಂಕ 22- 4 -2025 ರಂದು ಸುರಪುರ ಪಟ್ಟಣದಲ್ಲಿ ಹನುಮಾನ್ ಮೂರ್ತಿಯ ಹಾಗೂ ಶ್ರೀ ಪ್ರಭು ರಾಮ ಮೂರ್ತಿಯ ಭವ್ಯ ಮೆರವಣಿಗೆ ನಡೆಸಲಾಗುವುದು ಎಂದು ರಾಮ್ ಸೇನೆಯ ಜಿಲ್ಲಾ ಅಧ್ಯಕ್ಷರಾದ ಶರಣು ನಾಯಕ್ ದೊಣ್ಣೆಗೇರಿ.
ಸುರಪುರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬಿತ್ತಿ ಪತ್ರಿಕೆಗಳನ್ನು ಬಿಡುಗಡೆ ಮಾಡಿದರು.
ಇದೇ 22ನೇ ತಾರೀಖರಂದು ಸುರಪುರ ಪಟ್ಟಣದಲ್ಲಿ ಶ್ರೀರಾಮ ನವಮಿ ಹಾಗೂ ಹನುಮ ಜಯಂತಿಯ ಪ್ರಯುಕ್ತ ಮಧ್ಯಾಹ್ನ 1:00 ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಆವರಣದಿಂದ ಪ್ರಾರಂಭವಾಗಿ ಗಾಂಧಿ ವೃತ ಮಾರ್ಗವಾಗಿ ದರ್ಬಾರ್ ರಸ್ತೆಯ ಮಾರ್ಗವಾಗಿ ವಲ್ಲಾಭಾಯಿ ಪಟೇಲ್ ವೃತ್ತ ಮಾರ್ಗವಾಗಿ ಪುನಃ ಶ್ರೀ ವೇಣುಗೋಪಾಲ ದೇವಸ್ಥಾನದವರೆಗೆ ಶ್ರೀ ಹನುಮ ಮೂರ್ತಿಯ ಭವ್ಯ ಮೆರವಣಿಗೆ ನಡೆಸಲಾಗುವುದು ಇಂದು ಬಾಂಧವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂದೂ ಧರ್ಮವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದು ತಾವುಗಳು ಎಲ್ಲಾ ಹಿಂದೂ ಧರ್ಮದವರು ಒಗ್ಗಟ್ಟಾಗಿ ಭಾರತದ ಸಂಸ್ಕೃತಿಯ ಹಿಂದೂ ಧರ್ಮದ ರಕ್ಷಣೆ ಗೋಸ್ಕರ ಒಗ್ಗಟ್ಟಾಗಿ ಎಂದು ಶರಣು ನಾಯಕ್ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ರಾಮ್ ಸೇನಾ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷರಾದ ಪ್ರಸಾದ್ ಅತ್ತಾವರ್ ರವರು ವಿವಿಧ ಮಠಗಳ ಸ್ವಾಮೀಜಿಗಳು ಹಾಗೂ ರಾಮ್ ಸೇನೆಯ ಸಂಘಟನೆಯ ಸದಸ್ಯರು. ಸುರಪೂರು ಶಹಾಪುರ ಯಾದಗಿರಿ ಹಿಂದೂ ಬಾಂಧವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕ ಅಧ್ಯಕ್ಷರಾದ ಲೋಕೇಶ್ ನಾಯಕ್,ಸಂಘದ ಗೌರವಾಧ್ಯಕ್ಷರಾದ ಪ್ರಮೋದ್ ಜೋಶಿ, ಅಕ್ಷಯವಗ್ಮೊಡೆ, ಹಾಗೂ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
