ಉಡುಪಿ:ಕಾಪು ತಾಲೂಕ ತಹಶಿಲ್ದಾರ್ ಡಾ.ಪ್ರತಿಭಾ ರವರಿಂದ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯ ಕುರಿತು DC ಯವರಿಗೆ ವರದಿ ಸಲ್ಲಿಕೆ
ಇಂದು ಕಾಪುವಿನ ರಾಷ್ಟ್ರೀಯ ಹೆದ್ದಾರಿ NH 66 ನ ಉದ್ದಕ್ಕೂ ಸಂಚರಿಸಿ ಕಟಪಾಡಿಯಿಂದ ಹೆಜಮಾಡಿಯವರೆಗೆ ತಹಶಿಲ್ದಾರ್ ಡಾ.ಪ್ರತಿಭಾ ಆರ್ ಪರಿಶೀಲನೆ ನಡೆಸಿ ಮಳೆಗಾಲಕ್ಕೆ ಪೂರ್ವಸಿದ್ಧತೆ ನಡೆಸಿದ್ದಾರೆ.
ಕಟಪಾಡಿ, ಪೊಸಾರು, ಪಡುಬಿದ್ರಿ, ಹೆಜಮಾಡಿ, ಬಂಟರ ಭವನದ ಎದುರು, ಮಸೀದಿ ನರ್ಸರಿ ಹತ್ತಿರ ಇತ್ಯಾದಿ ಜಾಗಗಳಿಗೆ ಭೇಟಿ ನೀಡಿ ಅಲ್ಲಿ ನೀರು ಸರಾಗವಾಗಿ ಹರಿದುಹೋಗದೆ ಇರಲು ಕಾರಣಗಳನ್ನು ಪಟ್ಟಿ ಮಾಡಿ ಮಾನ್ಯ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಿದ್ದಾರೆ.
ಕಟಪಾಡಿ:
ಕಟಪಾಡಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಭಾ ಶೆಟ್ಟಿ, ತಹಶಿಲ್ದಾರ್ ರವರಿಗೆ ಸಾತ್ ನೀಡಿ ಹೆದ್ದಾರಿ ಸಮಸ್ಯೆಯ ಬಗ್ಗೆ ವಿವರ ನೀಡಿದರು. ಸ್ಥಳೀಯರು ಸಹ ಬಂದು ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುತ್ತಿರುವುದರ ಬಗ್ಗೆ ಅಳಲು ತೋಡಿಕೊಂಡರು.
ಗ್ರಾಮಾಡಳಿತಾಧಿಕಾರಿ ಡೇನಿಯಲ್ ಕಳೆದ ಬಾರಿ ನೆರೆ ರಕ್ಷಣೆಗೆ ಪಾಡುಬಿದ್ದುದನ್ನು ನೆನಪಿಸಿಕೊಂಡು ಮತ್ತೆ ಅದು ಮರುಕಳಿಸದಂತೆ ವ್ಯವಸ್ಥೆ ಆಗಬೇಕು ಎಂದರು.
ಕಟಪಾಡಿ ಸಮೀಪದ ಉದ್ಯಾವರ ಬ್ರಿಡ್ಜ್ ಕೆಳಗಡೆಯಿಂದ ಹೋಗುವ ಒಳಚರಂಡಿ ಇದ್ದು ಅದರಲ್ಲಿ ಸರಾಗವಾಗಿ ನೀರು ಹರಿದು ಹೋಗುವುದಿಲ್ಲ.
ಪರಿಹಾರ:
ನೀರು ಹರಿದು ಹೋಗಲು ಒಳಚರಂಡಿ ವ್ಯವಸ್ಥೆ ಇದ್ದು ಚರಂಡಿಯ ಇಕ್ಕೆಲಗಳಲ್ಲಿ ಇರುವ ಹುಲ್ಲು ಮತ್ತು ಒಳಚರಂಡಿಯಲ್ಲಿ ಮಣ್ಣು ತುಂಬಿರುತ್ತದೆ ಸದ್ರಿ ಒಳಚರಂಡಿಯನ್ನು ಸ್ವಚ್ಛಗೊಳಿಸಿದಲ್ಲಿ ನೀರು ಸರಾಗವಾಗಿ ಹರಿದು ಹೋಗುತ್ತದೆ
ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟಪಾಡಿ ಜಂಕ್ಷನ್ ನಿಂದ ಸುಮಾರು 2 km ಒಳಚರಂಡಿ ನಿರ್ಮಿಸಿದ್ದು ಸರ್ವಿಸ್ ರಸ್ತೆ ಮುಕ್ತಾಯವಾಗುವಲ್ಲಿ ಒಳಚರಂಡಿ ಕಾಮಗಾರಿಯನ್ನು ನಿಲ್ಲಿಸಿರುತ್ತಾರೆ. ನೀರು ಮುಂದಕ್ಕೆ ಹರಿದುಹೋಗಲು ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ಮಳೆಗಾಲದ ನೀರು ಒಂದೇ ಕಡೆ ಶೇಖರಣೆಯಾಗಿದ್ದು ಅಲ್ಲಿರುವ ವಾಸ್ತವ್ಯದ ಮನೆಗಳಿಗೆ ನೆರೆಹಾನಿಯಾಗಿರುತ್ತದೆ ಪರಿಹಾರ ಕಟಪಾಡಿ ಜಂಕ್ಷನ್ ನಿಂದ ಸುಮಾರು 2 km ನಿಂದ ನಿರ್ಮಿಸಿದ ಒಳಚರಂಡಿ ಕಾಮಗಾರಿ ನಿಲುಗಡೆಯಾದ ಸ್ಥಳದಿಂದ ಕಲ್ಲಾಪು ಸೇತುವೆ ವರೆಗೆ ಒಳಚರಂಡಿ ನಿರ್ಮಿಸಿ ಸಂಪರ್ಕ ನೀಡಿದಲ್ಲಿ ನೀರು ಸರಾಗವಾಗಿ ಹರಿದು ಹೋಗುವುದರಿಂದ ಸದ್ರಿ ಸ್ಥಳದ ಮನೆಗಳಿಗೆ ನೆರೆಹಾನಿಯಿಂದ ಶಾಶ್ವತವಾಗಿ ಪರಿಹಾರ ನೀಡಬಹುದು.
ಪಡುಬಿದ್ರಿ:
ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿಯ ಡ್ರೈನೇಜ್ನಲ್ಲಿ ಸರಾಗವಾಗಿ ನೀರು ಹರಿದು ಹೋಗದೆ ರಸ್ತೆಯ ಮೇಲೆ ಮಳೆಗಾಲದ ನೀರು ತುಂಬಾ ನೆರೆ ಬಂದು ಕೆಲವು ಮನೆ ಮುಳುಗಡೆಯಾಗಿರುತ್ತದೆ ನಾಲ್ಕಾರು ಮನೆಗಳು ಪ್ರತಿ ವರ್ಷ ಕೃತಕ ನೆರೆಯಿಂದ ಒಳಗಡೆಯಾಗುತ್ತದೆ ರಾಷ್ಟ್ರೀಯ ಹೆದ್ದಾರಿ ಮೇಲೆ ವಾಹನ ಸಂಚಾರ ನಡೆದು ಹೋಗಲು ತುಂಬಾ ಸಮಸ್ಯೆಯಾಗಿದೆ ಪರಿಹಾರ ಮಂಗಳೂರು ರಸ್ತೆ ಪಡುಬಿದ್ರಿ ಸರ್ವಿಸ್ ರಸ್ತೆ ಕೊನೆಯಲ್ಲಿ ಚರಂಡಿ ಸರಿಯಾಗಿ ಇರುವುದಿಲ್ಲ ಪಡುಬಿದ್ರಿ ಬಂಟರ ಭವನದ ಎದುರು ಹೈವೇ ಚರಂಡಿ ಇರುವುದಿಲ್ಲ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಹೈವೇ ಚರಂಡಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಕನ್ನಂಗಾರು ಗರಡಿಯಿಂದ ಅರಥ ಹೋಟೆಲ್ ವರೆಗೆ ಸರ್ವಿಸ್ ರಸ್ತೆ ಇರುವುದಿಲ್ಲ ಎಲ್ಲಾ ಹೈವೇ ಚರಂಡಿಗಳಿಗೆ ಸಂಪರ್ಕ ರಸ್ತೆ ಇರುವುದಿಲ್ಲ ಮಹಾ ಗಣಪತಿ ದೇವಸ್ಥಾನದಿಂದ ಬಂಟರ ಭವನದ ಕಡೆ NHಗೆ ಅಡ್ಡಲಾಗಿ ನೀರು ಹರಿಯಲು ರಚಿಸಿರುವ ಅಂಡರ್ ಪಾಸ್ ಕಾಲುವೆಯ ನಿರ್ಮಾಣ ಅವೈಜ್ಞಾನಿಕವಾಗಿದ್ದು ಪಕ್ಕದಲ್ಲಿನ ಕಿರಿದಾದ ಚರಂಡಿ ವ್ಯವಸ್ಥೆಯೇ ಈ ಸಮಸ್ಯೆಗೆ ಕಾರಣ.
ಪರಿಹಾರ:
ಈಗಾಗಲೇ ಇರುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಚರಂಡಿಗಳನ್ನು ಅಗಲಗೊಳಿಸುವುದು ಮತ್ತು ಚರಂಡಿ ನಿರ್ಮಿಸುವುದು ವೈಜ್ಞಾನಿಕವಾಗಿ ನಿರ್ಮಾಣ ಮಾಡುವುದು ಮತ್ತು ಎನ್ ಹೆಚ್ ಪಕ್ಕದ ಚರಂಡಿಯನ್ನು ಅಗಲೀಕರಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸುವುದು.
ಹೆಜಮಾಡಿ
ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲವು ಮನೆಗೆ ನೀರು ನುಗ್ಗಿ ಸಮಸ್ಯೆ ಉಂಟಾಗಿರುತ್ತದೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇದ್ದು ಚರಂಡಿಯನ್ನು ಸ್ವಚ್ಛಗೊಳಿಸಿ ತಡೆಗೋಡೆ ನಿರ್ಮಿಸುವುದು ಸೂಕ್ತವಾಗಿರುತ್ತದೆ.
ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿ ಶಿವನಗರದ ಹತ್ತಿರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆಗಾಲದ ನೀರು ಶಾಲೆಯ ಎದುರುಗಡೆ ನಿಂತು ಶಾಲಾ ಮಕ್ಕಳಿಗೆ ತೊಂದರೆ ಹಾಗೂ ಶಿವನಗರ ದೇವಸ್ಥಾನದ ಕಮಾನಿನ ಪಕ್ಕದಲ್ಲಿರುವ ಮನೆಗಳಿಗೆ ನೀರು ನುಗುವ ಸಾಧ್ಯತೆ ಇರುತ್ತದೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಿದರೆ ಇದು ಸರಿಯಾಗುತ್ತದೆ.
ಪ್ರತಿ ಮಳೆಗಾಲದಲ್ಲಿ ಈ ಅವೈಜ್ಞಾನಿಕ ಕಾಮಗಾರಿಯಿಂದ ಕಾಪುವಿನಲ್ಲಿ ಕೃತಕ ನೆರೆ ಸೃಷ್ಟಿಯಾಗುತ್ತದೆ. ಕಳೆದ ವರ್ಷ ಇದೇ ರೀತಿಯ ಅವಾಂತರ ಉಂಟಾಗಿ ತಹಶಿಲ್ದಾರ್ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು.
ತಹಶಿಲ್ದಾರ್ ಡಾ.ಪ್ರತಿಭಾ ಆರ್ ಹೇಳಿಕೆ:
“ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಪ್ರತಿ ವರ್ಷ ಕಾಪುವಿನಲ್ಲಿ ಕೃತಕ ನೆರೆ ಸೃಷ್ಟಿಯಾಗುತ್ತಿದೆ. ಕಂದಾಯ ಇಲಾಖೆ ನೆರೆ ರಕ್ಷಣಾ ಕಾರ್ಯದಲ್ಲಿ ತೊಡಗಬೇಕಾಗುತ್ತದೆ. ಸಾರ್ವಜನಿಕ ರಕ್ಷಣೆ ನಮ್ಮ ಮೊದಲ ಆದ್ಯತೆ. ಅವೈಜ್ಞಾನಿಕ ಕಾಮಗಾರಿಯ ಕುರಿತು ಮಾನ್ಯ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಮನಕ್ಕೂ ತರಲಾಗಿದೆ.
ತಹಶಿಲ್ದಾರ್ ರವರ ಜೊತೆ ತಾಲ್ಲೂಕು ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವಾ, ರೆವಿನ್ಯೂ ಇನ್ಸ್ಪೆಕ್ಟರ್ ಇಜ್ಜಾರ್ ಸಾಬಿರ್, ಗ್ರಾಮಾಡಳಿತಾಧಿಕಾರಿಗಳಾದ ಡೇನಿಯಲ್ ಡಿಸೋಜ, ಜಗದೀಶ್, ಶ್ರೀಕಾಂತ್, PDO ಗಳಾದ ಚಂದ್ರಕಲಾ, ಸತೀಶ್, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪ್ರಭಾ ಶೆಟ್ಟಿ ಮುಂತಾದವರು ಹಾಜರಿದ್ದು ಪರಿಶೀಲನೆಗೆ ಸಹಕಾರ ನೀಡಿದರು.
ವರದಿ:ಡಾ.ನಂದುಪೂಜಾರಿ
ರಾಜ್ಯ ವರದಿಗಾರರು
