ಅರಸೀಕೆರೆ: ಸಾರ್ವಜನಿಕರ ಆಸ್ತಿ ಮತ್ತು ಪ್ರಾಣವನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸ್ಮರಣೆ ಮಾಡುವುದು ನಮ್ಮಗಳ ಕರ್ತವ್ಯದಲ್ಲಿ ಅದು ಒಂದು ಭಾಗವಾಗಿದೆ. ಎಂದು ಮೈಸೂರು ಪ್ರಾಂತೀಯ ಅಗ್ನಿಶಾಮಕ ಮುಖ್ಯ ಅಧಿಕಾರಿ ಪಿ.ಎಸ್ ಜಯರಾಮ್ ಅಭಿಪ್ರಾಯ ಪಟ್ಟರು.
ಅವರು ನಗರದ ಅಗ್ನಿಶಾಮಕ ಠಾಣಾ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಹುತಾತ್ಮರ ಸ್ಮಾರಕ ಸ್ತಂಭವನ್ನು ಉದ್ಘಾಟಿಸಿ ಮಾತನಾಡಿ ಇಲ್ಲಿಯ ಠಾಣೆಯ ಆವರಣದ ವಾತಾವರಣ ಮತ್ತು ಈ ಸ್ತಂಭ ಇವೆಲ್ಲವೂ ನಮ್ಮ ವಿಭಾಗ ಕಚೇರಿಯಂತೆಯೇ ಇದೆ. ಬಹಳ ಉತ್ತಮವಾಗಿ ನಿರ್ವಹಣೆ ಮಾಡಿದ್ದೀರಿ, ಹೆಚ್ಚಿನ ಪರಿಶ್ರಮವನ್ನು ಹಾಕಿದ್ದೀರಿ, ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಇದಕ್ಕೆ ಕಾರಣರಾದವರನ್ನು ಅಭಿನಂದಿಸಲು ವಿವರಗಳನ್ನು ಕಳಿಸಿಕೊಡಿ, ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳಿಗೆ ಸೂಚಿಸಿ, ನಾನು 14 ರಂದೆ ಬರಬೇಕಿತ್ತು ಕೆಲ ಕಾರ್ಯ ಒತ್ತಡದಲ್ಲಿ ಸಾಧ್ಯವಾಗಲಿಲ್ಲ ಎಂದರು
ಇಲ್ಲಿನ ಠಾಣ ಆವರಣಕ್ಕೆ ಕಾಂಪೌಂಡಿನ ಅಗತ್ಯವಿತ್ತು ಅದಕ್ಕಾಗಿಯೂ ನಾವು ಪ್ರಸ್ತಾವನೆ ನೀಡಿದ್ದೆವು ಆದರೆ ಅನುದಾನದ ಕೊರತೆಯಿಂದ ಸಾಧ್ಯವಾಗಲಿಲ್ಲ, ತಾತ್ಕಾಲಿಕವಾಗಿ ಭದ್ರಪಡಿಸಿಕೊಂಡಿದ್ದೀರಿ, ಉತ್ತಮವಾಗಿ ನಿರ್ವಹಿಸಿದ್ದೀರಿ ಎಂದರು.
ಹುತಾತ್ಮರ ಸ್ಮಾರಕ ಸ್ಥoಭ ನಿರ್ಮಾಣ ಒಳ್ಳೆಯ ಪರಿಕಲ್ಪನೆ ಬಹಳ ಅಚ್ಚುಕಟ್ಟಾಗಿ ತಾಂತ್ರಿಕವಾಗಿ ಕೌಶಲ್ಯದಿಂದ ಕೂಡಿದೆ ನಿಜಕ್ಕೂ ಇದು ನನಗೆ ಸಂತೋಷ ತಂದಿತು ಎಂದ ಅವರು ಠಾಣಾ ಆವರಣದೊಳಗಿನ ಬಾಳೆ, ಹಲಸು, ಅಡಿಕೆ, ತೆಂಗು, ಪರಿಸರವನ್ನು ಅವಲೋಕಿಸಿ ಠಾಣಾಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮೆಚ್ಚುಗೆ ಸೂಚಿಸಿದರು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಕೆ. ಪಿ. ನವೀನ್ ಕುಮಾರ್ ಕಳೆದ 14 ರಿಂದ ಇದೇ 20ರವರೆಗೆ ಅಗ್ನಿಶಾಮಕ ಸೇವಾ ಸಪ್ತಾಹ ಜಿಲ್ಲೆಯಾದ್ಯಂತ ನಡೆಯುತ್ತಿದೆ, ಇದೇ ಸಂದರ್ಭದಲ್ಲಿ ಹುತಾತ್ಮರ ಸ್ಮಾರಕ ಸ್ತಂಭ ಉದ್ಘಾಟನೆ ಆಗಿರುವುದು ಸಂತೋಷದ ಸಂಗತಿ, ಇದಕ್ಕಾಗಿ ಪರಿಶ್ರಮ ಪಟ್ಟಿದ್ದೀರಿ ಎಲ್ಲರ ಸಹಕಾರದಿಂದ ಇದು ಸಾಧ್ಯವಾಗಿದೆ, ನಿಮ್ಮ ಉತ್ತಮ ಕಾರ್ಯವನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ, ಇದೇ ಉತ್ಸಾಹದಿಂದ ಕಾರ್ಯನಿರ್ವಹಿಸಿ ಎಂದು ಆಶಿಸಿದರು.
ಅರಸೀಕೆರೆ ಠಾಣಾಧಿಕಾರಿ ಕೆ ಎಂ ಪುಟ್ಟಮಲ್ಲೇಗೌಡ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಮತ್ತು ನಮ್ಮ ಸಿಬ್ಬಂದಿಗಳ ಸಹಕಾರದಿಂದ ಇಲ್ಲಿನ ಅಭಿವೃದ್ಧಿ ಕೆಲಸಕ್ಕೆ ಕಾರಣವಾಗಿದೆ. ಎಂದರು
ಕಾರ್ಯಕ್ರಮಕ್ಕೆ ಮುನ್ನ ಗಣ್ಯರು ಹುತಾತ್ಮರ ಸ್ಮಾರಕ ಸ್ತಂಭ ಉದ್ಘಾಟಿಸಿ ಪುಷ್ಪ ನಮನ ಸಲ್ಲಿಸಿದರು. ವರದಿ ಪರ್ವಿಜ್ ಅಹಮದ್ ಅರಸೀಕೆರೆ
