ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ವಾರ್ಡ್ ನಂಬರ್ ಒಂದರ ರಸ್ತೆಯ ಮೇಲೆ ಚರಂಡಿ ನೀರು ಚರಂಡಿ ಹರಿದು ಹೋಗುತ್ತಿದೆ ಇದರಿಂದ ಗಬ್ಬುನಾಥ ಬಂದು ಚಿಕ್ಕ ಮಕ್ಕಳು ಹಿರಿಯರು ಈ ರಸ್ತೆಯಲ್ಲಿ ಸಂಚಾರ ಮಾಡಬೇಕಾದರೆ ಮೂಗು ಮುಚ್ಚಿಕೊಂಡು ತಿರುಗಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದೇ ರೀತಿಯಾಗಿ ಕ್ರಿಮಿಕೀಟಗಳ ಬಾದೆಯಿಂದ ರೋಗ ಬರುವ ಬಿತಿಯಿಂದ ಇಲ್ಲಿನ ವಾರ್ಡ್ ನಂಬರ್ ಒಂದರ ಸಾರ್ವಜನಿಕರು ಆತಂಕವನ್ನು ವ್ಯಕ್ತಪಡಿಸಿದ್ದಾರೆ ಅದೇ ರೀತಿಯಾಗಿ ಇಲ್ಲಿನ ವಾರ್ಡ್ ನಂಬರ್ ಒಂದರ ರಸ್ತೆಯನ್ನು ಮುರುಮ್ಮ ಹಾಕಿ ಸಿಸಿ ರಸ್ತೆಯನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಈ ರಸ್ತೆಯಲ್ಲಿ ಸಂಚರಿಸಲು ಅನವು ಮಾಡಿಕೊಡಬೇಕು ಹಾಗು ಸರ್ಕಾರದಿಂದ ಗ್ರಾಮಗಳ ಸಬಲೀಕರಣಕ್ಕಾಗಿ ಬಿಡುಗಡೆಯಾದ ಕೋಟ್ಯಾಂತರ ರೂಪಾಯಿ ಅನುದಾನವು ಗ್ರಾಮಗಳ ಅಭಿವೃದ್ಧಿಗೆ ಸದ್ಬಳಿಕೆಯಾಗಬೇಕು. ಕೋಟ್ಯಂತರ ರೂಪಾಯಿ ಅನುದಾನ ದುರ್ಬಳಕೆ ಆಗುವುದನ್ನು ಪ್ರತಿಯೊಬ್ಬ ಯುವಕರು ಪ್ರಶ್ನಿಸಿ ತಡೆಗಟ್ಟಬೇಕು ಎಂದು ಬಿಳವಾರ್ ಗ್ರಾಮ ಪಂಚಾಯತ್ ಕಚೇರಿಗೆ ಮನವಿ ಪತ್ರ ಸಲ್ಲಿಸಿದೆವೆಂದು ಗ್ರಾಮಸ್ಥರಾದ ಮೆಹಬೂಬ್ ಕೆ ಚೌದರಿ ವಕೀಲರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಒಂದು ವೇಳೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ ತೋರಿದರೆ ಗ್ರಾಮ ಪಂಚಾಯಿತಿಗೆ ಬೀಗವನ್ನು ಜಡೆದು ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ
ವರದಿ ಜೇಟ್ಟೆಪ್ಪ ಎಸ್ ಪೂಜಾರಿ
