ಕುಮಟಾ ತಾಲೂಕಿನ ಗೋಕರ್ಣ ಆನಂದಾಶ್ರಮ ಪ್ರೌಢಶಾಲೆಯಲ್ಲಿ ವಾರ್ಷಿಕಸ್ನೇಹ ಸಮ್ಮೇಳನ ಮತ್ತು ಪಾಲಕರ ದಿನಾಚರಣೆ ಗೋಕರ್ಣ ಇಲ್ಲಿಂದ ಅನತಿ ದೂರದಲ್ಲಿರುವ ಪುಟ್ಟ ಹಳ್ಳಿ ಬಂಕಿ ಕೊಡ್ಲ ತನ್ನದೇ ಆದ ಇತಿಹಾಸವನ್ನು ಹೊಂದಿರುವಂತಹ ಇಲ್ಲಿ ಜನ್ಮ ತಾಳಿದ ಶಿಕ್ಷಣ ಸಂಸ್ಥೆಯೇ ರೂರಲ್ ಎಜುಕೇಶನ್ ಸೊಸೈಟಿ ಈ ಸೊಸೈ ಟಿಯ ನಮ್ಮ ತಾಲೂಕಿನ ಜಿಲ್ಲೆಯ ಐತಿಹಾಸಿಕ ಶಾಲೆ ಆನಂದಾಶ್ರಮ ಪ್ರೌಢಶಾಲೆ ವಾರ್ಷಿಕೋತ್ಸವ ಮತ್ತು ಪಾಲಕರ ದಿನಾಚರಣೆ ಅತ್ಯಂತ ವಿಜ್ರಂಭಣೆಯಿಂದ ನಡೆಯಿತು. 90ರ ದಶಕದಲ್ಲಿ ಶತಮಾನೋತ್ಸವ ಆಚರಿಸಿಕೊಂಡ, ಕನ್ನಡ ಸಾಹಿತ್ಯದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶಿವರಾಮ ಕಾರಂತ್, ದರಾ ಬೇಂದ್ರೆ ವಿ ಕೃ ಗೋಕಾಕ್ ಇಲ್ಲಿನ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು ಇದು ಇತಿಹಾಸ. ವಿದ್ಯಾರ್ಥಿನಿಯರ ಪೂರ್ಣ ಕುಂಭ ಹಾಗೂ ಶಿಸ್ತಿನ ಬ್ಯಾಂಡ್ ಸೆಟ್ ನಿಂದ ದೀಪದಾರತಿಯೊಂದಿಗೆ ಅತಿಥಿ ಅಭ್ಯಾಗತರನ್ನು ಆನಂದಾಶ್ರಮ ಸಭಾಭವನಕ್ಕೆ ಆಹ್ವಾನಿಸಲಾಯಿತು. ಇಲ್ಲಿಯ ಆರಾಧ್ಯ ದೈವರಾದ ಅಮ್ಮನವರು ಹಾಗೂ ಮುರ್ಕುಂಡೇಶ್ವರ ದೇವರುಗಳ ಪಾದಾರರಿಂದ ಗಳಿಗೆ ನಮಸ್ಕರಿಸುತ್ತಾ ಪ್ರಾರಂಭವಾದ ಕಾರ್ಯಕ್ರಮ ವಿದ್ಯಾರ್ಥಿಗಳ ಸುಮಧುರ ಕಂಠದ ಪ್ರಾರ್ಥನೆಯೊಂದಿಗೆ ವೇದಿಕೆ ಕಾರ್ಯಕ್ರಮ ಪ್ರಾರಂಭವಾಯಿತು. ಮುಖ್ಯಾಧ್ಯಾಪಕರಾದ ಶ್ರೀಯುತ ಗಂಗಾಧರ್ ಭಟ್ ತುಂಬು ಹೃದಯದಿಂದ ವೇದಿಕೆ ಅಲಂಕರಿಸಿದ ಗಣ್ಯರನ್ನು ಸ್ವಾಗತಿಸಿದರು. ಅತಿಥಿಅ ಭ್ಯಾಗತರ ಪರಿಚಯವನ್ನು ಸಹ ಶಿಕ್ಷಕಿಯರಾದ ಶ್ರೀಮತಿ ಶಾಮಲಾ ಕುಮಾರಿ ಕೆ. ನಡೆಸಿಕೊಟ್ಟರು. ಶಾಲೆಯ ಸಮಗ್ರ ಶೈಕ್ಷಣಿಕ ವರದಿಯನ್ನು ಸಹ ಶಿಕ್ಷಕರಾದ ಆದಿನಾರಾಯಣ ಬಿ.ಕವರಿ ಮಂಡಿಸಿದರು. ವಿದ್ಯಾರ್ಥಿಗಳಿಂದ ಮೂಡಿ ಬಂದ ಕಥೆ ಕವನ ಚುಟುಕು ಗಳನ್ನೊಳಗೊಂಡ ಆನಂದ ಹಸ್ತ ಪತ್ರಿಕೆ ಅನಾವರಣಗೊಳಿಸಿ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ * .* ರಾಜೇಂದ್ರ ಎಸ್. ನಾಯಕ್ ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ಕಾಲೇಜ್ ಕೋಟಾಪಡುಕೆರೆ ಉಡುಪಿ ಜಿಲ್ಲೆ .,ಇವರು ಶಬ್ದ ಭಂಡಾರದ ಒಡತಿಯೇ ಓ ಶಾರದೆ ಎಂದು ತಮ್ಮ ಮಾತನ್ನು ಪ್ರಾರಂಭಿಸಿ ಒಂದು ಸ್ವಸ್ಥ ಸಮಾಜವನ್ನು ಕಟ್ಟಬಲ್ಲಂತಹ ಜ್ಞಾನ ದೇಗುಲದಲ್ಲಿ ನಾವಿದ್ದೇವೆ ಎನ್ನುತ್ತಾ ಶಾರದೆಗೆ ನಮಸ್ಕರಿಸುತ್ತಾ ಬದುಕಿನ ಸಾರ್ಥಕತೆಗೆ ಶಿಕ್ಷಣ ಬಹು ಮುಖ್ಯ ಸರಿಯಾದ ಕ್ರಮದಲ್ಲಿ ಇಂದಿನ ವ್ಯವಸ್ಥೆಗೆ ಶಿಕ್ಷಣ ಪಡೆಯಬೇಕು, ಬದುಕಿನ ಯಶಸ್ಸಿಗೆ ಶಿಕ್ಷಣ ಅವಶ್ಯಕ, ನಮ್ಮ ಆಲೋಚನೆಗಳು ಸಕಾರಾತ್ಮಕವಾಗಿರಬೇಕು , ಇದೇ ಶಾಲೆಯ ಹಳೆಯ ವಿದ್ಯಾರ್ಥಿಯಾದ ನಾನು ಪ್ರೌಢಶಾಲಾ ದಿನಗಳಲ್ಲಿ ಇಲ್ಲಿಯ ಮಹಾನ ಶಿಕ್ಷಕರು ಹೇಳಿದ ರಾಮಾಯಣ ಮಹಾಭಾರತದ ನೀತಿ ಕಥೆಗಳು ನನ್ನ ಭವಿಷ್ಯವನ್ನು ರೂಪಿಸಿದವು ನಿಮ್ಮ ಎಲ್ಲ ರ ಭವಿಷ್ಯ ಕೂಡ ಉಜ್ವ ಲವಾಗಲಿ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿ 2011ರಲ್ಲಿ 10ನೇ ತರಗತಿ ಮುಗಿಸಿ ಇತ್ತೀಚಿಗೆ ಸಹಾಯಕ ಪ್ರಾಧ್ಯಾಪಕರಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಜಿಗೇರಿ ಅಂಕೋಲಕ್ಕೆ ಆಯ್ಕೆಯಾದ ರಾಮಚಂದ್ರ ಅಂಕೋಲೆ ಕರ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಭವಿಷ್ಯ ರೂಪಿಸಿಕೊಳ್ಳಬೇಕಾದ ನಾವುಗಳು ಸತತ ಪ್ರಯತ್ನವನ್ನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಗ್ರಾಮ್ ಪಂಚಾಯತ್ ಅಧ್ಯಕ್ಷರಾದ ಸಣ್ಣು ಗೌಡ ಮಾತನಾಡಿ ವಿದ್ಯಾರ್ಥಿಗಳಾದ ತಮ್ಮಲ್ಲಿ ಆತ್ಮವಿಶ್ವಾಸ ಮತ್ತು ದ್ರ ಡ ನಂಬಿಕೆಯನ್ನು ಮೈಗೂಡಿಸಿಕೊಳ್ಳಬೇಕೆಂದರು . ಆಡಳಿತ ಮಂಡಳಿಯ ಸದಸ್ಯರಾದ ಜೋತ್ಸ್ನ್ ಕಾಗಲ್ ಮಾತನಾಡಿ ವಿದ್ಯಾರ್ಥಿಗಳು ನಾವು ಶ್ರಮಪಟ್ಟು ಓದಬೇಕು ಹೆಚ್ಚು ಸಾಧನೆ ಮಾಡಬೇಕೆಂದರು. ನಗದು ಬಹುಮಾನ ಯಾದಿಯನ್ನು ಸಹ ಶಿಕ್ಷಕರಾದ ಡಿಕೆ ಗೌಡ, ಸಾಂಸ್ಕೃತಿಕ ಬಹುಮಾನ ಯಾದಿಯನ್ನು ಸಹ ಶಿಕ್ಷಕರಾದ ಗಾಯತ್ರಿ ಚಿತ್ತಾಲ್, ಕ್ರೀಡಾ ಬಹುಮಾನ ಯಾದಿಯನ್ನು ದೈಹಿಕ ಶಿಕ್ಷಕರಾದ ದಯಾನಂದ್ ಗೌಡ ವಾಚಿಸಿದರು. ವೇದಿಕೆ ಮೇಲೆ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿಗಳಾದ ಶ್ರೀಯುತ ವಿವೇಕ್ ವಿ. ನಾಡ್ಕರ್ಣಿ , ಆಡಳಿತ ಮಂಡಳಿಯ ಸದಸ್ಯರು ನಿವೃತ್ತ ಮುಖ್ಯಾದ್ಯಪಕರಾದ ಬಿ . ವಿ.ನಾಯಕ್ , ನಿವೃತ್ತ ಶಿಕ್ಷಕರಾದಎನ.ವಿ.ಜನ್ನು ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಭಾರತಿ ನಾಯಕ್ ಉಪಸ್ಥಿತರಿದ್ದರು. ಸರ್ವರನ್ನು ಸಹ ಶಿಕ್ಷಕರಾದ ಸಿದ್ದರಾಮಪ್ಪ ಬಟಕುರ್ಕಿ ವಂದಿಸಿದರು. ಸಹ ಶಿಕ್ಷಕರದ ಗಿರೀಶ್ ಹೆಬ್ಬಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಲಘುಮನಂಜನ ಕಾರ್ಯಕ್ರಮ ನಡೆಯಿತು. ಸುತ್ತಮುತ್ತಲಿನ ಪಾಲಕರು ಪೋಷಕರು, ಊರ ನಾಗರಿಕರು ಕಾರ್ಯಕ್ರಮವನ್ನು ಕಣ್ತುಂಬಿ ಕೊಂಡರು.
