ಸಿದ್ದರಾಮೇಶ್ವರ ಭವನ ನಿರ್ಮಾಣಕ್ಕೆ ಭೋವಿ ಸಮಾಜ ಸಂಕಲ್ಪ
ಕಾಳಗಿ:ತಾಲೂಕಿನಾದ್ಯಂತ ಮಂಗಳವಾರ ಸಡಗರ ಸಂಭ್ರಮದಿಂದ ಸಿದ್ದರಾಮೇಶ್ವರ ಜಯಂತಿ ಆಚರಣೆ ಮಾಡಲಾಯಿತು.ಇಲ್ಲಿಯ ರಾಮನಗರದಲ್ಲಿ ಭೋವಿ ಸಮಾಜದ ಪ್ರಮುಖ ಮುಖಂಡರ ನೇತೃತ್ವದಲ್ಲಿ ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಪುಜಿಸಿ, ಪುಸ್ಪನಮನಗೈದು ಅರ್ಥಪೂರ್ಣವಾಗಿ ಜಯಂತಿ ಆಚರಣೆ ಮಾಡಿದರು.ಭೋವಿ ಸಮಾಜದಿಂದ ಭವನ ನಿರ್ಮಾಣದ ಸಂಕಲ್ಪ: ಸಿದ್ದರಾಮೇಶ್ವರ ಜಯಂತೋತ್ಸವ ನಿಮಿತ್ಯವಾಗಿ ಮಾತನಾಡಿರುವ ಭೋವಿ ಸಮಾಜದ ಕಾಳಗಿ ತಾಲೂಕಾಧ್ಯಕ್ಷ ಲಕ್ಷ್ಮಣ ಭೋವಿ ಅಪಾರವಾದ ಭಕ್ತಿ ನಿಷ್ಠರಾಗಿರುವ ಕರ್ಮಯೋಗಿ ಸಿದ್ದರಾಮೇಶ್ವರರು ತಮ್ಮ ಕಾಯಕ ನಿಷ್ಠೆಯಿಂದ ಶಿವಯೋಗಿಗಳಾದರು.ಸಿದ್ದರಾಮರು ಹಾಕಿಕೊಟ್ಟ ಮಾರ್ಗ ನಮ್ಮೇಲ್ಲರಿಗೂ ದಾರಿದೀಪ ಎಂದರು. ಅವರ ಪ್ರೇರಣೆಯೇ ನಮಗೆ ಶಕ್ತಿ. ಕಾರಣ ಕಾಳಗಿ ತಾಲೂಕು ಕೇಂದ್ರದಲ್ಲಿ ಭವ್ಯವಾದ ಸಿದ್ದರಾಮೇಶ್ವರರ ತಾಲೂಕು ಭವನ ನಿರ್ಮಾಣಕ್ಕಾಗಿ ಸಂಕ್ರಮಣ ಪುಣ್ಯಕಾಲದಂದೇ ನಾವೇಲ್ಲರೂ ಸಂಕಲ್ಪ ಮಾಡೋಣವೆಂದರು.ನಿವೇಶನ ನಿಡಲು ತಹಸೀಲ್ದಾರ ಭರವಸೆಇಲ್ಲಿಯ ತಾಲೂಕು ಆಡಳಿತದಿಂದ ಸಿದ್ದರಾಮೇಶ್ವರರ ಜಯಂತಿ ಆಚರಣೆ ಮಾಡಿರುವ ಗ್ರೇಡ್-1ತಹಸೀಲ್ದಾರ ಘಮವತಿ ರಾಠೋಡ ಅವರು, ಸಿದ್ದರಾಮೇಶ್ವರರ ಸುಂದರವಾದ ತಾಲ್ಲೂಕು ಭವನ ನಿರ್ಮಾಣಕ್ಕಾಗಿ ಸೂಕ್ತ ವಾದ ನಿವೇಶನ ನೀಡುವುದಾಗಿ ಭರವಸೆ ನೀಡಿದರು.ಪಟ್ಟಣ ಪಂಚಾಯತಿಯಲ್ಲಿ ಮುಖ್ಯಾಧೀಕಾರಿ ಪಂಕಜಾ ಎ ಅವರ ನೇತೃತ್ವದಲ್ಲಿ ಸಿದ್ದರಾಮೇಶ್ವರ ಜಯಂತಿ ಆಚರಿಸಲಾಯಿತು. ಪಟ್ಟಣ ಪಂಚಾಯತ್ ಸಿಬ್ಬಂದಿ ದತ್ತು ಗುತ್ತೆದಾರ,ಆನಂದ ಕಾಶಿ,ಸಾವಿತ್ರಿ ಒಡೆಯರಾಜ,ಕಾಳೇಶ್ವರ ಮಡಿವಾಳ,ಉದಯ ಶಿಂಗಶೇಟ್ಟಿ,ಕಾಳಗಿ ತಾಲೂಕು ಗೌರವ ಅಧ್ಯಕ್ಷ ಹಣಮಂತ ಒಡೆಯರಾಜ ಭೋವಿ ಸಮಾಜದ ಅಧ್ಯಕ್ಷ ಲಕ್ಷ್ಮಣ ಭೋವಿ,ರಾಜು ಒಡೆಯರಾಜ,ನಗರ ಅಧ್ಯಕ್ಷ ಶರಣಪ್ಪ ಬೇಲೂರು, ಬಲರಾಮ ವಲ್ಯಾಪುರೆ, ಭೀಮಣ್ಣ ದಂಡಗುಲ್ಕರ,ಭೀಮಯ್ಯ ಬೆಲೋರ,ಭಿಮಯ್ಯ ಜಾಧವ್, ನಾಗಶೇಟ್ಟಿ ಜಾಧವ್ , ಶಂಕರ್ ರಾಜಾಪುರ, ಗ್ರೇಡ್-1 ತಹಸೀಲ್ದಾರ ಘಮವತಿ ರಾಠೋಡ ಕಾಳಗಿ ಪಿ ಎಸ್ ಐ ತಿಮ್ಮಯ್ಯ ಬಿಕೆ, ಪಪಂ.ಮುಖ್ಯಾಧಿಕಾರಿ ಪಂಕಜಾ ಎ, ಗ್ರಾಪಂ.ಮಾಜಿ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ, ಮಾತನಾಡಿದರು. ಪಟ್ಟಣ ಪಂಚಾಯತ ಮಾಜಿ ಸದಸ್ಯ ಪ್ರಶಾಂತ ಕದಂ,ಸಂತೋಷ ನರನಾಳ,ರೇವಣಸಿದ್ದಪ್ಪ ಪೂಜಾರಿ ಸೇರಿದಂತೆ ಅನೇಕ ಉಪಸ್ಥಿತರಿದ್ದರು.
